ಬೆಂಗಳೂರು: ‘ನಗರದಲ್ಲಿ ಕಟ್ಟಡ ಪ್ರಾರಂಭಿಕ ಪ್ರಮಾಣಪತ್ರ (ಸಿಸಿ)/ ಸ್ವಾಧೀನಾನುಭವ ಪ್ರಮಾಣ ಪತ್ರಗಳನ್ನು (ಒಸಿ) ಪಡೆಯಬೇಕಾಗಿರುವ ಎರಡು ಲಕ್ಷಕ್ಕೂ ಅಧಿಕ ಕಟ್ಟಡಗಳಿದ್ದರೂ, 8,968 ಸಿಸಿ/ಒಸಿಗಳನ್ನಷ್ಟೇ ನೀಡಲಾಗಿದೆ. ಪಾಲಿಕೆಗಳಿಗೆ ಇದರಿಂದ ₹40 ಸಾವಿರ ಕೋಟಿ ನಷ್ಟವಾಗಿದೆ’ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಆರೋಪಿಸಿದರು.

‘ಬಿಬಿಎಂಪಿ ಹಾಗೂ ನಗರ ಪಾಲಿಕೆಗಳಲ್ಲಿ 2010–11ರಿಂದ 2025–26ರ ಅವಧಿಯಲ್ಲಿ 10 ಸಾವಿರದಷ್ಟೂ ಸಿಸಿ/ ಒಸಿಗಳನ್ನು ನೀಡಿಲ್ಲ. ಸಾವಿರಾರು ನಕಲಿ ಸಿಸಿ/ ಒಸಿಗಳನ್ನು ನೀಡಲಾಗಿದೆ. ಸುಮಾರು 22 ಲಕ್ಷ ಗ್ರಾಹಕರಿಗೆ ವಂಚನೆಯಾಗಿದೆ’ ಎಂದು ನಕಲಿ ಸ್ವಾಧೀನಾನುಭವ ಪ್ರಮಾಣ ಪತ್ರ (ಒಸಿ)/ ಕಟ್ಟಡ ಪ್ರಾರಂಭಿಕ ಪ್ರಮಾಣಪತ್ರಗಳನ್ನು (ಸಿಸಿ) ನೀಡಿ, 22 ಲಕ್ಷ ಗ್ರಾಹಕರನ್ನು ವಂಚಿಸಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ದೂರಿದರು.

‘ಬೆಂಗಳೂರಿನಲ್ಲಿರುವ ವಸತಿ– ವಾಣಿಜ್ಯ ಸಂಕೀರ್ಣಗಳು, ಟೆಕ್ ಪಾರ್ಕ್, ಮಾಲ್– ಮಲ್ಟಿಪ್ಲೆಕ್ಸ್, ಐಟಿ–ಬಿಟಿ ಕಂಪನಿ, ಕೈಗಾರಿಕೆ ಕಟ್ಟಡಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು/ ನರ್ಸಿಂಗ್ ಹೋಂಗಳು, ಸ್ಟಾರ್ ಹೋಟೆಲ್ ಮತ್ತು ಕಲ್ಯಾಣ ಮಂಟಪಗಳಲ್ಲಿ ಶೇ 95ಕ್ಕೂ ಹೆಚ್ಚು ಕಟ್ಟಡಗಳಿಗೆ ನಕಲಿ ಒಸಿ/ ಸಿಸಿಗಳನ್ನು ನೀಡಲಾಗಿದೆ’ ಎಂದು ಆರೋಪಿಸಿದರು.

‘ಹಿಂದಿನ ಬಿಬಿಎಂಪಿಯ ಎಂಟು ವಲಯಗಳು ಅಥವಾ ಈಗಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳ ಅವಧಿಯೂ ಸೇರಿದಂತೆ 16 ವರ್ಷಗಳಲ್ಲಿ ಬೃಹತ್ ಕಟ್ಟಡಗಳಿಗೆ ನಗರ ಯೋಜನೆ ವಿಭಾಗವು ಒಟ್ಟು 4,381 ಒಸಿ ಮತ್ತು ಒಟ್ಟು 4,587 ಸಿಸಿಗಳನ್ನು ವಿತರಿಸಿದೆ. ನಕ್ಷೆ ಮಂಜೂರಾತಿ ಪಡೆದಿರುವ ಕಟ್ಟಡಗಳ ಸಂಖ್ಯೆ ಒಟ್ಟು 71,169. ಈ ಮಾಹಿತಿಯನ್ನು ನಗರ ಯೋಜನೆ ವಿಭಾಗದ ಅಧಿಕಾರಿಗಳೇ ನೀಡಿದ್ದಾರೆ. ಆದರೆ, ಬೆಂಗಳೂರಿನಲ್ಲಿ 50ಕ್ಕೂ ಹೆಚ್ಚಿನ ಯೂನಿಟ್ಗಳನ್ನು ಹೊಂದಿರುವ ವಸತಿ ಸಂಕೀರ್ಣಗಳ ಸಂಖ್ಯೆಯೇ 50,000ಕ್ಕೂ ಹೆಚ್ಚಿದೆ. 98 ಟೆಕ್ ಪಾರ್ಕ್, 3,876 ಐಟಿ ಕಂಪನಿಗಳು, 103 ಬಿಟಿ ಕಂಪನಿಗಳು, 4,500ಕ್ಕೂ ಹೆಚ್ಚು ಬೃಹತ್ ವಾಣಿಜ್ಯ ಸಂಕೀರ್ಣಗಳು, 217 ಮಾಲ್–ಮಲ್ಟಿಪ್ಲೆಕ್ಸ್, 1,10,000 ಕೈಗಾರಿಕಾ ಕಟ್ಟಡಗಳು, 540 ತಾರಾ ಹೋಟೆಲ್, 2,850 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ/ ನರ್ಸಿಂಗ್ ಹೋಂ, 1,350 ಕಲ್ಯಾಣ ಮಂಟಪಗಳು ಇವೆ’ ಎಂದು ಅಂಕಿ–ಅಂಶ ನೀಡಿದರು.

‘ನಗರದಲ್ಲಿರುವ ಎಲ್ಲ ಬೃಹತ್ ವಸತಿ ಮತ್ತು ವಾಣಿಜ್ಯ ಕಟ್ಟಡಗಳ ನಿರ್ಮಾಣಗಾರರಿಂದ ಕಾನೂನು ರೀತಿಯಲ್ಲಿ ನಿಗದಿತ ಪ್ರಮಾಣದ ಶುಲ್ಕಗಳನ್ನು ಪಾವತಿಸಿಕೊಂಡು ಸಿಸಿ/ ಒಸಿಗಳನ್ನು ನೀಡಿದ್ದರೆ ಕನಿಷ್ಠ ₹40 ಸಾವಿರ ಕೋಟಿ ಸಂಗ್ರಹವಾಗುತ್ತಿತ್ತು. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ದಾಖಲೆಗಳನ್ನು ಸಲ್ಲಿಸಲಾಗಿದೆ. ಲೋಕಾಯುಕ್ತ ಹಾಗೂ ಜಾರಿ ನಿರ್ದೇಶನಾಲಯಕ್ಕೂ ಮನವಿ ಸಲ್ಲಿಸಲಾಗಿದೆ. ಸುಮಾರು 9,700 ಪುಟಗಳ ದಾಖಲೆ ಸಲ್ಲಿಸಲಾಗಿದೆ’ ಎಂದು ಎನ್.ಆರ್. ರಮೇಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.