ಬೆಂಗಳೂರು: ನಗರದ ಹವಾಮಾನ ಕ್ರಮಗಳನ್ನು ಬಲಪಡಿಸುವ ‘ಬೆಂಗಳೂರು ಹವಾಮಾನ ಶೃಂಗ ಸಮಾವೇಶ’ ಜೂನ್ 4 ಮತ್ತು 5ರಂದು ನಡೆಯಲಿದೆ.

ಶೃಂಗ ಸಮಾವೇಶದ ವೆಬ್ಸೈಟ್ (www.bengaluruclimatesummit.com) ಹಾಗೂ‘ಆಲ್ಟರ್ನೇಟಿವ್–26’ ಲೋಗೊವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗುರುವಾರ ಅನಾವರಣ ಮಾಡಿದರು.

ಅನಾವರಣದ ನಂತರ ಮಾತನಾಡಿದ ವಿಮೋವೇ ಪ್ರತಿಷ್ಠಾನದ ಸಂಸ್ಥಾಪಕ ವಿನಯ್ ಶಿಂಧೆ, ‘ಬೆಂಗಳೂರಿನ ವೈಟ್ಫೀಲ್ಡ್ ಮಾಹಿತಿ ತಂತ್ರಜ್ಞಾನ ಕಾರಿಡಾರ್ನ ಸಿಎಂಆರ್ ಐಟಿಯ ಎಸಿಇಎಸ್ ಕ್ಯಾಂಪಸ್ನಲ್ಲಿ ನಡೆಯಲಿದ್ದು, ವಿಶ್ವ ಪರಿಸರ ದಿನದ ಅಂಗವಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ಪರಿಸರ ಸಂರಕ್ಷಣೆಗಾಗಿ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಒಂದೇ ವೇದಿಕೆಯಲ್ಲಿ ಸೇರಲಿದ್ದಾರೆ. ಇದು ವಿಮೋವೇ ಫೌಂಡೇಷನ್ ನಡೆಸುತ್ತಿರುವ ಜಾಗೃತಿ ಕಾರ್ಯಕ್ರಮಗಳ 7ನೇ ಆವೃತ್ತಿಯಾಗಿದೆ’ ಎಂದರು.

‘ಹವಾಮಾನ ತಂತ್ರಜ್ಞಾನ ಮತ್ತು ನಾವೀನ್ಯದ ಪ್ರದರ್ಶನಗಳು, ವಿವಿಧ ವಿಷಯಾಧಾರಿತ ಚರ್ಚೆಗಳು, ಹವಾಮಾನ ಮತ್ತು ಪರಿಸರ ಕುರಿತ ಸೃಜನಾತ್ಮಕ ಕಲಾ ಪ್ರದರ್ಶನಗಳುನಡೆಯಲಿವೆ. ಬೆಂಗಳೂರಿನ ಬದಲಾವಣೆಯ ಹರಿಕಾರರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಯುವಜನರಿಗೆ ತಂತ್ರಜ್ಞಾನ ಆಧಾರಿತ ಹ್ಯಾಕಥಾನ್ ಹಮ್ಮಿಕೊಳ್ಳಲಾಗುವುದು. ನಾಗರಿಕರು, ಪರಿಸರ ತಜ್ಞರು, ಯುವಕರು, ನಿವಾಸಿ ಸಂಘಗಳು ಮತ್ತು ಕೈಗಾರಿಕಾ ವಲಯದ ನಾಯಕರನ್ನು ಒಗ್ಗೂಡಿಸಿ, ಶಾಶ್ವತ ಭವಿಷ್ಯದತ್ತ ಅರ್ಥಪೂರ್ಣ ಚರ್ಚೆ ನಡೆಸಲಾಗುವುದು’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.