ಬೆಂಗಳೂರು: ‘ನಮ್ಮ ಮನಸ್ಸನ್ನು ನಾವೇ ನಿಯಂತ್ರಿಸಬೇಕು ಮತ್ತು ಬಾಹ್ಯ ಸಂಗತಿಗಳು ಅದನ್ನು ಪ್ರಭಾವಿಸದಂತೆ ಹೇಗೆ ಬದುಕಬೇಕು ಎಂಬುದನ್ನು ಕಲಿಸಿಕೊಡುವ ಕೆಲಸವನ್ನು ಆರ್ಟ್ ಆಫ್ ಲಿವಿಂಗ್ ಮಾಡುತ್ತಿದೆ’ ಎಂದು ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹೇಳಿದರು.

ಆರ್ಟ್ ಆಫ್ ಲಿವಿಂಗ್ನ 45ನೇ ವಾರ್ಷಿಕೋತ್ಸವದಲ್ಲಿ ಶುಕ್ರವಾರ ಅವರು ಭಾಗಿಯಾಗಿದ್ದರು.

‘ಜೀವನದ ಪ್ರತಿಕ್ಷಣವೂ ನಮ್ಮೆದುರು ಹೊಸ ಸಂಘರ್ಷವನ್ನು ತಂದೊಡ್ಡುತ್ತದೆ. ಅವುಗಳಿಂದ ಪ್ರಭಾವಿತರಾಗದೆ, ನಮ್ಮ ಗುರಿಯೆಡೆ ಸಾಗಬೇಕು. ಯೋಗ, ಧ್ಯಾನ, ಸಮಾಜ ಸೇವೆ, ಆಯುರ್ವೇದ, ಸಾವಯವ ಕೃಷಿ, ಪರಿಸರ ಸಂರಕ್ಷಣೆಯು ನಮ್ಮ ಗುರಿಯೆಡೆಗೆ ಸಾಗುವ ಮಾರ್ಗಗಳು. ಅದನ್ನು ಆರ್ಟ್ ಆಫ್ ಲಿವಿಂಗ್ ಮೂಲಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ತೋರಿಸಿಕೊಟ್ಟಿದ್ದಾರೆ’ ಎಂದರು.

‘ಮನುಷ್ಯ ಸದಾ ಹೊಸತನ್ನು ಕಲಿಯಬೇಕು. ಆಧುನಿಕತೆಯನ್ನು ಬರಮಾಡಿಕೊಳ್ಳಬೇಕು. ಹಾಗೆಂದ ಮಾತ್ರಕ್ಕೆ ನಮ್ಮ ಪರಂಪರೆ ಮತ್ತು ಸಂಪ್ರದಾಯಗಳನ್ನು ಮರೆಯಬಾರದು. ನಮ್ಮ ಪರಂಪರೆಯಲ್ಲಿರುವ ಒಳಿತನ್ನು ಉಳಿಸಿಕೊಂಡು, ಆಧುನಿಕತೆಯ ಒಳಿತುಗಳನ್ನು ಒಳಗೊಳ್ಳಬೇಕು. ಅಂತಹ ಜೀವನಮಾರ್ಗವನ್ನು ಆರ್ಟ್ ಆಫ್ ಲಿವಿಂಗ್ ತೋರಿಸಿಕೊಟ್ಟಿದೆ. ಇದು ಅನುಕರಣಯೋಗ್ಯ’ ಎಂದರು.

‘ನಾವು ನಮ್ಮ ಬದುಕಿನ ಪ್ರತಿಕ್ಷಣವನ್ನೂ ಜೀವಿಸಬೇಕು. ನಮ್ಮ ಬದುಕನ್ನು ಇತರರಿಗಾಗಿ, ಸಮಾಜ ಸೇವೆಗಾಗಿ, ದೇಶಕ್ಕಾಗಿ, ಮಾನವತೆಗಾಗಿ ಸಮರ್ಪಿಸಿಕೊಳ್ಳಬೇಕು. ಇಡೀ ಜಗತ್ತನ್ನೇ ನಮ್ಮ ಕುಟುಂಬ ಎಂದು ಭಾವಿಸಬೇಕು’ ಎಂದು ಹೇಳಿದರು.

ಆರ್ಟ್ ಆಫ್ ಲಿವಿಂಗ್ ತನ್ನ 45ನೇ ವಾರ್ಷಿಕೋತ್ಸವದ ಭಾಗವಾಗಿ ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಮೇ 16ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಾರ್ಷಿಕೋತ್ಸವ ಉದ್ಘಾಟನೆಯ ಜತೆಗೆ, ಆರ್ಟ್ ಆಫ್ ಲಿವಿಂಗ್ನ ನೂತನ ಧ್ಯಾನ ಮಂದಿರವನ್ನು ಲೋಕಾರ್ಪಣೆ ಮಾಡಿದ್ದರು. ಇದೇ 31ರವರೆಗೆ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಆರ್ಟ್ ಆಫ್ ಲಿವಿಂಗ್ನ ಅನುಯಾಯಿಗಳು ಭಾಗಿಯಾಗಲಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-51-88110580

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.