ಬೆಂಗಳೂರು: ಹೆಚ್ಚುವರಿ ಸಾಮರ್ಥ್ಯದ ವಿದ್ಯುತ್ ಸಂಪರ್ಕ ಮಂಜೂರು ಮಾಡಲು ₹50,000 ಲಂಚ ಪಡೆಯುತ್ತಿದ್ದ ವೇಳೆ ಬೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಮತ್ತು ವಿದ್ಯುತ್ ಗುತ್ತಿಗೆದಾರರೊಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ನಗರದ ಹೆಗ್ಗನಹಳ್ಳಿಯ ಸಂಜೀವಿನಿನಗರದ ನಿವಾಸಿ ಕಟ್ಟಡ ನಿರ್ಮಾಣ ಗುತ್ತಿಗೆದಾರ ಎನ್.ರಘುರಾಜ್ ಅವರು, ಜೆಪಿ ನಗರ 7ನೇ ಹಂತದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಕಾಮಗಾರಿಗಾಗಿ 15 ಕಿಲೋವಾಟ್ ಸಾಮರ್ಥ್ಯದ ತಾತ್ಕಾಲಿಕ ವಿದ್ಯುತ್ ಮೀಟರ್ ಸಂಪರ್ಕ ಪಡೆದಿದ್ದರು. ಅದೇ ಮೀಟರ್ಗೆ ಹೆಚ್ಚುವರಿಯಾಗಿ 10 ಕಿಲೋವಾಟ್ ಸಾಮರ್ಥ್ಯದ ಸಂಪರ್ಕ ಮಂಜೂರಿ, 25 ಕಿಲೋವಾಟ್ಗೆ ಹೆಚ್ಚಿಸುವಂತೆ ಬೆಸ್ಕಾಂನ ಎಸ್12 ಉಪವಿಭಾಗದ ಕಚೇರಿಗೆ ಅರ್ಜಿ ಸಲ್ಲಿಸಿದ್ದರು ಎಂದು ಲೋಕಾಯುಕ್ತ ಪ್ರಕಟಣೆ ತಿಳಿಸಿದೆ.

ಈ ಕೆಲಸಕ್ಕಾಗಿ ₹50,000 ಲಂಚ ನೀಡುವಂತೆ ಬೆಸ್ಕಾಂ ಎಸ್ 12 ಉಪವಿಭಾಗದ ಎಇಇ ಮನೋಜ್ ಕುಮಾರ್ ಬಿ. ಬೇಡಿಕೆ ಇಟ್ಟಿದ್ದರು. ಜತೆಗೆ, ಆ ಹಣವನ್ನು ಗುತ್ತಿಗೆದಾರ ಕಾಂತರಾಜು ಅವರ ಕೈಗೆ ನೀಡುವಂತೆ ಮನೋಜ್ ಅವರು ಸೂಚಿಸಿದ್ದರು. ಈ ಬಗ್ಗೆ ರಘುರಾಜ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು ಎಂದು ಪ್ರಕಟಣೆ ವಿವರಿಸಿದೆ.

ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜು ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಅದರಂತೆ ದೂರುದಾರರು, ಆರೋಪಿ ಕಾಂತರಾಜು ಅವರ ಕಚೇರಿಗೆ ತೆರಳಿ ಲಂಚದ ಹಣ ನೀಡಿದ್ದರು. ಇದೇ ವೇಳೆ ದಾಳಿ ನಡೆಸಿ ಅವರನ್ನು ಬಂಧಿಸಲಾಯಿತು. ಕಾಂತರಾಜು ಹೇಳಿಕೆ ಆಧಾರದಲ್ಲಿ ಮನೋಜ್ ಕುಮಾರ್ ಅವರನ್ನೂ ಬಂಧಿಸಲಾಯಿತು ಎಂದು ಮಾಹಿತಿ ನೀಡಿದೆ.

ಲೋಕಾಯುಕ್ತ ಡಿವೈಎಸ್ಪಿ ಸತೀಶ್ ಎಂ.ಎಚ್. ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಐಗಳಾದ ಅಶೋಕ್ ಕುಮಾರ್.ಎಚ್, ಮಾರುತಿ ಜಿ.ನಾಯಕ್, ರಾಜಶೇಖರಯ್ಯ ಬಿ.ಸಿ. ಭಾಗಿಯಾಗಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-4-261043846

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.