ಬೆಂಗಳೂರು: ಒಳಮೀಸಲಾತಿಯ ರೋಸ್ಟರ್ ಬಿಂದುವಿನ ಹಂಚಿಕೆ ಅವೈಜ್ಞಾನಿವಾಗಿದೆ ಎಂದು ಆರೋಪಿಸಿ, ಮಾರ್ಚ್ 24ರಂದು ‘ಬೆಂಗಳೂರು ಚಲೊ’–ಪ್ರತಿಭಟನಾ ಸಮಾವೇಶ ನಡೆಸಲು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ನಿರ್ಧರಿಸಿದೆ.

ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟವು ಬಂಜಾರ, ಭೋವಿ, ಕೊರಮ, ಕೊರಚ, ಛಲವಾದಿ, ಚರ್ಮಕಾರ, ಸೂಕ್ಷ್ಮಜಾತಿಗಳ ಸಂಘಗಳ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಹೋರಾಟ ಸಂಕಲ್ಪ ಸಮಾವೇಶದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಈಗ ಸಿದ್ಧಪಡಿಸಿರುವ ರೋಸ್ಟರ್ ಬಿಂದುಗಳನ್ನೇ ಅನುಸರಿಸಿದರೆ ಕಡಿಮೆ ಹುದ್ದೆಗಳಿರುವಲ್ಲಿ ‘ಎ’ ವರ್ಗಕ್ಕೆ ಮಾತ್ರ ಅವಕಾಶ ಸಿಗುತ್ತದೆ. ‘ಬಿ’ ಮತ್ತು ‘ಸಿ’ಯಲ್ಲಿ ಗುರುತಿಸಲಾಗಿರುವ ಸಮುದಾಯಗಳಿಗೆ ಮೀಸಲಾತಿ ದೊರೆಯುವುದಿಲ್ಲ ಎಂದು ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು.

‘ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ 17 ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ 7ಕ್ಕೆ ಹೆಚ್ಚಳ ಮಾಡಿತ್ತು. ಇದನ್ನು ಸಂವಿಧಾನದ 9ನೇ ಷೆಡ್ಯೂಲ್ಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಪ್ರಧಾನಿ ಬಳಿಗೆ ನಿಯೋಗ ಹೋಗಬೇಕು. ಒತ್ತಡ ಹೇರಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.

ದೇಶವ್ಯಾಪಿ ನಡೆಯಲಿರುವ ಜನಗಣತಿಯ ದತ್ತಾಂಶ ಬರುವವರೆಗೆ ಏಕಪಕ್ಷೀಯ ನಿರ್ಧಾರ ಮಾಡಬಾರದು. ರಾಜ್ಯದಲ್ಲಿ ಒಳ ಮೀಸಲಾತಿ ಹಂಚಿಕೆಯ ಪ್ರಕ್ರಿಯೆ ನಡೆಸುವ ಮುನ್ನ ಸಮುದಾಯಗಳ ಮುಖಂಡರೊಂದಿಗೆ ಸಮಾಲೋಚನೆ ನಡೆಸಬೇಕು. ಶೈಕ್ಷಣಿಕ, ವಸತಿನಿಲಯ ಪ್ರವೇಶ, ನೇಮಕಾತಿಗೆ ರೋಸ್ಟರ್ ಹಂಚಿಕೆ ಮಾಡಿ ಹೊರಡಿಸಿರುವ ಎಲ್ಲ ಆದೇಶ, ಸುತ್ತೋಲೆಗಳನ್ನು ಹಿಂಪಡೆಯಬೇಕು. ಈಗಾಗಲೇ ಹೊರಡಿಸಿರುವ ವಿವಿಧ ನೇಮಕಾತಿ ಅಧಿಸೂಚನೆಗಳನ್ನು ರದ್ದುಗೊಳಿಸಬೇಕು. ಹಳೆಯ ಜಾತಿ ಪ್ರಮಾಣ ಪತ್ರಗಳನ್ನೇ ಪರಿಗಣಿಸಬೇಕು ಎಂದು ಆಗ್ರಹಿಸಲಾಯಿತು.

ಭೋವಿ ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಶಾಸಕ ಮಾನಪ್ಪ ವಜ್ಜಲ್, ಮಾಜಿ ಸಚಿವ ಅರವಿಂದ ಲಿಂಬಾವಳಿ, ಸಮುದಾಯಗಳ ಮುಖಂಡರಾದ ಪಲ್ಲವಿ ಜಿ., ರಾಮಪ್ಪ, ಸೀತಾರಾಮ, ಕಿರಣ್ ಕುಮಾರ್, ರವಿಕುಮಾರ್, ಮುನಿರಾಜು, ರಾಜಾನಾಯ್ಕ್, ಅನಂತನಾಯ್ಕ್ ಸಹಿತ ಅನೇಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.