ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನಾ ಕ್ಷೇತ್ರಕ್ಕೆ ಬೆಂಗಳೂರು ಸೂಕ್ತ ತಾಣ

ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅಭಿಮತ
Last Updated 2 ಜೂನ್ 2022, 19:38 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತವು ಎಲ್ಲ ಬಗೆಯ ತಾಂತ್ರಿಕ ಉತ್ಪಾದನೆ, ಸೇವೆ ಹಾಗೂ ನಿರ್ವಹಣೆಯ ತೊಟ್ಟಿಲು ಆಗಬೇಕು ಎಂಬುದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕನಸು’ ಎಂದು ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಇಲ್ಲಿ ಹೇಳಿದರು.

ನಗರದಲ್ಲಿ ಗುರುವಾರ ಪ್ಯೂರ್‌ ಸ್ಟೋರೇಜ್ ಕಂಪನಿಯ ಸುಸಜ್ಜಿತ ಮತ್ತು ಅತ್ಯಾಧುನಿಕ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

‘ಜಾಗತಿಕ ಮಟ್ಟದ ಕಂಪನಿಗಳಿಗೆ ಸಂಶೋಧನೆ ಹಾಗೂ ಅಭಿವೃದ್ಧಿಗೆ ಬೆಂಗಳೂರು ಪ್ರಶಸ್ತ ತಾಣ’ ಎಂದು ಹೇಳಿದರು.

‘ರಾಜ್ಯ ಸರ್ಕಾರವು ಶುದ್ಧ, ಪರಿಸರ ಸ್ನೇಹಿ ಮತ್ತು ದಕ್ಷ ತಂತ್ರಜ್ಞಾನಗಳನ್ನು ಉತ್ತೇಜಿಸಲು ಬದ್ಧವಿದೆ. ಸುಸ್ಥಿರತೆಯ ಮಾನದಂಡವನ್ನು ಕಂಪನಿಗಳು ಎಂದಿಗೂ ಮರೆಯಬಾರದು. ಸದ್ಯಕ್ಕೆ ದೇಶದಲ್ಲಿ ಡೇಟಾ ನಿರ್ವಹಣೆ ಕ್ಷೇತ್ರದಲ್ಲಿ 7 ಲಕ್ಷ ಮಂದಿ ದುಡಿಯುತ್ತಿದ್ದಾರೆ. ಬೆಂಗಳೂರಿನಲ್ಲೂ ಹೆಚ್ಚಿನ ಉದ್ಯೋಗಿಗಳು ಇದ್ದಾರೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ’ ಅವರು
ತಿಳಿಸಿದರು.

ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅಜೇಯ ಮೋಟಗಾನಹಳ್ಳಿ ಮಾತನಾಡಿ, ‘2009ರಲ್ಲಿ ಸ್ಥಾಪನೆ ಯಾದ ಕಂಪನಿ, ವರ್ಷಕ್ಕೆ 2 ಶತಕೋಟಿ ಡಾಲರ್ ವಹಿವಾಟು ನಡೆಸುತ್ತಿದೆ. ಶೇ 20ರಷ್ಟು ಹಣವನ್ನು ಸಂಶೋಧನೆ ಮತ್ತು ಅಭಿವೃದ್ಧಿಗೆ ವಿನಿಯೋಗಿಸುತ್ತಿದೆ. ಜಗತ್ತಿನಾದ್ಯಂತ 10 ಸಾವಿರ ಗ್ರಾಹಕರು ಕಂಪನಿಯ ಸೇವೆಗಳ ಬಳಕೆದಾರರು’ ಎಂದು ಅವರು ಮಾಹಿತಿ
ನೀಡಿದರು.

ಕಾರ್ಯಕ್ರಮದಲ್ಲಿ ಅಜಯ್ ಸಿಂಗ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT