ಬೆಂಗಳೂರು: ಐಪಿಎಲ್ ಹಾಗೂ ಆರ್ಸಿಬಿ ಹವಾ ಶುರುವಾಗಿರುವ ನಡುವೆಯೇ ಬೆಂಗಳೂರಿನಲ್ಲಿ ಸ್ವಚ್ಛತೆಗೂ ವಿಭಿನ್ನ ಐಪಿಎಲ್ ಆರಂಭಗೊಂಡಿದೆ. ಅದು ಇಂಡಿಯನ್ ಪ್ರೀಮಿಯರ್ ಲೀಗ್. ಆದರೆ, ಇದು ಇಂಡಿಯನ್ ಪೆಡಸ್ಟ್ರಿಯನ್ ಲೀಗ್. ರಸ್ತೆ ಕ್ಲೀನ್ ಅಪ್ ಬೆಂಗಳೂರು(ಆರ್ಸಿಬಿ) ಎನ್ನುವ ಹೆಸರನ್ನೂ ಇದಕ್ಕೆ ಇಡಲಾಗಿದೆ.

ನಗರದ ಪ್ರಮುಖ ರಸ್ತೆ ಹಾಗೂ ರಸ್ತೆ ಬದಿಯ ಜಾಗವನ್ನು ಸ್ವಚ್ಛವಾಗಿಡುವ, ಕಸ ಎಸೆದು ಪರಿಸರ ಹಾಳು ಮಾಡುವುದನ್ನು ತಪ್ಪಿಸಿ ಸ್ಥಳೀಯರಲ್ಲಿ ಜಾಗೃತಿ ಮೂಡಿಸುವ ಅಭಿಯಾನವಿದು.

ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತವು ಸ್ವಚ್ಚ ಸರ್ವೇಕ್ಷಣ– 2026ಅಡಿಯಲ್ಲಿ ಈಗಾಗಲೇ ಹಲವು ಚಟುವಟಿಕೆ ಗಳನ್ನು ಆರಂಭಿಸಿದೆ. ಇದರ ಭಾಗವಾಗಿ ಎರಡು ವಾರ ವಿಭಿನ್ನವಾಗಿ ಕಾರ್ಯಕ್ರಮ ರೂಪಿಸಲಾಗಿದೆ.

ನಗರದಲ್ಲಿ ಕಸ ಸಂಗ್ರಹಣೆ, ವಿಂಗಡಣೆ ಹಾಗೂ ನಿರ್ವಹಣೆ ಸವಾಲಿನ ಕೆಲಸ. ಈಗಾಗಲೇ ಪ್ರತಿನಿತ್ಯ ಸಾವಿರಾರು ಮಂದಿ ಪೌರಕಾರ್ಮಿಕರು, ಅಧಿಕಾರಿಗಳ ತಂಡದೊಂದಿಗೆ ಪ್ರತ್ಯೇಕ ಘಟಕ ಕಾರ್ಯನಿರತವಾಗಿದೆ.

ಹಲವು ಕಡೆ ಕಸ ಎಸೆಯುವುದನ್ನು ತಪ್ಪಿಸಿ, ಮನೆಯಿಂದ ಸಂಗ್ರಹಿಸುವ ಕಾರ್ಮಿಕರಿಗೆ ಕಸ ನೀಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ, ಒಂದು ಕಡೆ ವಾಹನ ನಿಲ್ಲಿಸಿದರೆ ಮತ್ತೊಂದು ಕಡೆ ಕಸ ಎಸೆದು ಹೋಗುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಈ ಕಾರಣ ದಿಂದಲೇ ಈಗ ಒಂದೂವರೆ ತಿಂಗಳು ಐಪಿಎಲ್ ಕ್ರಿಕೆಟ್ ಹವಾ ಇರುವುದರಿಂದ ಅದನ್ನೇ ಬಳಸಿಕೊಂಡು ನಗರದ ಹಲವೆಡೆ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ.

ಜಿಬಿಎ ವ್ಯಾಪ್ತಿಯ 27 ವಿಧಾನಸಭಾ ಕ್ಷೇತ್ರಗಳ ಪ್ರಮುಖ ರಸ್ತೆಯಲ್ಲಿ ಕಸ ಎಸೆಯುವ ಎರಡು ಜಾಗಗಳನ್ನು ಗುರುತಿಸಿ ಅವುಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಕಸ ತೆರವಿನ ನಂತರ ಇಡೀ ಪರಿಸರವನ್ನು ಸುಂದರಗೊಳಿಸಿ ಅಲ್ಲಿ ಕಸ ಹಾಕದಂತೆ ಮಾಡಲಾಗುತ್ತಿದೆ.

ನಿಲ್ಲದ ಕಸ ಎಸೆತ: ಶಾಂತಿನಗರದ ವರ್ತುಲ ರಸ್ತೆ, ಶಿವಾಜಿನಗರ ಬಸ್ ನಿಲ್ದಾಣ ಸಮೀಪ, ಕಂಟೋನ್ಮೆಂಟ್ ನಿಲ್ದಾಣ ಸೇರಿದಂತೆ ಹಲವು ಜಾಗಗಳನ್ನು ಗುರುತಿಸಿ ಕೇಂದ್ರ ನಗರಪಾಲಿಕೆಯಿಂದ ಸ್ವಚ್ಛತೆ ಅಭಿಯಾನ ಕೈಗೊಳ್ಳಲಾಗಿದೆ. ಸ್ಥಳೀಯ ಸ್ವಯಂ ಸೇವಾ ಸಂಘಟನೆಗಳು ಇದಕ್ಕೆ ಕೈ ಜೋಡಿಸಿವೆ.

ಶಾಂತಿನಗರ ವರ್ತುಲ ರಸ್ತೆ ಬಳಿ ಜನ ವಸತಿ ಕಡಿಮೆ. ಇದು ಮಿಲಿಟರಿ ಪ್ರದೇಶ ಆಗಿರುವುದರಿಂದ ಬೀದಿ ಬದಿ ವ್ಯಾಪಾರಿಗಳು ಕಸ ಎಸೆಯುವುದನ್ನು ನಗರ ಪಾಲಿಕೆ ಅಧಿಕಾರಿಗಳೇ ಪತ್ತೆ ಮಾಡಿದ್ದಾರೆ. ಹಲವು ಬಾರಿ ಸೂಚನೆ ನೀಡಿದ್ದರೂ ರಸ್ತೆ ದಾಟುವಾಗ ಎಸೆದು ಹೋಗುತ್ತಾರೆ.

ಅದೇ ರೀತಿ ಶಿವಾಜಿನಗರ ಭಾಗದಲ್ಲಿ ಕಸವನ್ನು ಜನರೇ ಎಸೆದು ಹೋಗುತ್ತಿದ್ದಾರೆ. ಬಹುತೇಕ ನಗರದ ಪ್ರಮುಖ ಬಡಾವಣೆಗಳ ಒಂದೊಂದು ಕಡೆ ಇಂತಹ ಸಮಸ್ಯೆ ಇದೆ.

’ಈಗಾಗಲೇ ಸಮಸ್ಯೆ ಇರುವ ಸ್ಥಳಗಳನ್ನು ಪಟ್ಟಿ ಮಾಡಿ ಅಲ್ಲಿ ಬೆಳಿಗ್ಗೆ 7 ರಿಂದ 11 ರವರೆಗೆ ಸ್ವಚ್ಛತೆ ಕೈಗೊಂಡಿದ್ದೇವೆ. ಶಾಂತಿನಗರದಲ್ಲಿಯೇ ಎರಡು ಟನ್ ಕಸ ಸಿಕ್ಕಿತು. ಅದನ್ನು ಸಾಗಿಸಿ ಅಲ್ಲಿ ಗೋಡೆ ನಿರ್ಮಿಸಿ ಹಸಿರು ಪಟ್ಟಿ ಹಾಕಿ ಸ್ವಚ್ಛವಾಗಿ ಮಾಡಿದ್ದೇವೆ. ಇದೇ ರೀತಿ ಇತರ ಕಡೆಯೂ ಚಟುವಟಿಕೆ ನಡೆದಿದೆ’ ಎಂದು ಶಾಂತಿನಗರ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಪ್ಪುರಾಜ್ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-4-168111003

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.