ಬೆಂಗಳೂರು: ಸಿಂಡಿಕೇಟ್ ಲೇಔಟ್ನಲ್ಲಿ ಕಾರು ನಿಲುಗಡೆಯ ವಿಚಾರಕ್ಕೆ ಒಂದೇ ಕಟ್ಟಡದಲ್ಲಿ ನೆಲಸಿದ್ದ ಎರಡು ಕುಟುಂಬಗಳು, ಕ್ರಿಕೆಟ್ ಸ್ಟಂಪ್ಸ್ ಹಾಗೂ ಬ್ಯಾಟ್ ಹಿಡಿದುಕೊಂಡು ಪರಸ್ಪರ ಹೊಡೆದಾಟ ಮಾಡಿಕೊಂಡಿದ್ದಾರೆ ಪ್ರಕರಣವು ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

ಸಂತೋಷ್ ಎಂಬುವರು ನೀಡಿದ ದೂರಿನ ಮೇರೆಗೆ ರತ್ನಮ್ಮ, ಅವರ ಪುತ್ರ, ಪುತ್ರಿ ಹಾಗೂ ಅಳಿಯನ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಬ್ಯಾಡರಹಳ್ಳಿಯ ತುಂಗಾನಗರದಲ್ಲಿ ಇರುವ ಮೂರು ಅಂತಸ್ತಿನ ಕಟ್ಟಡದಲ್ಲಿ ಸಂತೋಷ್ ಹಾಗೂ ಶುಭಾ ಅವರು ಮೊದಲ ಅಂತಸ್ತಿನ ಕಟ್ಟಡದಲ್ಲಿ ವಾಸವಾಗಿದ್ದರೆ, ಕೆಳಮಹಡಿಯಲ್ಲಿ ರತ್ನಮ್ಮ ಅವರ ಕುಟುಂಬ ವಾಸವಿದೆ.

ಸಂತೋಷ್ ಅವರು ಪ್ರತಿದಿನ ತಮ್ಮ ಕಾರನ್ನು ಮನೆ ನೆಲಮಹಡಿಯಲ್ಲಿರುವ ನಿಗದಿತ ಜಾಗದಲ್ಲಿ ನಿಲುಗಡೆ ಮಾಡುತ್ತಿದ್ದರು. ಆದರೆ, ಮಾರ್ಚ್ 30ರಂದು ರತ್ನಮ್ಮ ಅವರ ಮನೆಯಲ್ಲಿ ಕಾರ್ಯಕ್ರಮ ಇತ್ತು. ಆದರೆ, ಸಂತೋಷ್ ಎಂದಿನಂತೆ ಕಾರು ನಿಲುಗಡೆ ಮಾಡಲು ಬಂದಿದ್ದರು. ಆ ಜಾಗದಲ್ಲಿ ರತ್ನಮ್ಮ ಅವರ ಪುತ್ರನ ಬೈಕ್ ನಿಲ್ಲಿಸಲಾಗಿತ್ತು. ಬೈಕ್ ಅನ್ನು ಪಕ್ಕಕ್ಕೆ ನಿಲುಗಡೆ ಮಾಡುವಂತೆ ಸಂತೋಷ್ ಕೇಳಿಕೊಂಡಿದ್ದರು. ಅದರಿಂದ ಸಿಟ್ಟಾದ ರತ್ನಮ್ಮ ಅವರ ಪುತ್ರ, ‘ಮನೆಯಲ್ಲಿ ಕಾರ್ಯಕ್ರಮವಿದೆ. ಕಾರನ್ನೇ ಬೇರೆ ಸ್ಥಳದಲ್ಲಿ ನಿಲ್ಲಿಸುವಂತೆ ಹೇಳಿದ್ದರು. ಅದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಅದು ವಿಕೋಪಕ್ಕೆ ಹೋದಾಗ ಸಂತೋಷ್ ಮತ್ತು ರತ್ನಮ್ಮ ಕುಟುಂಬದ ಸದಸ್ಯರು ಕ್ರಿಕೆಟ್ ಬ್ಯಾಟ್, ಸ್ಟಂಪ್ಸ್, ದೊಣ್ಣೆ, ಚಾಕು ಹಿಡಿದು ಹೊಡೆದಾಟ ಮಾಡಿಕೊಂಡಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ನನ್ನ ಹಾಗೂ ಪತ್ನಿಯ ಮೇಲೆ ಹಲ್ಲೆ ನಡೆಸಲಾಗಿದೆ. ಪೊಲೀಸರಿಗೆ ಕರೆ ಮಾಡಿದ್ದಕ್ಕೆ ಮತ್ತಷ್ಟು ಕೆರಳಿದ ಆರೋಪಿಗಳು, ಕಾರನ್ನೂ ಜಖಂಗೊಳಿಸಿದ್ದಾರೆ’ ಎಂದು ಸಂತೋಷ್ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.