ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆ ಕಾಮಗಾರಿ ಪೂರ್ಣಗೊಳಿಸಲು ಆರು ವರ್ಷಕ್ಕಿಂತ ಹೆಚ್ಚು ವಿಳಂಬ ಮಾಡಿದ ಕಾರಣ ಜಯನಗರದ ನಿವಾಸಿಯೊಬ್ಬರಿಗೆ ₹53.03 ಲಕ್ಷ ಪರಿಹಾರ ನೀಡುವಂತೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ಕೆ–ರೇರಾ), ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಆದೇಶಿಸಿದೆ.

ಚಲ್ಲಘಟ್ಟ ಸಮೀಪ ನಿರ್ಮಿಸುತ್ತಿರುವ ಈ ಬಡಾವಣೆಯಲ್ಲಿ 27 ಸಾವಿರ ನಿವೇಶನಗಳಿದ್ದು, ಪ್ರಾಧಿಕಾರದ ಆದೇಶ ಪರಿಣಾಮ ಬೀರಬಹುದು ಎಂದು ವ್ಯಾಖ್ಯಾನಿಸಲಾಗಿದೆ.

ಏಪ್ರಿಲ್ 8ರ ಆದೇಶದಲ್ಲಿ ರೇರಾ ಅಧ್ಯಕ್ಷ ರಾಕೇಶ್ ಸಿಂಗ್ ಮತ್ತು ಸದಸ್ಯ ಜಿ. ಆರ್. ರೆಡ್ಡಿ ಅವರು ದೂರುದಾರರು ಪರಿಹಾರಕ್ಕೆ ಅರ್ಹರು. ನಿವೇಶನದಲ್ಲಿ ರಸ್ತೆ, ನೀರು, ಬೀದಿ ದೀಪ ಅಥವಾ ವಿದ್ಯುತ್ ಸೌಲಭ್ಯಗಳೇ ಇಲ್ಲ ಎಂದು ತಿಳಿಸಿದ್ದಾರೆ.

ಅಲ್ಲದೇ, ವಾದ, ಪ್ರತಿವಾದಗಳ ವೇಳೆ ಬಿಡಿಎ ವಕೀಲರು, ಬಡಾವಣೆಯಲ್ಲಿ ಮೂಲಭೂತ ಸೌಲಭ್ಯ ಒದಗಿಸಲು ವಿಳಂಬ ಮಾಡಿದ್ದಕ್ಕಾಗಿ ಲೆಕ್ಕಾಚಾರಗಳ ಮೆಮೊಗೆ (ಪರಿಹಾರ ಮೊತ್ತ) ಯಾವುದೇ ಆಕ್ಷೇಪಣೆ ಸಲ್ಲಿಸಲಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

2020ರ ಜೂನ್ ನಿಂದ 2026ರ ಫೆಬ್ರುವರಿಗೆ ಆರು ವರ್ಷಗಳ ವಿಳಂಬಕ್ಕಾಗಿ ₹56.03 ಲಕ್ಷ ದಂಡ ಹಾಕಲಾಗಿದೆ. ಇದರಲ್ಲಿ ಬಡ್ಡಿಯೂ ಸೇರಿದೆ. 2026ರ ಫೆಬ್ರವರಿಯಿಂದ ಮೂಲಭೂತ ಸೌಲಭ್ಯ ಒದಗಿಸುವ ದಿನಾಂಕದವರೆಗೂ ಇದೇ ರೀತಿಯಲ್ಲಿ ಬಡ್ಡಿ ಲೆಕ್ಕ ಹಾಕಿ, ದೂರುದಾರರಿಗೆ ಪಾವತಿಸಬೇಕು ಎಂದು ತಿಳಿಸಲಾಗಿದೆ.

2025ರಲ್ಲಿ ಜಯನಗರದ ನಿವಾಸಿ ಮೃದುಲಾ ಕೃಷ್ಣಾಪುರ್ ಅವರು ಯೋಜನೆ ವಿಳಂಬಕ್ಕಾಗಿ ಬಿಡಿಎಯಿಂದ ಪರಿಹಾರ ಕೋರಿ ರೇರಾಗೆ ಅರ್ಜಿ ಸಲ್ಲಿಸಿದ್ದರು. 2020 ರಲ್ಲಿ ಒಟ್ಟು ₹96.87 ಲಕ್ಷ ಪಾವತಿಸಿ ನಿವೇಶನ ಖರೀದಿಸಿದ್ದು, ಬಿಡಿಎ ಸ್ವಾಧೀನ ಪ್ರಮಾಣಪತ್ರ ನೀಡಿತು. ಆದರೆ, ಮನೆ ನಿರ್ಮಿಸಲು ಅಗತ್ಯ ಮೂಲಸೌಕರ್ಯಗಳು ಕಲ್ಪಿಸಿಲ್ಲ. ಈವರೆಗೂ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನ್ಯೂ ಟೆಕ್ ಪ್ರಮೋಟರ್ಸ್ ಮತ್ತು ಉತ್ತರ ಪ್ರದೇಶ ರಾಜ್ಯದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಅನ್ನು ರೇರಾ ಉಲ್ಲೇಖಿಸಿದೆ. ಬಿಡಿಎ ಪರ ವಕೀಲ ಬಿ. ವಚನ್ ಅವರು ಆಕ್ಷೇಪಣೆಗಳನ್ನು ಸಲ್ಲಿಸಲಿಲ್ಲ ಹಾಗೂ ಯಾವುದೇ ದಾಖಲೆಗಳನ್ನು ನೀಡಲಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.