ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಗಣತಿಗಾರರಿಂದ ನಡೆಯುತ್ತಿರುವ ಜನಗಣತಿ ಕಾರ್ಯದ ಪ್ರಗತಿ ನಿಧಾನವಾಗಿದ್ದು ತೃಪ್ತಿಕರವಾಗಿಲ್ಲ. ಒಟ್ಟು 23,500 ಗಣತಿದಾರರು ಮತ್ತು 2,900 ಮೇಲ್ವಿಚಾರಕರಿದ್ದು, ಇವರಲ್ಲಿ ಸುಮಾರು 6,000 ಮಂದಿ ಅನುಮತಿಯಿಲ್ಲದೆ ಗೈರಾಗಿದ್ದಾರೆ ಎಂದು ನಗರ ಪಾಲಿಕೆ ಆಯುಕ್ತರು ಮಾಹಿತಿ ನೀಡಿದ್ದಾರೆ.

‘ಕಾರಣ ಕೇಳಿ ನೋಟಿಸ್, ಎಸ್ಎಂಎಸ್ ಮತ್ತು ಕರೆಗಳ ಮೂಲಕ ಜನಗಣತಿ ಕಾರ್ಯಕ್ಕೆ ಗೈರಾದವರನ್ನು ಸಂಪರ್ಕಿಸಲಾಗುತ್ತಿದೆ. ತಕ್ಷಣ ಕರ್ತವ್ಯಕ್ಕೆ ಹಾಜರಾಗದವರ ವಿರುದ್ಧ ‘ಕೆಲಸ ಇಲ್ಲ–ವೇತನ ಇಲ್ಲ’ ನಿಯಮ, ಸೇವೆ ವ್ಯತ್ಯಯ ಆದೇಶಗಳು ಜಾರಿಗೊಳ್ಳಲಿವೆ. ಹೆಚ್ಚು ನಿರ್ಲಕ್ಷ್ಯ ತೋರಿದವರ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಎಂದು ಹೇಳಿದ್ದಾರೆ.

ಅನುಮತಿಯಿಲ್ಲದೆ ಗೈರಾಗಿರುವ ಎಲ್ಲಾ ಸಿಬ್ಬಂದಿ ತಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಈ ಮೂಲಕ ಸೂಚಿಸಲಾಗಿದೆ. ಏಪ್ರಿಲ್ 24ರೊಳಗೆ ಹಾಜರಾಗದಿದ್ದರೆ ಕ್ರಮಕ್ಕೆ ಆದೇಶಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-4-1760814574

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.