ಬೆಂಗಳೂರು: ಬಿಎಸ್ಎನ್ಎಲ್ ಸಿಬ್ಬಂದಿ ಯಂತೆ ಸಮವಸ್ತ್ರ ಧರಿಸಿಕೊಂಡು, ಮಾಡ್ಯೂಲ್ಸ್ ಹಾಗೂ ತಾಮ್ರದ ಕೇಬಲ್ ಕಳ್ಳತನ ಮಾಡುತ್ತಿದ್ದ ಅಂತರ ರಾಜ್ಯದ ಮೂವರನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉತ್ತರಪ್ರದೇಶದ ಚೌವ್ಹಾಣ್ (32), ಸಂದೀಪ್ (23) ಹಾಗೂ ಸೈಯದ್ ಜಾಹೇದ್ ಹಸನ್ (40) ಬಂಧಿತರು. ಮತ್ತೊಬ್ಬ ಆರೋಪಿ ಶೋಯಬ್ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಬಂಧಿತರಿಂದ ₹7 ಲಕ್ಷ ಮೌಲ್ಯದ 4,140 ಮಾಡ್ಯೂಲ್ಸ್ ಮತ್ತು 60 ಮೀಟರ್ ತಾಮ್ರದ ಕೇಬಲ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಉತ್ತರಪ್ರದೇಶದಿಂದ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ಮೂವರು ಆರೋಪಿಗಳು, ಬಿಎಸ್ ಎನ್ಎಲ್ ಸಿಬ್ಬಂದಿ ಯಂತೆ ನೀಲಿ ಬಣ್ಣದ ಶರ್ಟ್ ಹಾಗೂ ಬಿಳಿ ಬಣ್ಣದ ಹೆಲ್ಮೆಟ್ ಗಳನ್ನು ಧರಿಸಿ ಕೊಂಡು ಮತ್ತಿಕೆರೆ, ಯಶವಂತಪುರ, ಮಲ್ಲೇಶ್ವರ ಹಾಗೂ ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಡ್ಡಾಡುತ್ತಿದ್ದರು. ಪಾದಚಾರಿ ಮಾರ್ಗದ ಬಳಿ ಬಿಎಸ್ಎನ್ಎಲ್ ಕಂಪನಿಗೆ ಸಂಬಂಧಿಸಿದ ಟೆಲಿಫೋನ್, ಇಂಟರ್ನೆಟ್ ಹಾಗೂ ಲ್ಯಾನ್ಗೆ ಅಳವಡಿಸಿರುವಂತಹ ಪಿಲ್ಲರ್ಗಳನ್ನು ಪಿಕಾಸಿ, ಸುತ್ತಿಗೆ, ಸ್ಕ್ರೂಡ್ರೈವರ್ ಹಾಗೂ ಕಟರ್ಗಳನ್ನು ಬಳಸಿ ಒಡೆದು ಹಾಕುತ್ತಿದ್ದರು. ಬಳಿಕ ಮಾಡ್ಯೂಲ್ ಹಾಗೂ ತಾಮ್ರದ ಕೇಬಲ್ ಕಳ್ಳತನ ಮಾಡುತ್ತಿದ್ದರು. ರಸ್ತೆಬದಿಯಲ್ಲಿ ನಡೆದು ತೆರಳುವವರು ಹಾಗೂ ವಾಹನ ಸವಾರರು, ಬಿಎಸ್ಎನ್ಎಲ್ ಸಿಬ್ಬಂದಿಯೇ ಕೇಬಲ್ ದುರಸ್ತಿ ಮಾಡುತ್ತಿರಬಹುದೆಂದು ಭಾವಿಸುತ್ತಿದ್ದರು ಎಂದು ಪೊಲೀಸರು ಹೇಳಿದರು.

ಕಳ್ಳತನ ಮಾಡಿದ್ದ 4,140 ಮಾಡ್ಯೂಲ್ಸ್ ಹಾಗೂ ತಾಮ್ರದ ಕೇಬಲ್ ಅನ್ನು ರೈಲು ಮೂಲಕ ಉತ್ತರಪ್ರದೇಶಕ್ಕೆ ಸಾಗಿಸಲು ಮುಂದಾಗಿದ್ದರು. ಆಗ ಖಚಿತ ಮಾಹಿತಿ ಆಧರಿಸಿ, ಕಾರ್ಯಾಚರಣೆ ನಡೆಸಿ ರೈಲು ನಿಲ್ದಾಣದಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

‘ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಮೂವರಿಗೆ ನ್ಯಾಯಾಂಗ ಬಂಧನ ವಿಧಿಸಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಉತ್ತರ ವಿಭಾಗದ ಡಿಸಿಪಿ ಬಿ.ಎಸ್.ನೇಮಗೌಡ ಅವರ ಮಾರ್ಗದರ್ಶನದಲ್ಲಿ ಯಶವಂತಪುರ ಠಾಣೆಯ ಇನ್ಸ್ಪೆಕ್ಟರ್ ಎಸ್.ಮಂಜುನಾಥ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-4-1512104445

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.