ಬೆಂಗಳೂರು: ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ–ಪಿಆರ್ಆರ್1) ಯೋಜನೆಯ ಪ್ಯಾಕೇಜ್–1ರ ತಾಂತ್ರಿಕ ಬಿಡ್ಗಳನ್ನು ತೆರೆಯಲಾಗಿದೆ.

ಮೂಲಸೌಕರ್ಯ ಸಂಸ್ಥೆಗಳಾದ ಶಂಕರ ನಾರಾಯಣ ಕನ್ಸ್ಟ್ರಕ್ಷನ್ಸ್ (ಎಸ್ಎನ್ಸಿ) ಮತ್ತು ವಿಶ್ವ ಸಮುದ್ರ ಎಂಜಿನಿಯರಿಂಗ್ ಈ ಕಾಮಗಾರಿಗಾಗಿ ಬಿಡ್ ಸಲ್ಲಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ಯಾಕೇಜ್, ತುಮಕೂರು ರಸ್ತೆ ಮತ್ತು ಬಳ್ಳಾರಿ ರಸ್ತೆ ನಡುವಿನ 19.8 ಕಿ.ಮೀ. ಉದ್ದದ ಭಾಗವನ್ನು ಒಳಗೊಂಡಿದ್ದು, ಇದರ ಅಂದಾಜು ವೆಚ್ಚ ₹3,348.05 ಕೋಟಿ ಆಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೊರಡಿಸಿದ ಟೆಂಡರ್ ಪ್ರಕಾರ, ಈ ಯೋಜನೆಯನ್ನು ಡಿಬಿಒಟಿ (ವಿನ್ಯಾಸ, ನಿರ್ಮಾಣ, ಕಾರ್ಯಾಚರಣೆ, ವರ್ಗಾವಣೆ) ಮಾದರಿಯಲ್ಲಿ ಕಾರ್ಯಗತ ಗೊಳಿಸಲಾಗುವುದು. 36 ತಿಂಗಳ ನಿರ್ಮಾಣ ಅವಧಿಯ ಜೊತೆಗೆ 10 ವರ್ಷಗಳ ಕಾರ್ಯಾಚರಣೆ, ನಿರ್ವಹಣೆ ಒಪ್ಪಂದದಲ್ಲಿ ಒಳಗೊಂಡಿದೆ.

ಎಸ್ಎನ್ಸಿ, ವಿಶ್ವ ಸಮುದ್ರ ಎಂಜಿನಿಯರಿಂಗ್ ಸಲ್ಲಿಸಿರುವ ಬಿಡ್ಗಳ ತಾಂತ್ರಿಕ ಮೌಲ್ಯಮಾಪನವನ್ನು ಮುಂದಿನ ಎರಡು ವಾರಗಳಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ.ಪರಿಶೀಲನೆ ಮುಗಿದ ಬಳಿಕ ಹಣಕಾಸು ಬಿಡ್ಗಳನ್ನು ತೆರೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-4-1117756752

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.