ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಸೀಟು ಆಯ್ಕೆ ವೇಳೆ ವಿದ್ಯಾರ್ಥಿಗಳಿಗೆ ನೆರವಾಗಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ‘ಕೆಇಎ ಕನೆಕ್ಟ್’ ಆ್ಯಪ್ ಸಿದ್ಧಪಡಿಸಿದ್ದು, ಅನುಭವಿ ಅಧ್ಯಾಪಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಮಾರ್ಗದರ್ಶನ ಮಾಡಲಿದ್ದಾರೆ.

ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್ಗಳ ಪ್ರವೇಶಕ್ಕೆ 2026–27ನೇ ಸಾಲಿನಲ್ಲಿ ನೀಟ್, ಸಿಇಟಿ ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆಯುವ ವಿದ್ಯಾರ್ಥಿಗಳು ತಮ್ಮ ಆದ್ಯತೆಯ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಲು ಕನೆಕ್ಟ್ ಆ್ಯಪ್ ಸಹಾಯ ಮಾಡಲಿದೆ. ನುರಿತ ಅಧ್ಯಾಪಕರ ಜತೆಗೆ, 2025ರಲ್ಲಿ ನೀಟ್, ಸಿಇಟಿ ಮೂಲಕ ಪ್ರವೇಶ ಪಡೆದಿರುವ ಸುಮಾರು 4,500 ವಿದ್ಯಾರ್ಥಿಗಳು ಮೆಂಟರ್ಗಳಾಗಿ ನೋಂದಾಯಿಸಿಕೊಂಡಿದ್ದು, ವಿದ್ಯಾರ್ಥಿಗಳಿಗೆ ನೆರವಾಗಲಿದ್ದಾರೆ. ಪ್ರತಿ ಮೆಂಟರ್ಗೆ ಇಬ್ಬರು ವಿದ್ಯಾರ್ಥಿಗಳನ್ನು ನಿಯೋಜಿಸಲಾಗುತ್ತಿದ್ದು, ಮಾರ್ಗದರ್ಶನ ಸಂಪೂರ್ಣ ಉಚಿತ.

ಖಾಸಗಿ ಕಂಪನಿಗಳು, ಯೂಟ್ಯೂಬರ್ಗಳು ಮೆಂಟರ್ಗಳ ಹೆಸರಿನಲ್ಲಿ ಹಣ ಪಡೆದು ವಿದ್ಯಾರ್ಥಿಗಳನ್ನು ವಂಚಿಸುತ್ತಿರುವ ದೂರುಗಳು ಕೆಇಎಗೆ ಬಂದಿದ್ದವು. ಕೆಲವರು ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿ ನೀಡಿ, ಆಡಳಿತ ಮಂಡಳಿ ಕೋಟಾ ಆಯ್ಕೆ ಮಾಡಲು ಪ್ರೇರೇಪಿಸಿದ್ದರು. ಇಂತಹ ವಂಚನೆಗಳನ್ನು ತಡೆಯಲು ಕೆಇಎ ಹೊಸ ಆ್ಯಪ್ ಪರಿಚಯಿಸಿದೆ.

ಕಾರ್ಯ ನಿರ್ವಹಣೆ ಹೇಗೆ: ಆಕಾಂಕ್ಷಿಗಳು ಆ್ಯಪ್ಗೆ ಲಾಗಿನ್ ಆದ ತಕ್ಷಣ ಐವರು ಮೆಂಟರ್ಗಳ ವಿವರ ಕಾಣಿಸುತ್ತದೆ. ಅವರು ಓದುತ್ತಿರುವ ಕೋರ್ಸ್, ಕಾಲೇಜು ಹಾಗೂ ಹೆಸರುಗಳ ಮಾಹಿತಿ ಲಭ್ಯವಾಗುತ್ತದೆ. ವಿದ್ಯಾರ್ಥಿಗಳು ತಮಗೆ ಇಷ್ಟವಾದ ಮೆಂಟರ್ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ವಿದ್ಯಾರ್ಥಿನಿಯರಿಗೆ ಮಹಿಳಾ ಮೆಂಟರ್, ವಿದ್ಯಾರ್ಥಿಗಳಿಗೆ ಪುರುಷ ಮೆಂಟರ್ ನಿಯೋಜಿಸಲಾಗುತ್ತದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-51-293250435

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.