ಬೆಂಗಳೂರು: ಕೇಂದ್ರ ಹಾಗೂ ಪೂರ್ವ ನಗರ ಪಾಲಿಕೆಯ ಮೊದಲ ಬಜೆಟ್ನಲ್ಲಿ ಸ್ವಂತ ಸಂಪನ್ಮೂಲದ ಮೇಲೇ ಅವಲಂಬಿತವಾಗಿದ್ದರೂ ಕೈಗೆ ಬಾರದ ಹಣದಲ್ಲಿ ಹತ್ತಾರು ಯೋಜನೆಗಳನ್ನು ಅನುಷ್ಠಾನಗೊಳಿಸುವ ಕನಸನ್ನು ಕಾಣಲಾಗಿದೆ.

ರಾಜ್ಯ ಸರ್ಕಾರ, ‘ವಿಶೇಷ ಮೂಲಸೌಕರ್ಯಕ್ಕೆ ಬಂಡವಾಳ ಬೆಂಬಲ’ ಯೋಜನೆ ಮೂಲಕ ಬಿಬಿಎಂಪಿಗೆ ನೀಡುತ್ತಿದ್ದ ₹3 ಸಾವಿರ ಕೋಟಿ ಅನುದಾನವನ್ನು ಐದು ನಗರ ಪಾಲಿಕೆಗಳಿಗೆ ವಿಂಗಡಣೆ ಮಾಡಲಾಗಿದೆ. ಈ ಹಣ ನಗರ ಪಾಲಿಕೆಗಳ ಬಜೆಟ್ನಲ್ಲಿ ನಮೂದಾಗಿ, ಗಾತ್ರ ಹಿರಿದಾಗಿದೆ. ಆದರೆ, ಈ ಅನುದಾನಕ್ಕಿಂತ ಹೆಚ್ಚಿನ ಹಣವನ್ನು ನಗರ ಪಾಲಿಕೆಗಳು ಜಿಬಿಎ ಮತ್ತು ಬೃಹತ್ ಯೋಜನೆಗಳನ್ನು ಅನುಷ್ಠಾನಗೊಳಿಸುವ ಬಿ–ಸ್ಮೈಲ್ಗೆ ವರ್ಗಾಯಿಸಬೇಕಾಗಿದೆ. ಅಲ್ಲದೆ, ಘನತ್ಯಾಜ್ಯ ನಿರ್ವಹಣೆ, ಆಡಳಿತ ವೆಚ್ಚಕ್ಕೆ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತಕ್ಕೆ (ಬಿಎಸ್ಡಬ್ಲ್ಯುಎಂಎಲ್) ನೂರಾರು ಕೋಟಿ ನೀಡಬೇಕಾಗಿದೆ.

ರಾಜ್ಯ ಸರ್ಕಾರದ ಅನುದಾನ ನಗರ ಪಾಲಿಕೆಗಳ ಬಜೆಟ್ನಲ್ಲಿ ನಮೂದಾಗಿದ್ದರೂ ಅದು ಪಾಲಿಕೆ ಪ್ರಕಟಿಸಿರುವ ತನ್ನದೇ ಯೋಜನೆಗಳ ಅನುಷ್ಠಾನಕ್ಕೆ ಬಳಸಲು ಬರುವುದಿಲ್ಲ. ಇನ್ನು, ಆಸ್ತಿ ತೆರಿಗೆ, ಇತರೆ ಕರಗಳಿಂದ ಅತಿಹೆಚ್ಚು ಆದಾಯವಿದೆ ಎಂದು ತೋರಿಸಿದ್ದರೂ, ಪಾಲಿಕೆಯ ಇತಿಹಾಸದಲ್ಲೇ ಅಷ್ಟು ಹಣ ಬಂದಿಲ್ಲ.

ಕೇಂದ್ರ ನಗರ ಪಾಲಿಕೆ ಮುನಿಸಿಪಲ್ ಬಾಂಡ್ನಿಂದ ₹200 ಕೋಟಿ ಸಂಗ್ರಹಿಸುತ್ತದೆ ಎಂದು ಹೇಳಿದ್ದರೆ, ಪೂರ್ವ ನಗರ ಪಾಲಿಕೆ ಬಜೆಟ್ ಪುಸ್ತಕದಲ್ಲಿ ಇದನ್ನು ಮುಚ್ಚಿಟ್ಟಿದೆ. ಆದರೆ, ಬಜೆಟ್ ಅಂದಾಜು ಪುಸ್ತಕದಲ್ಲಿ ₹226 ಕೋಟಿಯನ್ನು ಮುನಿಸಿಪಲ್ ಬಾಂಡ್ನಿಂದ ಸಂಗ್ರಹಿಸುವ ಸಾಲ ಎಂದು ತೋರಿಸಲಾಗಿದೆ. ಇನ್ನು, ಮುನಿಸಿಪಲ್ ಬಾಂಡ್ಗೆ ಶೇ 8ರಷ್ಟು ಬಡ್ಡಿ ನೀಡುವುದಾಗಿಯೂ ಪಾಲಿಕೆಗಳು ಹೇಳಿಕೊಂಡಿವೆ.

ಸಾರ್ವಜನಿಕ ಕಾಮಗಾರಿಗಳಿಗೆ ಬಜೆಟ್ ಗಾತ್ರದ ಶೇ 62–63ರಷ್ಟು ಹಣ ಒದಗಿಸುವುದಾಗಿ ಹೇಳಲಾಗಿದೆ. ಆದರೆ, ಬಾಂಡ್ ಮೂಲಕ ತೆಗೆದುಕೊಳ್ಳುವ ಸಾಲಕ್ಕೆ ಬಡ್ಡಿಯನ್ನೂ ಪಾವತಿಸಬೇಕಾದ ನಗರ ಪಾಲಿಕೆಗಳು, ಆಸ್ತಿ ತೆರಿಗೆ ಹಾಗೂ ಇತರೆ ಸಂಬಂಧಿತ ಕರ, ಶುಲ್ಕಗಳನ್ನೇ ಯೋಜನೆಗಳಿಗೆ ನಂಬಿಕೊಳ್ಳಬೇಕಿದೆ. ಇದಕ್ಕಿಂತ ಮೊದಲು, ಸಿಬ್ಬಂದಿಗೆ ವೇತನ ಹಾಗೂ ಆಡಳಿತಾತ್ಮಕ ವೆಚ್ಚಗಳಿಗೇ ತನ್ನ ಸ್ವಂತ ಆರ್ಥಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದರ ಜೊತೆಗೆ, ಈಗಾಗಲೇ ಪ್ರಗತಿಯಲ್ಲಿರುವ ಯೋಜನೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚವನ್ನೂ ಭರಿಸಬೇಕಾಗುತ್ತದೆ.

ಜಿಬಿಎ, ಬಿ–ಸ್ಮೈಲ್, ಬಿಎಸ್ಡಬ್ಲ್ಯುಎಂಎಲ್ಗೆ ನೀಡಬೇಕಾದ ಹಣ, ಉಸ್ತುವಾರಿ ಸಚಿವರು, ಮೇಯರ್–ಉಪಮೇಯರ್, ಆಯುಕ್ತರ ನಿಧಿಯನ್ನೂ ನೀಡಿದರೆ ಇವೆಲ್ಲವೂ ಮುಗಿದ ಮೇಲೆ ಸಾರ್ವಜನಿಕ ಕಾಮಗಾರಿಗಳು ಸೇರಿದಂತೆ ಪ್ರಕಟಿಸಲಾಗಿರುವ ಹೊಸ ಯೋಜನೆಗಳಿಗೆ ಹಣ ಒದಗಿಸಲು ಕೈಯಲ್ಲಿ ಬಿಡಿಗಾಸು ಇಲ್ಲದಂತಾಗುತ್ತದೆ.

ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆಯಾದರೆ ಅತಿಹೆಚ್ಚು ಆದಾಯ ಬರುತ್ತದೆ ಎಂದು ಪಾಲಿಕೆಗಳು ಬಜೆಟ್ನಲ್ಲಿ ನಿರೀಕ್ಷಿಸಿವೆ. ಆದರೆ, ಐದು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಐದು ತಿಂಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಅರ್ಜಿಗಳು ಬಂದಿವೆ. ಅವುಗಳಲ್ಲಿ ಶೇ 20ರಷ್ಟೂ ವಿಲೇವಾರಿಯಾಗಿಲ್ಲ. ಪ್ರೀಮಿಯಂ ಎಫ್ಎಆರ್ನಲ್ಲಿ ನೂರಾರು ಕೋಟಿ ಬರುತ್ತದೆ ಎಂದು ಹೇಳಲಾಗಿದ್ದು, ಅದು ಸಂಗ್ರಹವಾದರೂ ಅದನ್ನು ಬಿ–ಸ್ಮೈಲ್ಗೆ ವರ್ಗಾಯಿಸಲಾಗುತ್ತದೆ ಎಂದು ಬಜೆಟ್ನಲ್ಲಿ ಹೇಳಲಾಗಿದೆ. ಹೀಗಾಗಿ, ಹಣವಿಲ್ಲದಿದ್ದರೂ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಬಜೆಟ್ನಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.