ಬೆಂಗಳೂರು: ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ಅವರನ್ನು ಬಾಗಲಕೋಟೆಗೆ ವರ್ಗಾಯಿಸಿದ್ದ ನಗರಾಭಿವೃದ್ಧಿ ಇಲಾಖೆ ಆದೇಶವನ್ನು ಕಡೆಗಣಿಸಿ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ (ಬಿಎಸ್ಡಬ್ಲ್ಯುಎಂಎಲ್) ಸಿಇಒ ಅವರು ಜಿಬಿಎ ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಿದ್ದಾರೆ.

ಜಿಬಿಎ ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಂತೋಷ್ ಕುಮಾರ್ ಕಡ್ಡಿ ಅವರನ್ನು ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರಸಭೆಗೆ ಏ. 13ರಂದು ನಗರಾಭಿವೃದ್ಧಿ ಇಲಾಖೆ ವರ್ಗಾಯಿಸಿ, 10 ದಿನಗಳಲ್ಲಿ ನಿಯೋಜಿಸಿದ ಸ್ಥಳದಲ್ಲಿ ವರದಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿತ್ತು.

ಸಂತೋಷ್ಕುಮಾರ್ ಕಡ್ಡಿ ಅವರನ್ನು ಬಿಎಸ್ಡಬ್ಲ್ಯುಎಂಎಲ್ನಿಂದ ಬಿಡುಗಡೆ ಮಾಡುವ ಬದಲು, ಚಿಕ್ಕಪೇಟೆ ವಿಭಾಗದಿಂದ ಕೇಂದ್ರ ವಿಭಾಗಕ್ಕೆ ವರ್ಗಾವಣೆ ಮಾಡಿ ಬಿಎಸ್ಡಬ್ಲ್ಯುಎಂಎಲ್ ಸಿಇಒ ಕರೀಗೌಡ ಅವರು ಏಪ್ರಿಲ್ 22ರಂದು ಆದೇಶಿಸಿದ್ದಾರೆ.

‘ನಗರಾಭಿವೃದ್ಧಿ ಇಲಾಖೆ ನಿಯಮಾ ನುಸಾರ ವರ್ಗಾವಣೆ ಮಾಡಿ ರುವ ಎಂಜಿನಿಯರ್ಗಳನ್ನು ಕಾನೂನುಬಾಹಿರವಾಗಿ ಬಿಎಸ್ಡಬ್ಲ್ಯುಎಂಎಲ್ ಅಧಿಕಾರಿಗಳು ತಮ್ಮಲ್ಲಿಯೇ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಹಣದ ಬೇಡಿಕೆಯೂ ಇದೆ’ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ದೂರಿದರು.

ಈ ಬಗ್ಗೆ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿರುವ ಅವರು, ‘ಸರ್ಕಾರದ ಆದೇಶವನ್ನು ಉಲ್ಲಂಘಿಸಿ, ತಮ್ಮ ಸ್ವಾರ್ಥಕ್ಕೆ ಬಳಸಿ ಕೊಂಡು ತಾವು ಅಪೇಕ್ಷಿಸಿದಷ್ಟು ಹಣ ನೀಡುವ ಎಂಜಿನಿಯರ್ಗಳಿಗೆ ಪುನಃ ಬಿಎಸ್ಡಬ್ಲ್ಯುಎಂಎಲ್ನಲ್ಲೇ ಉಳಿಸಿ ಕೊಳ್ಳುವ ಕಾನೂನುಬಾಹಿರ ಕಾರ್ಯಕ್ಕೆ ಮುಂದಾಗಿರುವ ಸಿಇಒ ಕರೀಗೌಡ ಹಾಗೂ ಸಿಜಿಎಂ ಎಸ್.ವಿ. ರಾಜೇಶ್ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆಗೆ ಕರೀಗೌಡ ಹಾಗೂ ಎಸ್.ವಿ. ರಾಜೇಶ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಸ್ಪಂದಿಸಲಿಲ್ಲ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-15-412443905

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.