ಬೆಂಗಳೂರು: ಪಾಲಿಕೆಯ ಎಂಜಿನಿಯರ್ಗಳು ‘ನಮ್ಮ ವಾರ್ಡ್ ನಮ್ಮ ಹೆಮ್ಮೆ’ ಎಂಬ ಭಾವನೆಯಿಂದ ಸಾರ್ವಜನಿಕ ಹಿತಾಸಕ್ತಿಯೊಂದಿಗೆ ಕೆಲಸ ಮಾಡಬೇಕು ಎಂದು ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ. ಕೆ.ವಿ. ರಾಜೇಂದ್ರ ಸೂಚಿಸಿದರು.

ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ 2026-27ನೇ ಸಾಲಿನ ₹4,732 ಬಜೆಟ್ ಅನ್ನು ಸಮರ್ಪಕ ಹಾಗೂ ಪರಿಣಾಮಕಾರಿ ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಆಯೋಜಿಸಿದ್ದ ‘ಬಜೆಟ್ನಿಂದ ಕ್ರಿಯಾಯೋಜನೆ’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪಾಲಿಕೆಯ ಆಸ್ತಿ ನಿರ್ವಹಣೆಗೆ ಹೆಚ್ಚು ಹಣ ವಿನಿಯೋಗಿಸುವ ಬದಲು, ಅವುಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಯೋಚಿಸಬೇಕು. ಹೂಳೆತ್ತುವಿಕೆ, ರಸ್ತೆ, ಪಾರ್ಕ್ ಅಭಿವೃದ್ಧಿ ಇತ್ಯಾದಿ ಅಭಿವೃದ್ಧಿ ಕಾರ್ಯಗಳನ್ನು 30 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಯೋಜಿಸಬೇಕು ಎಂದರು.

‘ಹಣಕಾಸು ಶಿಸ್ತು ತಪ್ಪದೆ, ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಿ. ಆಸ್ತಿ (ಕೆರೆ ಇತ್ಯಾದಿ)ಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಬಗ್ಗೆ ಯೋಚಿಸಿ. ನನ್ನ ಅವಧಿಯಲ್ಲಿ ನನ್ನ ವ್ಯಾಪ್ತಿಯ ಕಟ್ಟಡ, ರಸ್ತೆ, ಪಾದಚಾರಿ ಮಾರ್ಗ ರಕ್ಷಿಸಿದ್ದೇನೆ ಎಂಬ ತೃಪ್ತಿ ಹೊಂದಿ. ನನ್ನ ವಾರ್ಡ್ ಉತ್ತಮಗೊಳ್ಳಬೇಕು ಎಂಬ ಆಲೋಚನೆ ಬರಲಿ. ಹೊಂದಾಣಿಕೆಯೊಂದಿಗೆ ಕೆಲಸ ಮಾಡಿ’ ಎಂದು ಕಿವಿಮಾತು ಹೇಳಿದರು.

ನಗರದ ಬೀದಿ, ಸಾರ್ವಜನಿಕ ಸ್ಥಳಗಳ ವಿನ್ಯಾಸ, ಸಮಸ್ಯೆ ಇತ್ಯಾದಿ ಕುರಿತಂತೆ ಅಧ್ಯಯನ ನಡೆಸಿದ್ದ ಎನ್ಜಿಒ ಪ್ರತಿನಿಧಿಗಳು ವಿಚಾರ ಮಂಡಿಸಿದರು. ನಗರ ಪಾಲಿಕೆ ಎಂಜಿನಿಯರ್ಗಳು ಅಭಿಪ್ರಾಯ, ಆಲೋಚನೆ ಹಂಚಿಕೊಂಡರು. ಆಯುಕ್ತರ ಆಶಯದಂತೆ ಬಜೆಟ್ನ ಸಮರ್ಪಕ ಬಳಕೆ ನಿಟ್ಟಿನಲ್ಲಿ ನಗರದ ಕುಂದುಕೊರತೆ, ಆಗಬೇಕಾದ ಅಭಿವೃದ್ಧಿ ಕಾರ್ಯಗಳು, ಅಂದಾಜು ಖರ್ಚುವೆಚ್ಚ ಇತ್ಯಾದಿ ಕುರಿತಂತೆ ಸಂವಾದ ನಡೆಯಿತು.

ಕಾರ್ಯಾಗಾರದ ಪ್ರಮುಖ ಉದ್ದೇಶಗಳು: ನಗರದ ಬೀದಿಗಳು, ಪ್ರಮುಖ ಜಂಕ್ಷನ್ಗಳು ಮತ್ತು ಸಾರ್ವಜನಿಕ ಪ್ರದೇಶಗಳನ್ನು ವೈಜ್ಞಾನಿಕವಾಗಿ ಹಾಗೂ ಅಂತರರಾಷ್ಟ್ರೀಯ ಮಟ್ಟದ ಗುಣಮಟ್ಟಕ್ಕೆ ತಕ್ಕಂತೆ ವಿನ್ಯಾಸಗೊಳಿಸಲು ಉತ್ತಮ ಮಾರ್ಗಸೂಚಿಗಳನ್ನು ಸಿದ್ಧಪಡಿಸುವುದು.

ಆಯ್ದ ಯೋಜನೆಗಳಿಗೆ ಮತ್ತು ಆಯಾ ವಾರ್ಡ್ಗಳ ಭೌಗೋಳಿಕ ಅಗತ್ಯಗಳಿಗೆ ಅನುಗುಣವಾಗಿ ಅಗತ್ಯವಿರುವ ಆರ್ಥಿಕ ಸಂಪನ್ಮೂಲಗಳನ್ನು (ಬಜೆಟ್) ಹಂಚಿಕೆ ಮಾಡುವುದು ಮತ್ತು ಆದ್ಯತೆಗಳನ್ನು ಗುರುತಿಸುವುದು.

ನಗರದ ಸಾರ್ವಜನಿಕ ಸ್ಥಳಗಳು, ಸ್ಮಾರ್ಟ್ ಶಾಲೆಗಳು ಮತ್ತು ಇತರ ಆಸ್ತಿಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಅವುಗಳನ್ನು ಸಕ್ರಿಯಗೊಳಿಸುವುದು ಹಾಗೂ ಅವುಗಳಿಂದ ನಗರ ಪಾಲಿಕೆಗೆ ಆದಾಯ ತರುವ ಹೊಸ ಅವಕಾಶಗಳನ್ನು ಕಂಡುಕೊಳ್ಳುವುದು.

ಮುಖ್ಯ ಎಂಜಿನಿಯರ್ಗಳಾದ ಬಸವರಾಜ್ ಕಬಾಡೆ ಮತ್ತು ಸ್ವಯಂಪ್ರಭಾ, ಉಪ ಆಯುಕ್ತರಾದ ಸಾಯಿದಾ ಅಫ್ರೀನ್ ಬಾನು ಉಪಸ್ಥಿತರಿದ್ದರು.

ಸಾರಕ್ಕಿ ಕೆರೆ: ಸಮಸ್ಯೆ ನಿವಾರಣೆಗೆ ಸೂಚನೆ

ಸಾರಕ್ಕಿ ಕೆರೆಯ ಸುತ್ತಮುತ್ತಲಿನ ನಾಗರಿಕರ ಸಮಸ್ಯೆಗಳನ್ನು ನಿವಾರಿ
ಸಬೇಕು ಎಂದು ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತ ರಮೇಶ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಕೆರೆ ವ್ಯಾಪ್ತಿಯಲ್ಲಿ ಪಾದಯಾತ್ರೆ ಮತ್ತು ಸ್ಥಳ ಪರಿಶೀಲನೆ ನಡೆಸಿದ ಅವರು, ಕೆರೆ ಅಭಿವೃದ್ಧಿ ಹಾಗೂ ನಾಗರಿಕ ಸೌಲಭ್ಯಗಳ ಸುಧಾರಣೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು.

ಕೆರೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಳಚರಂಡಿ ನೀರು
ಹಿಮ್ಮುಖವಾಗಿ ಹರಿಯುತ್ತಿರು
ವುದು ಮತ್ತು ಪೈಪ್ಲೈನ್ಗಳ ಬ್ಲಾಕೇಜ್ ಬಗ್ಗೆ ಸಾರ್ವಜನಿಕರು ಆಯುಕ್ತರ ಗಮನಕ್ಕೆ ತಂದರು. ಈ ಕೂಡಲೇ ಇಡೀ ಯುಜಿಡಿ ಜಾಲದ ಸಾಮರ್ಥ್ಯ, ಹೂಳು ತೆಗೆಯುವಿಕೆ ಮತ್ತು ಎಸ್ಟಿಪಿ ಘಟಕಗಳ ಕಾರ್ಯಕ್ಷಮತೆಯ ಬಗ್ಗೆ ವೈಜ್ಞಾನಿಕ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಜಲಮಂಡಳಿ ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು.

ಎರಡು ವರ್ಷಗಳಿಂದ ಕೆರೆಯ ಆವರಣದಲ್ಲಿ 2ನೇ ಶೌಚಾಲಯದ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರನ್ನು ತರಾಟೆಗೆ ತೆಗೆದು ಕೊಂಡರು. ನೀರಿನ ಸಂಪರ್ಕದ ನೆಪವೊಡ್ಡಿ ವಿಳಂಬ ಮಾಡುವು ದನ್ನು ಸಹಿಸುವುದಿಲ್ಲ ಎಂದರು.

ಸಾರಕ್ಕಿ ವಾಕರ್ಸ್ ಗ್ರೂಪ್ನ ಉಮೇಶ್ ಗೌಡ ಮತ್ತು ಸ್ಥಳೀಯ ನಿವಾಸಿಗಳು ಪಾಲ್ಗೊಂಡು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.

ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಪಾದಚಾರಿ ಒತ್ತುವರಿ ತೆರವು

ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಹೆಗ್ಗನಹಳ್ಳಿ ವಿಭಾಗದ (ದಾಸರಹಳ್ಳಿ ವಿಧಾನಸಭಾ ಕ್ಷೇತ್ರ) ಪೀಣ್ಯ ಕೈಗಾರಿಕಾ ಪ್ರದೇಶದ ಎರಡನೇ ಹಂತದಲ್ಲಿ ಪಾದಚಾರಿ ಒತ್ತುವರಿ ತೆರವು ಕಾರ್ಯಾಚರಣೆ ಶನಿವಾರ ನಡೆಯಿತು.

ಬಿಎಂಟಿಸಿ ಬಸ್ ನಿಲ್ದಾಣದಿಂದ ಸುಮಾರು 300 ಮೀಟರ್ ಉದ್ದಕ್ಕೆ ರಸ್ತೆ ಇಕ್ಕೆಲಗಳಲ್ಲಿ ಪಾದಚಾರಿ ಮಾರ್ಗಗಳ ಮೇಲಿದ್ದ ಅಂಗಡಿ, ಕಟ್ಟಡ ಭಗ್ನಾವಶೇಷ, ಕಟ್ಟಡ ನಿರ್ಮಾಣ ಸಾಮಗ್ರಿ, ಕಟ್ಟಡ ಕಾರ್ಮಿಕರ ತಾತ್ಕಾಲಿಕ ಶೌಚಾಲಯಗಳು, ಶಿಥಿಲ ವಿದ್ಯುತ್ ಕಂಬಗಳು ಇತ್ಯಾದಿ ಎಲ್ಲ ವಿಧದ ಒತ್ತುವರಿ ತೆರವುಗೊಳಿಸಿ, ಅಸಮರ್ಪಕ ಸ್ಥಿತಿಯಲ್ಲಿದ್ದ ಸ್ಲ್ಯಾಬ್, ಚಪ್ಪಡಿ ಸರಿಪಡಿಸಿ, ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಸುಮಾರು ಆರು ಪೆಟ್ಟಿಗೆ ಅಂಗಡಿಗಳು, ಶಿಥಿಲಗೊಂಡ ಸುಮಾರು 10 ವಿದ್ಯುತ್ ಕಂಬಗಳು, ಸುಮಾರು 10 ಟ್ರ್ಯಾಕ್ಟರ್ನಷ್ಟು ಕಟ್ಟಡ ನಿರ್ಮಾಣ ಸಾಮಗ್ರಿ (ಎಂ ಸ್ಯಾಂಡ್ ಇತ್ಯಾದಿ), ಒಂದು ಅಂಗಡಿ, ಎರಡು ಅನಾಥ ವಾಹನಗಳು ಅಲ್ಲದೆ, ತಾತ್ಕಾಲಿಕ ಆಸನ ವ್ಯವಸ್ಥೆ ಇತ್ಯಾದಿಗಳನ್ನು ಕ್ರೇನ್, ಜೆಸಿಬಿ ಬಳಸಿ ತೆರವುಗೊಳಿಸಲಾಯಿತು.

ಪಾದಚಾರಿ ಮಾರ್ಗದಲ್ಲಿದ್ದ ಮೇಲಿದ್ದ 20 ಕಿ.ವ್ಯಾ. ಸಾಮರ್ಥ್ಯ ಮೇಲ್ಪಟ್ಟ ಕೇಬಲ್ ತೆರವುಗೊಳಿಸಲು (ಗುಂಡಿ ಅಗೆದು ಸೂಕ್ತ ವ್ಯವಸ್ಥೆ ಮಾಡಲು) ಬೆಸ್ಕಾಂ ಸಿಬ್ಬಂದಿಗೆ ಸೂಚಿಸಲಾಯಿತು ಎಂದು ಆಯುಕ್ತರು ತಿಳಿಸಿದರು.

ತಡರಾತ್ರಿಯವರೆಗೂ ಗಣತಿ

ಗಣತಿದಾರರು ಬಂದಾಗ ಮನೆ ಬೀಗ ಹಾಕಿದ ಪ್ರಕರಣ ಎಂದು ಗುರುತಿಸಲಾದ ಮನೆಗಳಿಗೆ ಸಂಜೆಯಿಂದ ತಡರಾತ್ರಿಯವರೆಗೂ ಭೇಟಿ ನೀಡಿ, ಮನೆಗಣತಿ ಕಾರ್ಯ ನಡೆಸಲಿದ್ದಾರೆ ಎಂದು ಕೇಂದ್ರ ನಗರ ಪಾಲಿಕೆಯ ಅಭಿವೃದ್ಧಿ ಹೆಚ್ಚುವರಿ ಆಯುಕ್ತ ದಲ್ಜಿತ್ ಕುಮಾರ್ ತಿಳಿಸಿದರು.

ಗಣತಿದಾರರು ಮನೆಗಳು ಬೀಗ ಹಾಕಿದೆ ಎಂದು ಗುರುತಿಸಲಾದ ಮನೆಗಳು ಎಂಬ ಪ್ರಕರಣದಲ್ಲಿ ಚಾರ್ಜ್ ಆಫೀಸರ್ಸ್ ಹಾಗೂ ಕಂದಾಯ ವಿಭಾಗದ ಅಧಿಕಾರಿಗಳು ಗಣತಿದಾರರೊಂದಿಗೆ ಬೀಗ ಹಾಕಿದ ಬಗ್ಗೆ ಪರಿಶೀಲನೆ ನಡೆಸಿ ಗಣತಿ ಕಾರ್ಯ ನಡೆಸಲು ಸೂಚನೆ ನೀಡಲಾಗಿದೆ ಎಂದರು.

ಭಾರತದ ಜನಗಣತಿ-2027 ರ ಅಂಗವಾಗಿ ಮೊದಲ ಹಂತದಲ್ಲಿ ಮನೆ ಪಟ್ಟಿ ಹಾಗೂ ಮನೆಗೆ ಗಣತಿ ಕಾರ್ಯವು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಡೆಯುತ್ತಿದೆ. ಮನೆಗಳು ಗಣತಿ ಕಾರ್ಯಕ್ಕೆ ಒಳಪಟ್ಟು ಕೇಂದ್ರ ಸರ್ಕಾರದ ಮಹತ್ವದ ಗಣತಿ ಕಾರ್ಯದ ಯಶಸ್ವಿಯಾಗಿಸಲು ಅನುಕೂಲವಾಗುವಂತೆ ಬೀಗ ಹಾಕಿದ (ಡೋರ್ ಲಾಕ್ಡ್ ಹೌಸಸ್) ಮನೆಗಳನ್ನು ಸಂಜೆ ಮೇಲೆ ತಡ ರಾತ್ರಿಯವರೆಗೆ ಗಣತಿ ಕಾರ್ಯ ನಿರ್ವಹಿಸಲು ಗಣತಿ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಈ ಪ್ರಕ್ರಿಯೆ ಮೇ 15ರವರೆಗೆ ನಡೆಯಲಿದೆ ಎಂದು ಹೇಳಿದರು.

ಆಯುಕ್ತರ ಸಲಹೆಗಳು

l ಕನಿಷ್ಠ 10 ಕಿ.ಮೀ. ಪಾದಚಾರಿ ಮಾರ್ಗ ಅಭಿವೃದ್ಧಿಪಡಿಸಿ. ನಮ್ಮ ಮನೆ ಮಂದಿಯೇ ನಡೆದುಹೋಗುವ ಮಾರ್ಗವೆಂಬ ಕಾಳಜಿ ಹೊಂದಿರಿ.

l ನಮ್ಮ ರಸ್ತೆ ನಮ್ಮ ಕೈಪಿಡಿ ಅಡಿಯಲ್ಲಿ ಎಲ್ಲ ಹತ್ತು ವಿಭಾಗಗಳಲ್ಲಿ ರಸ್ತೆ ಆಡಿಟ್ ಮಾಡಿಸಿ.

l ಅನಧಿಕೃತ ಆಪ್ಟಿಕ್ ಫೈಬರ್ ಕೇಬಲ್ ವೈರ್ ಸಮಸ್ಯೆ ನಿವಾರಿಸಿ.

l ನಗರ ಸೌಂದರ್ಯೀಕರಣಕ್ಕೆ ಪಿಪಿಪಿ ಮಾದರಿ ಬಳಸಿ.

l ಪಾರಂಪರಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಿ.

l ಕನ್ಸರ್ವೆನ್ಸಿ ಲೈನ್ಸ್ ಮರೆಯಾಗುತ್ತಿದೆ. ಗಮನಹರಿಸಿ.

l ಸಾಕುಪ್ರಾಣಿ ಸ್ನೇಹಿ ಉದ್ಯಾನ, ಮಿಯಾವಾಕಿ ಅರಣ್ಯ, ಅಂಗವಿಕಲ ಸ್ನೇಹಿ ಪಾರ್ಕ್ ಸ್ಥಾಪನೆ ಬಗ್ಗೆ ಗಮನಹರಿಸಿ.

l ನಿರ್ವಹಣೆ, ತಂತ್ರಜ್ಞಾನ ಸಂಬಂಧಿಸಿದಂತೆ ಏಜೆನ್ಸಿಗಳು ನಮ್ಮ ಬಳಿ ಇವೆ. ನಗರದ ಸಮಸ್ಯೆಗಳನ್ನು ಗುರುತಿಸಿ ಅವರಿಗೆ ತಿಳಿಸಿದರೆ ಪರಿಹಾರ ದೊರಕುತ್ತದೆ. ಈ ನಿಟ್ಟಿನಲ್ಲಿ ಗಮನ ಹರಿಸಿ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-4-1084719685

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.