ಬೆಂಗಳೂರು: ನಗರವನ್ನು ಮತ್ತಷ್ಟು ಹಸಿರಾಗಿಸುವ ಉದ್ದೇಶದಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) 15 ಲಕ್ಷ ಸಸಿಗಳನ್ನು ನೆಡುವ ಪರಿಸರ ಯೋಜನೆಯನ್ನು ರೂಪಿಸಿದೆ.

ಪ್ರಾಧಿಕಾರದ ಅಧ್ಯಕ್ಷ ಎನ್.ಎ. ಹ್ಯಾರಿಸ್ ನೇತೃತ್ವದಲ್ಲಿ ಜೂನ್ 5 ರಂದು ಈ ಯೋಜನೆ ಕಾರ್ಯರೂಪಕ್ಕೆ ಬರಲಿದ್ದು, ನಗರದ ವಿವಿಧ ಸ್ಥಳಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ಥಳೀಯ ಸಸಿಗಳನ್ನು ನೆಡಲಾಗುತ್ತದೆ.

ತಾಪಮಾನದ ಒತ್ತಡ ತಗ್ಗಿಸಲು, ಸೂಕ್ಷ್ಮ ಹವಾಮಾನ ಮತ್ತು ನಗರದ ಜೀವನ ಗುಣಮಟ್ಟ ಸುಧಾರಿಸುವ ಕಾರ್ಯತಂತ್ರದ ಭಾಗವಾಗಿ ಈ ಯೋಜನೆಯನ್ನು ರೂಪಿಸಿದ್ದು ಗಿನ್ನಿಸ್ ದಾಖಲೆ ನಿರ್ಮಿಸಲು ಬಿಡಿಎ ಉದ್ದೇಶಿಸಿದೆ.

ಸಿಎಸ್ಆರ್ ನಿಧಿಯ ಮೂಲಕ ಹದಿನೈದು ಲಕ್ಷ ಸ್ಥಳೀಯ ಸಸಿಗಳನ್ನು ನೆಡುವ ಗುರಿ ಹೊಂದಿದ್ದು, ಕಾಲಮಿತಿಯಲ್ಲಿ ಸರ್ಕಾರಿ ಸಂಸ್ಥೆಗಳು, ನಾಗರಿಕ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ಸ್ವಯಂ ಸೇವಕರು ಮತ್ತು ನಾಗರಿಕರನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದರ ಮೂಲಕ ದೀರ್ಘಕಾಲೀನ ಪರಿಸರ ಸಂರಕ್ಷಣೆಯಲ್ಲಿ ಪಾಲುದಾರಿಕೆ ಯನ್ನು ಈ ಯೋಜನೆ ಉತ್ತೇಜಿಸುತ್ತದೆ.

ಯೋಜನೆ ಕುರಿತು ಮಾತನಾಡಿದ ಅಧ್ಯಕ್ಷ ಎನ್.ಎ. ಹ್ಯಾರಿಸ್, ‘ನಗರವನ್ನು ಹಸಿರಾಗಿಸುವ ಉದ್ದೇಶ ಇದೆ. ಸ್ಥಳೀಯ ಪ್ರಭೇದಗಳಿಗೆ ಆದ್ಯತೆ ನೀಡುವುದರ ಜೊತೆಗೆ ಸಮುದಾಯವನ್ನು ಭಾಗವಹಿ ಸುವಂತೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಹಸಿರು ನಗರ ನಿರ್ಮಿಸಲಾಗುವುದು. ಸಾರ್ವಜನಿಕರ ಭಾಗವಹಿ ಸುವಿಕೆಯ ಮೂಲಕ ನಡೆಯುವ ಈ ಕಾರ್ಯಕ್ರಮಗಳು ನಗರದ ಪರಿಸರ ಮತ್ತು ಜೀವನದ ಗುಣಮಟ್ಟ ಸುಧಾರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ’ ಎಂದು ಹೇಳಿದರು.

‘ಸಸಿ ನೆಡುವಿಕೆಯ ಸ್ಥಳಗಳು, ಪಾಲು ದಾರಿಕೆಯ ವಿಧಾನ ಮತ್ತು ಭಾಗವಹಿಸು ವಿಕೆಯ ಅವಕಾಶಗಳ ಕುರಿತ ವಿವರಗಳನ್ನು ಮುಂಬರುವ ದಿನಗಳಲ್ಲಿ ಹಂಚಿಕೊಳ್ಳಲಾ ಗುವುದು. ಹಸಿರು ಮತ್ತು ಆರೋಗ್ಯಕರ ನಗರದತ್ತ ಸಾಗಲು ರೂಪಿಸಿರುವ ಈ ಚಳವಳಿಯಲ್ಲಿ ಸಾರ್ವಜನಿಕರು, ಸಂಘ-ಸಂಸ್ಥೆಗಳು ಮತ್ತು ಪಾಲುದಾರರು ಪಾಲ್ಗೊಳ್ಳಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.