ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತನ್ನ ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸು ಒದಗಿಸುವುದಕ್ಕಾಗಿ ಜಮೀನು ಹರಾಜು ಮಾಡಲು ಮುಂದಾಗಿದೆ.

ಬಿಡಿಎ ಭಾರಿ ಪ್ರಮಾಣದ ಭೂಮಿಯನ್ನು ಎರಡು ಹಂತದಲ್ಲಿ ಹರಾಜು ಮಾಡಿ ದಾಖಲೆಯ ₹2,097 ಕೋಟಿ ಸಂಗ್ರಹಿಸಿತ್ತು. ಇದೀಗ ಮೂರನೇ ಬಾರಿಗೆ ಇ–ಹರಾಜು ಆರಂಭಿಸಿದ್ದು, ಪ್ರಮುಖ ಸ್ಥಳಗಳಲ್ಲಿ 47ಕ್ಕೂ ಹೆಚ್ಚು ಪ್ಲ್ಯಾಟ್ಗಳನ್ನು ಮಾರಾಟ ಮಾಡಲಿದೆ.

ಬಿಡಿಎ ಇತ್ತೀಚೆಗೆ ಹೊರಡಿಸಿದ ಅಧಿಸೂಚನೆಯ ಪ್ರಕಾರ ವಶಪಡಿಸಿ ಕೊಳ್ಳಲಾದ ನಿವೇಶನಗಳು ಆರ್ಎಂವಿ 2ನೇ ಹಂತ, ಬನಶಂಕರಿ 6ನೇ ಹಂತ, ಚಂದ್ರಾ ಲೇಔಟ್, ಸರ್ ಎಂ.ವಿಶ್ವೇಶರಯ್ಯ ಲೇಔಟ್ ಮತ್ತು ಅರ್ಕಾವತಿ ಲೇಔಟ್ ಸೇರಿದಂತೆ ನಗರದ ಸುತ್ತಮುತ್ತ ಇವೆ.

4,593 ಚದರ ಮೀಟರ್ ವಿಸ್ತೀರ್ಣದ ಅತಿ ದೊಡ್ಡ ಪ್ಲ್ಯಾಟ್ ಎಚ್ಬಿಆರ್ 1ನೇ ಹಂತದಲ್ಲಿದೆ. 403 ಚದರ ಮೀಟರ್ ವಿಸ್ತೀರ್ಣದ ಅತಿಚಿಕ್ಕ ಪ್ಲ್ಯಾಟ್ ಲಿಂಗಧೀರನಹಳ್ಳಿ ಮತ್ತು ಹೇರೋಹಳ್ಳಿಯಲ್ಲಿದೆ. ಆಯಾ ಸ್ಥಳಗಳ ಮೌಲ್ಯ ಆಧರಿಸಿ ಪ್ರತಿ ಚದರ ಮೀಟರ್ಗೆ ₹63,000ನಿಂದ ₹1.65 ಲಕ್ಷವರೆಗೆ ದರ ಇದೆ.

ಹಳೆ ಮದ್ರಾಸ್ ರಸ್ತೆಯ ಕೋನದಾಸಪುರದಲ್ಲಿ 52 ಎಕರೆಗಳನ್ನು ಮಾರಾಟ ಮಾಡುವ ಮೂಲಕ ಬಿಡಿಎ ₹2,097 ಕೋಟಿ ಗಳಿಸಿತ್ತು.

ಬಿಡಿಎನ ಮೂಲೆ ನಿವೇಶನಗಳು ಮತ್ತು ವಾಣಿಜ್ಯ ನಿವೇಶನಗಳ ವಿಲೇವಾರಿ ನಿಯಮಗಳು–1984 ರ ಅಡಿಯಲ್ಲಿ ಹೊರಡಿಸಲಾದ ಇತ್ತೀಚಿನ ಅಧಿಸೂಚನೆಯಂತೆ ಮೇ 6 ರಂದು ನೇರ ಬಿಡ್ಡಿಂಗ್ ನಡೆಯಲಿದೆ. ಆಸಕ್ತರು ಮೇ 5 ರೊಳಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-4-1461829087

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.