ಬೆಂಗಳೂರು: ನಗರದ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಕೆಲಸವನ್ನು ಗ್ರೇಟರ್ ಬೆಂಗಳೂರು ವೆಲ್ಫೇರ್ ಅಸೋಸಿಯೇಷನ್, ಗ್ರೇಟರ್ ಬೆಂಗಳೂರು ಸಿಟಿಜನ್ ಫೋರಂ ಮಾಡಬೇಕು ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಹೇಳಿದರು.

ವೆಲ್ಫೇರ್ ಅಸೋಸಿಯೇಷನ್ ಮತ್ತು ಸಿಟಿಜನ್ ಫೋರಂ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಎರಡು ಸಂಘಟನೆಗಳು ನಗರದ ಪ್ರತಿ ವಾರ್ಡ್ನಲ್ಲಿ ಸಮಿತಿ ಮಾಡಬೇಕು. ಸ್ಥಳೀಯ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ, ಜನಪ್ರತಿನಿಧಿಗಳ ಗಮನಕ್ಕೆ ತಂದು ಸರಿಪಡಿಸಬೇಕು ಎಂದು ಸಲಹೆ ನೀಡಿದರು.

‘ಸಮಾಜದಲ್ಲಿ ಆಗುವ ಅನ್ಯಾಯ, ವಂಚನೆ, ಭ್ರಷ್ಟಾಚಾರಗಳ ಬಗ್ಗೆ ಲೋಕಾಯುಕ್ತದ ಗಮನಕ್ಕೆ ತನ್ನಿ. ಆದರೆ, ಸುಮ್ಮನೆ ದೂರು ನೀಡಬಾರದು. ಲೋಕಾಯುಕ್ತಕ್ಕೆ ಬರುವ ದೂರುಗಳಲ್ಲಿ ವೈಯಕ್ತಿಕ ದ್ವೇಷದಿಂದ ನೀಡುವ ಸುಳ್ಳು ದೂರುಗಳೇ ಶೇ 50ರಷ್ಟು ಇರುತ್ತವೆ. ನ್ಯಾಯಯುತವಾದ ದೂರುಗಳ ಬಗ್ಗೆ ಕ್ರಮ ವಹಿಸಲಾಗುವುದು’ ಎಂದು ಹೇಳಿದರು.

ಫೋರಂ ಅಧ್ಯಕ್ಷ ಬಿ.ಆರ್. ರಾಮೇಗೌಡ ಮಾತನಾಡಿ, ‘ಬೆಂಗಳೂರಿಗೆ ಏನು ಬೇಕು ಎಂಬುದನ್ನು ಸ್ಥಳೀಯರೇ ನಿರ್ಧರಿಸುವಂತಾಗಬೇಕು. ಇಲ್ಲಿ ಏನು ಕೆಲಸ ಆಗಬೇಕು ಎಂದು ಸರ್ಕಾರದ ಗಮನ ಸೆಳೆಯಲಾಗುವುದು. ಸ್ಪಂದಿಸದೇ ಇದ್ದಾಗ ಹೋರಾಟದ ಮೂಲಕ ಒತ್ತಡ ತರಲಾಗುವುದು’ ಎಂದು ತಿಳಿಸಿದರು.

ಮಾಜಿ ಸಂಸದ ಬಿ.ಎನ್. ಬಚ್ಚೇಗೌಡ, ಫೋರಂ ಪ್ರಧಾನ ಕಾರ್ಯದರ್ಶಿ ವಿ.ಎನ್. ಕುಮಾರ್, ಉಪಾಧ್ಯಕ್ಷ ಪಿ. ಸೋಮಶೇಖರಯ್ಯ, ಸದಸ್ಯರಾದ ಕೆ.ವಿ. ಭಟ್, ಸುಂದರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬಿ.ಆರ್. ರಾಮೇಗೌಡರ ‘ವೃದ್ಧಾಪ್ಯವನ್ನು ತಡೆದು ಸದಾ ಯೌವನಸ್ಥರಾಗಿರಲು ಯೋಗ’ ಕೃತಿ ಜನಾರ್ಪಣೆ ಮಾಡಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-4-1168815237

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.