ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ(ಬಿಬಿಪಿ) ಪ್ರಾಣಿ, ಪಕ್ಷಿಗಳ ದತ್ತು ಪಡೆಯುವುದನ್ನು ಉತ್ತೇಜಿಸಲು ಕೈಗೊಂಡ ಸುಧಾರಣಾ ಕ್ರಮಗಳು ಫಲ ನೀಡುತ್ತಿವೆ. ದತ್ತು ಯೋಜನೆಯಡಿ ಒಂದೇ ವರ್ಷದಲ್ಲಿ ₹30 ಲಕ್ಷಕ್ಕೂ ಹೆಚ್ಚು ಆದಾಯ ಲಭಿಸಿದೆ.

ಜನರಲ್ಲಿ ಪ್ರಾಣಿ, ಪಕ್ಷಿಗಳ ಮೇಲಿನ ಪ್ರೀತಿ ಹೆಚ್ಚಿಸುವ ನಿಟ್ಟಿನಲ್ಲಿ ಉದ್ಯಾನವು ಕೆಲವು ವರ್ಷಗಳ ಹಿಂದೆ ಪ್ರಾಣಿ ದತ್ತು ಯೋಜನೆ ಆರಂಭಿಸಿದೆ. ಹುಲಿ, ಸಿಂಹ, ಚಿರತೆ, ಆನೆ, ಜಿರಾಫೆ ಸಹಿತ ಪ್ರಮುಖ ಪ್ರಾಣಿಗಳು ಮಾತ್ರವಲ್ಲದೇ ಪುಟ್ಟ ಪ್ರಾಣಿ, ಪಕ್ಷಿಗಳನ್ನು ವರ್ಷದ ಮಟ್ಟಿಗೆ ದತ್ತು ಪಡೆಯಲು ಅವಕಾಶ ನೀಡಲಾಗಿತ್ತು.

ಕೋವಿಡ್ ಕಾಲದಲ್ಲಿ ಪ್ರಾಣಿ, ಪಕ್ಷಿಗಳಿಗೆ ಆಹಾರ ಒದಗಿಸಲು ದೇಣಿಗೆಯೂ ಸೇರಿದಂತೆ ದತ್ತು ಯೋಜನೆಯಡಿ ಸುಮಾರು ₹2 ಕೋಟಿ ಆದಾಯ ಲಭಿಸಿತ್ತು. ಆ ನಂತರ ಕಡಿಮೆಯಾಗಿತ್ತು.

ಜೈವಿಕ ಉದ್ಯಾನಕ್ಕೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು, ಬೆಂಗಳೂರಿನಂತಹ ನಗರದಲ್ಲಿ ಪ್ರಮುಖ ಸೆಲೆಬ್ರಿಟಿಗಳು, ವಿವಿಧ ಕ್ಷೇತ್ರದ ಗಣ್ಯರು ಇದ್ದರೂ ಯೋಜನೆಗೆ ನಿರೀಕ್ಷಿತ ಪ್ರತಿಕ್ರಿಯೆ ಬಂದಿರಲಿಲ್ಲ. ಈ ಕಾರಣದಿಂದ ಕಳೆದ ವರ್ಷ ಕೆಲ ನಿಯಮಗಳನ್ನು ಬದಲಿಸಿದ್ದು, ಹೊಸ ಮಾರ್ಗಸೂಚಿಗಳನ್ನು ಬಿಬಿಪಿ ರೂಪಿಸಿದೆ.

ನಟಿ ಸಂಯುಕ್ತ ಹೊರನಾಡು ಅವರು ಸಿಂಚನಾ ಹೆಸರಿನ ಹುಲಿಯನ್ನು ವರ್ಷದ ಅವಧಿಗೆ ₹2 ಲಕ್ಷ ಪಾವತಿಸಿ ದತ್ತು ಪಡೆದಿದ್ದಾರೆ. ಉಳಿದಂತೆ ಉದ್ಯಮ ವಲಯ, ವಿವಿಧ ಸಂಸ್ಥೆಯವರು ದತ್ತು ಪಡೆದುಕೊಂಡಿದ್ದಾರೆ.

ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಮಾದರಿಯಲ್ಲಿಯೇ ದತ್ತು ಯೋಜನೆ ಮತ್ತಷ್ಟು ಜನಪ್ರಿಯಗೊಳಿಸಿಲು ಸೆಲೆಬ್ರೆಟಿಗಳತ್ತ ಗಮನ ಹರಿಸುತ್ತಿದೆ. ಸಾಮಾಜಿಕ ಮಾಧ್ಯಮ ಬಳಸಿಕೊಂಡು ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.

ಮೊದಲು ಒಂದು ವರ್ಷಕ್ಕೆ ದತ್ತು ಪಡೆಯಲು ಇದ್ದ ಅವಕಾಶವನ್ನು ಈಗ ಐದು ವರ್ಷಕ್ಕೆ ವಿಸ್ತರಣೆ ಮಾಡಿದೆ. ಹೊಸ ನೀತಿಯಡಿ 5 ವರ್ಷಗಳವರೆಗೆ ದತ್ತು ಪಡೆಯಲು ಅವಕಾಶವಿದೆ. ಇದಲ್ಲದೇ ನಿಮಗೆ ಇಷ್ಟವಾದ ಪ್ರಾಣಿಗಳಿಗೆ ಹೆಸರಿಡುವ ಅವಕಾಶವನ್ನೂ ಮಾಡಿಕೊಡಲಾಗಿದೆ.

ದತ್ತು ಪಡೆದವರಿಗೆ ಪ್ರಮಾಣಪತ್ರ, ಪ್ರಾಣಿ, ಪಕ್ಷಿ ಮನೆ ಆವರಣದಲ್ಲಿ ದತ್ತು ಪಡೆದವರ ಹೆಸರಿನ ಫಲಕ, 5 ವರ್ಷಗಳವರೆಗೆ ವಾರ್ಷಿಕ 5 ಉಚಿತ ಪ್ರವೇಶ ಪಾಸ್ ಕೂಡ ನೀಡಲಾಗುತ್ತದೆ.

ನಾಲ್ಕು ವರ್ಷ ಬಳಿಕೆ ಚೇತರಿಕೆ: ಕೋವಿಡ್ ಕಾಲದಲ್ಲಿ ಉದ್ಯಾನ ಮೂರ್ನಾಲ್ಕು ತಿಂಗಳು ಬಂದ್ ಆಗಿದ್ದರಿಂದ ಆದಾಯ ಕುಸಿತಗೊಂಡು ಪ್ರಾಣಿ, ಪಕ್ಷಿಗಳಿಗೆ ಆಹಾರ ಒದಗಿಸುವುದು ಕಷ್ಟವಾಗಿತ್ತು. ಆಗ ಹಲವಾರು ಮಂದಿ ದತ್ತು ನೀಡಲು, ಒಂದು ದಿನದ ಆಹಾರ ಒದಗಿಸುವ ಜತೆಗೆ ದೇಣಿಗೆ ನೀಡಲು ಮುಂದೆ ಬಂದರು.

2021–22ರಲ್ಲಿ ಪ್ರತಿ ವರ್ಷ ದತ್ತು ಯೋಜನೆಯಡಿ ಸಂಗ್ರಹವಾಗುವ ಆರ್ಥಿಕ ಸಂಪನ್ಮೂಲದ ಮೂರು ಪಟ್ಟು ಸಂಗ್ರಹವಾಗಿತ್ತು. ಇದರಲ್ಲಿ 770 ಮಂದಿ ಪ್ರಾಣಿ, ಪಕ್ಷಿ ದತ್ತು ಪಡೆದಿದ್ದರಿಂದ ₹1.24 ಕೋಟಿ, ಒಂದು ದಿನದ ಆಹಾರ ಒದಗಿಸುವ ಚಟುವಟಿಕೆಯಡಿ 200 ಮಂದಿ ನೆರವಾಗಿದ್ದರಿಂದ ₹10.52 ಲಕ್ಷ, ದೇಣಿಗೆ ರೂಪದಲ್ಲಿ ₹57.47 ಲಕ್ಷ ಸೇರಿ ಒಟ್ಟು ₹1.92 ಕೋಟಿ ಸಂಗ್ರಹವಾಗಿತ್ತು. ಇದು ಬಿಬಿಪಿ ಇತಿಹಾಸದಲ್ಲಿ ದಾಖಲೆಯಾಗಿದೆ.

‘ಮೂರ್ನಾಲ್ಕು ವರ್ಷದಿಂದ ವಿವಿಧ ಕ್ಷೇತ್ರದವರನ್ನು ಸಂಪರ್ಕಿಸುತ್ತಲೇ ಇದ್ದೇವೆ. ಕೆಲವರು ಆಸಕ್ತಿ ತೋರಿಸುತ್ತಾರೆ. ಹೆಚ್ಚಿನ ಮಂದಿ ದತ್ತು ಪಡೆಯಲು ಮುಂದೆ ಬರುತ್ತಿಲ್ಲ. ಆದರೂ, ಉದ್ಯಾನಕ್ಕೆ ಬರುವ ಪ್ರತಿಯೊಬ್ಬ ವೀಕ್ಷಕರಿಗೂ ಮಾಹಿತಿ ನೀಡಿದರ ಫಲವಾಗಿ ಈ ವರ್ಷ ಆದಾಯ ಹೆಚ್ಚಿದ್ದು, ಮುಂದಿನ ವರ್ಷದಲ್ಲಿ ಏರಿಕೆಯಾಗಿ ಪ್ರಾಣಿ, ಪಕ್ಷಿ ನಿರ್ವಹಣೆಗೆ ಸಹಕಾರಿಯಾಗಲಿದೆ’ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಎ.ವಿ.ಸೂರ್ಯಸೇನ್ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-15-1960776419

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.