ಬೆಂಗಳೂರು: ಚಿಕ್ಕಬಾಣಾವರದ ಅಬ್ಬಿಗೆರೆ ಮುಖ್ಯರಸ್ತೆಯ ಮೀನಾ ಬಾರ್ ಎದುರು ಭಾನುವಾರ ತಡರಾತ್ರಿ ನಡೆದ ಗಲಾಟೆಯಲ್ಲಿ ಆಟೊ ಚಾಲಕ, ರಜಾಕ್ಸಾಬ್ ಪಾಳ್ಯದ ಸೈಯದ್ ಶಫಿ (36) ಅವರನ್ನು ದುಷ್ಕರ್ಮಿಯೊಬ್ಬ ಡ್ರಾಗರ್ನಿಂದ ಇರಿದು ಕೊಲೆ ಮಾಡಿದ್ದಾನೆ.

ದರ್ಶನ್ ಅಲಿಯಾಸ್ ‘ದಾಸ’ ತನ್ನ ಸ್ನೇಹಿತರ ಜತೆಗೆ ಪಾರ್ಟಿ ಮಾಡಲು ಬಾರ್ಗೆ ಭಾನುವಾರ ರಾತ್ರಿ ಬಂದಿದ್ದ. ಬಾರ್ ಬಾಗಿಲು ಮುಚ್ಚಿದ ಮೇಲೆ ಎಲ್ಲರೂ ಹೊರಕ್ಕೆ ಬಂದಿದ್ದರು. ಹೊರಗೆ ಬಂದ ದರ್ಶನ್ ಹಾಗೂ ಸಹಚರರು ಮೂತ್ರ ವಿಸರ್ಜನೆ ಮಾಡಲು ರಸ್ತೆಬದಿಗೆ ತೆರಳಿದ್ದರು. ಅಲ್ಲೇ ಪಕ್ಕದಲ್ಲಿ ಆಟೊದಲ್ಲಿ ಇಬ್ಬರು ವ್ಯಕ್ತಿಗಳು ಕುಳಿತಿದ್ದರು. ಆಟೊದಲ್ಲಿ ಕುಳಿತಿದ್ದ ಶಫಿ ಅವರು ‘ಏನೋ ನನ್ನನ್ನು ಗುರಾಯಿಸುತ್ತಿದ್ದೀಯಾ’ ಎಂದು ದರ್ಶನ್ ಅವರನ್ನು ಪ್ರಶ್ನಿಸಿದ್ದರು. ಆಗ ಶಫಿ ಹಾಗೂ ದರ್ಶನ್ ನಡುವೆ ಗಲಾಟೆ ನಡೆದಿತ್ತು. ನಂತರ, ದರ್ಶನ್ ಡ್ರಾಗರ್ ತೆಗೆದು ಸೈಯದ್ ಶಫಿ ಅವರ ಕುತ್ತಿಗೆಯ ಬಳಿ ಚುಚ್ಚಿದ್ದ. ರಕ್ತದ ಮಡುವಿನಲ್ಲಿ ಬಿದಿದ್ದ ಸೈಯದ್ ಶಫಿ ಸ್ಥಳದಲ್ಲೇ ಮೃತಪಟ್ಟರು. ಆಟೊದಲ್ಲಿದ್ದ ಮತ್ತೊಬ್ಬ ವ್ಯಕ್ತಿ ಓಡಿಹೋಗಿ ಪಾರಾಗಿದ್ದಾನೆ ಎಂದು ಮೂಲಗಳು ಹೇಳಿವೆ.

ಶಫಿ ಅವರ ಚಿಕ್ಕಮ್ಮನ ಮಗ ಮೊಹಮ್ಮದ್ ನಯಾಜ್ ನೀಡಿರುವ ದೂರು ಆಧರಿಸಿ ಚಿಕ್ಕಬಾಣಾವರ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳ ಬಂಧನಕ್ಕೆ ತೀವ್ರ ಶೋಧ ಕೈಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.