ಬೆಂಗಳೂರು: ನಗರದಲ್ಲಿರುವ ‘ಬಿ’ ಖಾತಾ ಆಸ್ತಿಗಳನ್ನು ‘ಎ’ ಖಾತಾವನ್ನಾಗಿ ಮಾಡಿಸಿಕೊಳ್ಳುವವರಿಗೆ ಆಸ್ತಿಯ ಮಾರ್ಗಸೂಚಿ ಮೌಲ್ಯದ ಶೇ 5ರ ಬದಲು ಶೇ 2ರಷ್ಟು ಹಣ ಪಾವತಿಸುವ ವಿಶೇಷ ರಿಯಾಯಿತಿ ದೊರೆಯಲಿದೆ. ಇದು ಸರ್ಕಾರದ ಆರನೇ ಗ್ಯಾರಂಟಿ– ಭೂ ಗ್ಯಾರಂಟಿ’ ಎಂದು ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಈ ಯೋಜನೆಯ ಜಾರಿಗಾಗಿ ‘ನನ್ನ ಖಾತಾ ನನ್ನ ಹಕ್ಕು’ ಅಭಿಯಾನವನ್ನು ನಗರದ 50 ಸ್ಥಳಗಳಲ್ಲಿ ಮೂರು ತಿಂಗಳು (ಸುಮಾರು ನೂರು ದಿನ) ಪ್ರತಿ ಶನಿವಾರ ನಡೆಸಲಾಗುವುದು ಎಂದು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ನಗರದಲ್ಲಿ 23 ಲಕ್ಷ ಮನೆಗಳಿವೆ. ಅದರಲ್ಲಿ 16 ಲಕ್ಷ ಆಸ್ತಿಗಳು ‘ಎ’ ಖಾತಾ ಹೊಂದಿವೆ. 7 ಲಕ್ಷ ಆಸ್ತಿಗಳು ‘ಬಿ’ ಖಾತೆಯಲ್ಲಿವೆ. ಮಾರ್ಗಸೂಚಿ ಮೌಲ್ಯ ಶೇ 5ರಷ್ಟು (ಒಟ್ಟು ಆಸ್ತಿ ಮೌಲ್ಯದ ಶೇ 5) ಕಟ್ಟಿ ‘ಎ’ ಖಾತೆಯಾಗಿ ಪರಿವರ್ತನೆ ಮಾಡಲು ಹಿಂದೆ ಅವಕಾಶ ನೀಡಲಾಗಿತ್ತು. ಕೇವಲ 11 ಸಾವಿರ ಜನರು ಅರ್ಜಿ ಸಲ್ಲಿಸಿದ್ದು, 5 ಸಾವಿರ ಆಸ್ತಿಗಳಿಗೆ ‘ಎ’ ಖಾತೆ ಮಾಡಿ|ಕೊಡಲಾಗಿದೆ. ದಾಖಲೆಗಳು ಸರಿ ಇದ್ದರೆ,ಕೂಡಲೇ ಅರ್ಜಿ ಸಲ್ಲಿಸಿ ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ವಿಶೇಷ ರಿಯಾಯಿತಿಯ ಅವಧಿ ಮುಗಿದ ಬಳಿಕವಾದರೆ ಶೇ 5 ಪಾವತಿ ಮಾಡಬೇಕಾಗುತ್ತದೆ. ಇಲ್ಲದೇ ಇದ್ದರೆ ‘ಬಿ’ ಖಾತೆಯೇ ಮುಂದುವರಿಯಲಿದ್ದು, ಮಾರಾಟ ಮಾಡಲಾಗಲಿ, ಇನ್ನಿತರ ಸೌಲಭ್ಯ ಪಡೆಯಲಾಗಲಿ ಸಾಧ್ಯವಾಗುವುದಿಲ್ಲ’ ಎಂದರು.

ಇ–ಖಾತಾ: ‘5 ನಗರ ಪಾಲಿಕೆಗಳ ಆಸ್ತಿ ಮಾಲೀಕರಿಗೆ ಭೂ ದಾಖಲೆಗಳ ಸುರಕ್ಷತೆ, ವಂಚನೆಯಿಂದ ತಪ್ಪಿಸಿಕೊಳ್ಳಲು ದೇಶದಲ್ಲಿಯೇ ಮೊದಲಬಾರಿಗೆ ಇ-ಖಾತಾ ಪರಿಚಯಿಸಿದ ಕೀರ್ತಿ ಕರ್ನಾಟಕ ಸರ್ಕಾರಕ್ಕೆ ಸಲ್ಲುತ್ತದೆ. ಈಗಾಗಲೇ 7000ಕ್ಕೂ ಅಧಿಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣ ಮಾಡಲಾಗಿದೆ. ಅಭಿಯಾನದ ಸಂದರ್ಭದಲ್ಲಿ ಅರ್ಜಿ ಸಲ್ಲಿಸಿ, ದಾಖಲೆಗಳನ್ನು ನೀಡಿದರೆ ಮನೆ ಬಾಗಿಲಿಗೆ ಇ–ಖಾತಾ ತಲುಪಿಸಲಾಗುವುದು ಎಂದರು.

ಅಭಿಯಾನದ ಸಂದರ್ಭದಲ್ಲಿ ರಜೆಗಳಿದ್ದರೂ ಅಧಿಕಾರಿಗಳು, ನೌಕರರು ಕೆಲಸ ಮಾಡಬೇಕು. ಅವರಿಗೆ ಬೇರೆ ದಿವಸ ರಜೆ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಲಾಗುವುದು ಎಂದರು.

ವಿನಾಯಿತಿ ಮಿತಿ ಶೇ 15ಕ್ಕೆ ಹೆಚ್ಚಳ: ‘ಕಟ್ಟಡ ನಿಯಮ ಉಲ್ಲಂಘನೆ ವಿನಾಯಿತಿ ಮಿತಿಯನ್ನು (ಎತ್ತರ, ಎಫ್ಎಆರ್, ಸೆಟ್ ಬ್ಯಾಕ್) ಶೇ 5ರ ಬದಲಾಗಿ ಶೇ 15ಕ್ಕೆ ಹೆಚ್ಚಿಸಲಾಗಿದೆ. ಶೇ15 ರಷ್ಟು ಪ್ರಮಾಣದ ಉಲ್ಲಂಘನೆಗಳಿಗೆ ದಂಡ ಪಾವತಿಸಿಕೊಂಡು ಸ್ವಾಧೀನಾನುಭವ ಪ್ರಮಾಣ ಪತ್ರ ನೀಡಲು ಒಪ್ಪಿಗೆ ನೀಡಲಾಗಿದೆ. ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯದ ಕಟ್ಟಡಗಳಿಗೆ ವಿದ್ಯುತ್ ಹಾಗೂ ನೀರು ಸರಬರಾಜು ಸೌಕರ್ಯ ಒದಗಿಸಬಾರದೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಶೇ 15ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉಲ್ಲಂಘನೆ ಮಾಡಿರುವ ಪ್ರಕರಣಗಳ ಸಮಸ್ಯೆ ನಿವಾರಿಸಲು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗುವುದು’ ಎಂದು ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದರು.

‘ನಾವು ಅಕ್ರಮ–ಸಕ್ರಮ ಮಾಡುತ್ತಿಲ್ಲ. ಭೂಮಿಗೆ ತೀವ್ರ ಬೇಡಿಕೆ ಬಂದಿದೆ. ಇದರಿಂದಾಗಿ 20/30, 30/40, 40/60 ಅಳತೆಯ ನಿವೇಶನಗಳಲ್ಲಿ ಮನೆ ಕಟ್ಟಿಕೊಂಡವರಿಗಷ್ಟೇ ಈ ವಿನಾಯಿತಿ ನೀಡುತ್ತಿದ್ದೇವೆ. ದೊಡ್ಡ ನಿವೇಶನದಾರರಿಗಲ್ಲ’ ಎಂದರು.

‘ಬಿಡಿಎ ಬಡಾವಣೆಗಳಲ್ಲಿ 1 ಲಕ್ಷಕ್ಕೂ ಅಧಿಕ ಮನೆಗಳನ್ನು ಜನರು ಕಟ್ಟಿಕೊಂಡಿದ್ದರು. ಅವರಿಗೆ ಸ್ವಾಧೀನಾನುಭವ ಪ್ರಮಾಣಪತ್ರ ನೀಡಲು 2020 ರಲ್ಲಿ ಬಿಜೆಪಿ ಸರ್ಕಾರ 38 ‘ಡಿ’ ಕಾನೂನು ಜಾರಿಗೆ ತಂದಿತ್ತು. 600 ಅಡಿವರೆಗೆ ಶೇ 10 ರಷ್ಟು, 600 ರಿಂದ 900 ಅಡಿವರೆಗೆ ಶೇ 25 ರಷ್ಟು, 1200 ರಿಂದ 2400 ವರೆಗೆ ಶೇ 40 ರಷ್ಟು, 2400 ರಿಂದ 4000 ಅಡಿವರೆಗೆ ಶೇ 50 ರಷ್ಟು ಮಾರ್ಗಸೂಚಿ ಮೌಲ್ಯ ಕಟ್ಟಿ ಪ್ರಮಾಣಪತ್ರ ಪಡೆಯಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಶುಲ್ಕ ಹೆಚ್ಚಾಯಿತು ಎಂಬ ಕಾರಣಕ್ಕೆ ಬಹುತೇಕರು ಅರ್ಜಿ ಸಲ್ಲಿಸಿರಲಿಲ್ಲ. 570 ಅರ್ಜಿಗಳಷ್ಟೇ ಬಂದಿದ್ದವು’ ಎಂದು ಹೇಳಿದರು.

ಈಗ ಅರ್ಜಿ ಹಾಕಲು ಜೂನ್ 15 ರಿಂದ ಒಟ್ಟು ಮೂರು ತಿಂಗಳ ಕಾಲ ಅವಕಾಶ ಕಲ್ಪಿಸಿಕೊಡಲಾಗುವುದು. ಒಟಿಎಸ್ ಜಾರಿ ಮಾಡಲಾಗುವುದು. ಮೊದಲ ಮೂರು ತಿಂಗಳು ಅರ್ಜಿ ಸಲ್ಲಿಸಲು, ಆ ನಂತರದ ಮೂರು ತಿಂಗಳು ಅರ್ಜಿ ಪರಿಶೀಲನೆಗೆ ಹಾಗೂ ಬಳಿಕ ಆರು ತಿಂಗಳು ಶುಲ್ಕ ಪಾವತಿಗೆ ಅವಕಾಶ ನೀಡಲಾಗುವುದು. 1 ವರ್ಷ ಕಾಲಮಿತಿಯೊಳಗೆ ಅಂದರೆ 2027ರ ಜೂನ್ಗೆ ಈ ಯೋಜನೆ ಮುಕ್ತಾಯಗೊಳಿಸಲಾಗವುದು ಎಂದರು.

ಈ ಮೂರು ತಿಂಗಳ ಒಳಗೆ ಅರ್ಜಿ ಸಲ್ಲಿಸಿದವರು ಶೇ 10ರ ಬದಲು ಶೇ 5 ರಷ್ಟು ಮಾತ್ರ ಪಾವತಿ ಮಾಡಬಹುದು. ಅವರಿಗೆ ಶೇ 50 ರಷ್ಟು ರಿಯಾಯಿತಿ ದೊರೆಯಲಿದೆ. ಈ ಬಗ್ಗೆ ಮುಖ್ಯಮಂತ್ರಿ, ಇತರ ಸಚಿವರೊಂದಿಗೆ ಚರ್ಚೆ ನಡೆಸಲಾಗಿದೆ’ ಎಂದು ಹೇಳಿದರು.

‘ಈ ಯೋಜನೆಯ ಸೌಲಭ್ಯ ಬಳಸಿಕೊಳ್ಳದೇ ಇದ್ದರೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಈಗಾಗಲೇ ಬಿಡಿಎ 2 ಸಾವಿರ ಕೋಟಿ ಮೌಲ್ಯದ ಆಸ್ತಿಗಳನ್ನು ವಶಕ್ಕೆ ಪಡೆದಿದೆ’ ಎಂದರು.

ಶಿವರಾಮ ಕಾರಂತ ಬಡಾವಣೆ: 18 ಸಾವಿರ ನಿವೇಶನ ಹಂಚಿಕೆ

ಶಿವರಾಮ ಕಾರಂತ ಬಡಾವಣೆಗೆ 3,052 ಭೂ ಮಾಲೀಕರು ಆಸ್ತಿಯನ್ನು ನೀಡಿದ್ದರು. ಹಲವು ಆಸ್ತಿ ಮಾಲೀಕರು ಬೇರೆಯವರಿಗೆ ಆಸ್ತಿ ಮಾರಾಟ ಮಾಡಿದ್ದು ಸೇರಿದಂತೆ ಅನೇಕ ತೊಡಕುಗಳಿದ್ದವು. ಈಗ ನ್ಯಾಯಾಲಯದ ಅನುಮತಿ ಪಡೆದು 18 ಸಾವಿರ ನಿವೇಶನಗಳನ್ನು ಭೂ ಮಾಲೀಕರಿಗೆ ನೀಡಲಾಗುತ್ತಿದೆ. ಮೇ 15ನೇ ತಾರೀಕಿನಿಂದಲೇ ನಿವೇಶನ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಕೇಂದ್ರಿಯ ಇ– ಗವರ್ನೆನ್ಸ್ನಿಂದ ಸಾಫ್ಟವೇರ್ ಅಭಿವೃದ್ಧಿಪಡಿಸಿ ಅದರ ಮೂಲಕ ಹಂಚಿಕೆ ವ್ಯವಸ್ಥೆ ಮಾಡಲಾಗಿದೆ’ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

‘1 ಎಕರೆ ಅಥವಾ ಹೆಚ್ಚು ಜಮೀನು ಹೊಂದಿದ್ದ ಮಾಲೀಕರಿಗೆ ಪ್ರತ್ಯೇಕ ಅವಕಾಶ ಕಲ್ಪಿಸಲಾಗಿದೆ. ಒಂದೇ ಜಾಗದಲ್ಲಿ ದೊಡ್ಡ ನಿವೇಶನ ಬೇಕು ಎಂದವರಿಗೂ ಅವಕಾಶ ನೀಡುತ್ತೇವೆ ಎಂದು ಹೇಳಿದ್ದೆವು. ಇದಕ್ಕೆ 7 ಜನರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ. 1 ಎಕರೆ ಜಮೀನು ಇದ್ದರೆ ಒಂದೇ ಜಾಗದಲ್ಲಿ 9,583 ಚದರ ಅಡಿ ಜಾಗ ನೀಡಲಾಗುವುದು. ಎತ್ತರದ ಕಟ್ಟಡಗಳಿಗೆ ಅವಕಾಶ ಮಾಡಿಕೊಡಲು ಈ ರೀತಿ ಅನುಕೂಲ ಕಲ್ಪಿಸಲಾಗಿದೆ’ ಎಂದು ವಿವರಿಸಿದರು.

‘ಬಿಸಿನೆಸ್ ಕಾರಿಡಾರ್ ಜಮೀನು ಡಿನೋಟಿಫಿಕೇಶನ್ ಇಲ್ಲ’

ಬಿಸಿನೆಸ್ ಕಾರಿಡಾರ್ಗೆ ಜಮೀನು ನೀಡಿದವರಿಗೆ ದುಪ್ಪಟ್ಟು ಪರಿಹಾರ ನೀಡಲಾಗುವುದು. ಯಾವುದೇ ಕಾರಣಕ್ಕೆ ಡಿನೋಟಿಫಿಕೇಶನ್ ಮಾಡುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಬಿಸಿನೆಸ್ ಕಾರಿಡಾರ್ನ ಮೊದಲನೇ ಹಂತಕ್ಕೆ ಶೇ 80ರಷ್ಟು ಜನರು ಒಪ್ಪಿಗೆ ನೀಡಿದ್ದಾರೆ. ಎರಡನೇ ಹಂತಕ್ಕೆ ನೋಟಿಫಿಕೇಷನ್ ಮಾಡಲಾಗಿದೆ. ಜಮೀನು ನೀಡಲು ರೈತರೂ ಮುಂದೆ ಬರುತ್ತಿದ್ದಾರೆ ಎಂದು ಹೇಳಿದರು.

ಹೊಸೂರು ರಸ್ತೆಯಿಂದ ಮೈಸೂರು ರಸ್ತೆಯವರೆಗೂ 33 ಕಿ.ಮೀ ಬೆಂಗಳೂರು ಬಿಸಿನೆಸ್ ಕಾರಿಡಾರ್ ಅನ್ನು ಬೆಂಗಳೂರು ದಕ್ಷಿಣದಲ್ಲಿ ನಿರ್ಮಾಣ ಮಾಡಲಾಗುವುದು. ದುಪ್ಪಟ್ಟು ಪರಿಹಾರ ನೀಡಲು ಅವಕಾಶ ಇಲ್ಲದಿದ್ದರೂ ನಾನು ಸಚಿವ ಸಂಪುಟ ಸಭೆ ಮುಂದಿಟ್ಟು, ನೀಡುತ್ತಿದ್ದೇವೆ. ಟಿಡಿಆರ್, ರಸ್ತೆ ಪಕ್ಕದಲ್ಲೇ ಶೇ 35ರಷ್ಟು ವಾಣಿಜ್ಯ ಭೂಮಿ, ಎಫ್ಎಆರ್, ವಸತಿ ಪ್ರದೇಶದಲ್ಲಿ ಶೇ 40ರಷ್ಟು ಭೂಮಿ ಸೇರಿದಂತೆ ಅನೇಕ ಅವಕಾಶ ನೀಡುತ್ತಿದ್ದೇವೆ. ಈ ರೀತಿ ಪರಿಹಾರವನ್ನು ಇಡೀ ದೇಶದಲ್ಲಿ ಎಲ್ಲೂ ನೀಡಿಲ್ಲ. ಮುಂಬೈಯಲ್ಲಿ ಜಮೀನು ಸ್ವಾಧೀನಕ್ಕೆ ಶೇ 12.5 ಮಾತ್ರ ಪರಿಹಾರ ನೀಡಿದ್ದಾರೆ’ ಎಂದರು.

ಬಿಡಿಎಗೆ 50 ವರ್ಷ ತುಂಬಿದೆ. ಇದರ ನೆನಪಿಗೆ ಜೂನ್ 27ರಂದು ಕೆಂಪೇಗೌಡ ಜಯಂತಿ ದಿನ ‘ಗ್ರೀನ್ ಬೆಂಗಳೂರು’ ಕಾರ್ಯಕ್ರಮದ ಮೂಲಕ ಒಂದೇ ದಿನ
15 ಲಕ್ಷ ಸಸಿಗಳನ್ನು ನೆಡಲಾಗುವುದು
ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-4-8446884

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.