30 x 40 ಅಡಿ ನಿವೇಶನಕ್ಕೆ ₹1 ಲಕ್ಷ
ಜಿಬಿಎ ವ್ಯಾಪ್ತಿಯಲ್ಲಿನ 30 x 40 ಅಡಿ ಬಿ ಖಾತಾ ನಿವೇಶನಕ್ಕೆ ಎ ಖಾತಾ ಪಡೆಯಲು ಸುಮಾರು ₹1 ಲಕ್ಷ ವೆಚ್ಚವಾಗುತ್ತದೆ. ಮಾರ್ಗಸೂಚಿ ದರ ಪ್ರತಿ ಚದರಡಿಗೆ ₹3000 ಇದ್ದರೆ ₹72 ಸಾವಿರ ಶುಲ್ಕ ಪಾವತಿಸಬೇಕಾಗುತ್ತದೆ. ಇದರ ಜೊತೆಗೆ ಪರಿವರ್ತನಾ ಶುಲ್ಕ ಕೆರೆ ಪುನರುಜ್ಜೀವನ ಶುಲ್ಕ ನೀರು ಸರಬರಾಜು ಯೋಜನೆ ಸೆಸ್ ವರ್ತುಲ ರಸ್ತೆ ನಿರ್ಮಾಣದ ಸರ್‌ಚಾರ್ಜ್ ಕೊಳೆಗೇರಿ ಅಭಿವೃದ್ಧಿ ಸೆಸ್ ಮಾಸ್ ರ‍್ಯಾಪಿಡ್ ಟ್ರಾನ್ಸ್‌ಪೋರ್ಟ್ ಸಿಸ್ಟಂ ಸರ್‌ಚಾರ್ಜ್ ಅಭಿವೃದ್ಧಿ ಶುಲ್ಕ ಡಿಸಿ ಪರಿವರ್ತನೆ ಶುಲ್ಕಗಳು ಇರುತ್ತವೆ. ಮಾರ್ಗಸೂಚಿ ದರದ ಅನ್ವಯ ಶುಲ್ಕಗಳು ಬದಲಾಗುತ್ತವೆ.