ಬೆಂಗಳೂರು: ಹೊಸ ಮುಖ್ಯಮಂತ್ರಿಯನ್ನು ಎದುರುಗೊಳ್ಳಲು ನಗರದೆಲ್ಲೆಡೆ ಕಟೌಟ್, ಫ್ಲೆಕ್ಸ್, ಪೋಸ್ಟರ್ಗಳು ರಾರಾಜಿಸುತ್ತಿವೆ. ಅವರ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರ ಸಂಭ್ರಮ ಮುಗಿಲುಮುಟ್ಟಿದೆ.

ಕಟೌಟ್ ತಯಾರಕರು ಹಾಗೂ ಮುದ್ರಕರಿಗೆ ಪ್ರವಾಹೋಪಾದಿಯಲ್ಲಿ ಬೇಡಿಕೆ ಬಂದಿದ್ದು, ಹಲವರು ನೂರಕ್ಕೂ ಹೆಚ್ಚು ಕಟೌಟ್ ಮತ್ತು ಫ್ಲೆಕ್ಸ್ ಸಿದ್ಧಪಡಿಸುವ ಮತ್ತು ಅಳವಡಿಸುವ ಕಾರ್ಯ ಮುಂದು ವರಿಸಿರುವುದು ಮಂಗಳವಾರವೂ ಕಂಡುಬಂತು.

ರಾಜಭವನ ರಸ್ತೆ, ಅಂಬೇಡ್ಕರ್ ವೀದಿ, ರೇಸ್ಕೋರ್ಸ್ ರಸ್ತೆ, ಶೇಷಾದ್ರಿ ರಸ್ತೆ, ಕಾಂಗ್ರೆಸ್ ಕಚೇರಿ ಇರುವ ಕ್ವೀನ್ಸ್ ರಸ್ತೆ, ವಸಂತನಗರ, ಗಾಂಧಿನಗರದ ರಸ್ತೆಗಳ ಎರಡೂ ಬದಿಗಳಲ್ಲಿ ಸಾವಿರಾರು ಬ್ಯಾನರ್ಗಳನ್ನು ಅಳವಡಿಸಲಾಗಿದೆ. ಕನಕಪುರ ರಸ್ತೆ, ಬಳ್ಳಾರಿ ರಸ್ತೆ ಹಾಗೂ ಮೈಸೂರು ರಸ್ತೆಗಳಲ್ಲೂ ಬ್ಯಾನರ್ಗಳು ರಾರಾಜಿಸುತ್ತಿವೆ. ರಸ್ತೆ ವಿಭಜಕಗಳಲ್ಲಿಕಾಂಗ್ರೆಸ್ ಪಕ್ಷದ ಬಾವುಟಗಳನ್ನು ಹಾರಿಸಲಾಗಿದೆ.

ಶಿವಕುಮಾರ್ ಅವರ ಸದಾಶಿವನಗರ ಮನೆಯ ಬಳಿಯಲ್ಲಿ ಭದ್ರತೆ ಇನ್ನಷ್ಟು ಹೆಚ್ಚಿಸಲಾಗಿದೆ. ಮನೆಯ ಬಳಿ ‘ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆಗಳು’ ಎಂಬ ಬ್ಯಾನರ್ಗಳನ್ನು ಹಾಕಲಾಗಿದೆ. ಸದಾಶಿವ ನಗರದಿಂದ ಅರಮನೆ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳು, ಅರಮನೆ ರಸ್ತೆಗಳಲ್ಲಿ ಬ್ಯಾನರ್ಗಳನ್ನು ಅಳವಡಿಸಲಾಗಿದೆ.

ಸೋಮವಾರ ರಾತ್ರಿಯಿಂದಲೇ ಬ್ಯಾನರ್ಗಳನ್ನು ಅಳವಡಿಸುವ ಕೆಲಸ ಭರದಿಂದ ಸಾಗಿದೆ. ಬಹುತೇಕ ಬ್ಯಾನರ್ಗಳಲ್ಲಿ ಶಿವಕುಮಾರ್ ಅವರ ಚಿತ್ರವನ್ನು ಮುದ್ರಿಸಲಾಗಿದೆ. ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಅವರ ಚಿತ್ರಗಳಿರುವ ಬ್ಯಾನರ್ಗಳನ್ನು ಅಲ್ಲಲ್ಲಿ ಅಳವಡಿಸಲಾಗಿದೆ. ರೇಸ್ಕೋರ್ಸ್ ರಸ್ತೆಯಲ್ಲಿ ರುವ ಹಳೆಯ ಕಾಂಗ್ರೆಸ್ ಭವನದ ಆವರಣದಲ್ಲಿ ನೂತನ ಕಾಂಗ್ರೆಸ್ ಭವನದ ನಿರ್ಮಾಣಕ್ಕೆ ಶಂಕುಸ್ಥಾಪನಾ ಕಾರ್ಯಕ್ರಮವೂ ಬುಧವಾರ ನಡೆಯಲಿದೆ. ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದ ನಂತರ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಶಿವಕುಮಾರ್, ಸಿದ್ದರಾಮಯ್ಯ ಸೇರಿ ಹಲವು ನಾಯಕರು ಶಂಕುಸ್ಥಾಪನೆಯಲ್ಲಿ ಭಾಗಿಯಾಗಲಿದ್ದಾರೆ. ಇದಕ್ಕಾಗಿಯೂ ಭಾರಿ ಪ್ರಮಾಣದ ಸಿದ್ಧತೆ ನಡೆದಿದೆ.

ವಾರದಿಂದಲೂ ಕೆಲಸ : ‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ ಕಟೌಟ್, ಫ್ಲೆಕ್ಸ್ಗಳ ತಯಾರಿಕೆಗೆ ಬೇಡಿಕೆ ಬಂದಿದೆ. ಮೇ 27ರಿಂದಲೇ ಕೆಲಸ ಬಿರುಸಾಗಿ ನಡೆದಿದ್ದು, ಈಗಾಗಲೇ ಅಧಿಕ ಮಂದಿ ಬುಕ್ಕಿಂಗ್ ಮಾಡಿರುವುದರಿಂದ ಅವಧಿಯೊಳಗೆ ಬೇಡಿಕೆ ಪೂರೈಸುವುದು ಸವಾಲಾಗಿದೆ’ ಎನ್ನುತ್ತಾರೆ ರಾಜರಾಜೇಶ್ವರಿ ನಗರದ ‘ಗಾನ್ಯ ಪ್ರಿಂಟ್ಸ್’ ಮಾಲೀಕ ಮಂಜುನಾಥ.

‘ಮುದ್ರಣ ಸಾಮರ್ಥ್ಯವನ್ನೂ ಮೀರಿ ಕಟೌಟ್ ತಯಾರಿಸಿ ಕೊಡುವುದಾಗಿ ಭರವಸೆ ನೀಡಿದ್ದ ಮುದ್ರಕರು, ಅವಧಿಯೊಳಗೆ ಕೆಲಸ ಮುಗಿಸಲು ಕಷ್ಟಪಡುತ್ತಿದ್ದಾರೆ. ಹಲವರು ನಮ್ಮ ಮಳಿಗೆಯತ್ತಲೂ ಬಂದಿದ್ದರು. ಅವರನ್ನು ವಾಪಸ್ ಕಳುಹಿಸಲಾಗಿದೆ. ಕಳೆದ ಒಂದು ವಾರದಲ್ಲಿ 500 ಬ್ಯಾನರ್ಗಳನ್ನುತಯಾರಿಸಿದ್ದೇವೆ. ಶಿವಕುಮಾರ್ ಪ್ರಮಾಣವಚನ ಸ್ವೀಕರಿಸುವ ಸಂದರ್ಭವಾಗಿರುವ ಕಾರಣ, ಹೆಚ್ಚು ಬೇಡಿಕೆ ಬರುತ್ತಿದೆ. 2023ರಲ್ಲೂ ಇಷ್ಟೇ ಒತ್ತಡವಿತ್ತು’ ಎಂದರು.

‘ಚನ್ನಪಟ್ಟಣ, ಬಿಡದಿ, ರಾಮನಗರದ ಶಿವಕುಮಾರ್ ಅಭಿಮಾನಿ ಗಳಿಂದ ಅಭಿನಂದನೆಯ ಹೋರ್ಡಿಂಗ್ ತಯಾರಿಸಬೇಕೆಂದು ಬೇಡಿಕೆ ಬಂದಿದೆ. ನಗರದ ಹೊರ ಭಾಗಗಳಿಂದಲೂ ಗ್ರಾಹಕರು ಬರುತ್ತಿದ್ದಾರೆ’ ಎನ್ನುತ್ತಾರೆ ಹೋರ್ಡಿಂಗ್ ಮಾತ್ರ ತಯಾರಿಸುತ್ತಿರುವ ನಾಯಂಡಹಳ್ಳಿಯ ಆದಿ ಡಿಜಿಟಲ್ ಪ್ರಿಂಟರ್ಸ್ ಅಮರ್.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-51-1503564872

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.