ಗುರುವಾರ , ಜುಲೈ 7, 2022
21 °C

ಬೆಂಗಳೂರು: ಗೋಡೆ ಕೊರೆದು ಚಿನ್ನಾಭರಣ ಮಳಿಗೆಗೆ ಕನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿನ್ನಾಭರಣ ಮಳಿಗೆಯೊಂದರ ಗೋಡೆ ಕೊರೆದು ಒಳನುಗ್ಗಿ ಕಳ್ಳತನ ಮಾಡಲಾಗಿದ್ದು, ಈ ಬಗ್ಗೆ ಹೆಣ್ಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಥಣಿಸಂದ್ರ ಮುಖ್ಯರಸ್ತೆಯ ವಿದ್ಯಾಸಾಗರ್ ಬಳಿಯ ‘ರಾಘವೇಂದ್ರ ಜ್ಯುವೆಲರ್ಸ್ ಆ್ಯಂಡ್ ಬಾಲಾಜಿ ಬ್ಯಾಂಕರ್ಸ್’ ಮಳಿಗೆಯಲ್ಲಿ ಕಳ್ಳತನ ನಡೆದಿದೆ. ಅರ್ಧ ಕೆ.ಜಿ ಚಿನ್ನಾಭರಣ ಕದ್ದುಕೊಂಡು ಕಳ್ಳರು ಪರಾರಿಯಾಗಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಮಳಿಗೆಯ ಗೋಡೆಯೊಂದನ್ನು ಡ್ರಿಲ್ಲಿಂಗ್ ಉಪಕರಣದಿಂದ ವೃತ್ತಾಕಾರದಲ್ಲಿ ಕೊರೆಯಲಾಗಿದೆ. ಅದೇ ಕಿಂಡಿ ಮೂಲಕವೇ ಆರೋಪಿಗಳು, ಮಳಿಗೆಯೊಳಗೆ ನುಗ್ಗಿ ಚಿನ್ನಾಣಭರಣ ಕದ್ದಿದ್ದಾರೆ. ಮಳಿಗೆ ಬಗ್ಗೆ ಮಾಹಿತಿ ಇದ್ದವರೇ ಕೃತ್ಯ ಎಸಗಿರುವ ಶಂಕೆ ಇದೆ. ಮಳಿಗೆ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದೂ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು