ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನಿಸಿದ್ದಕ್ಕೆ ಕೊಲೆ ಮಾಡಿದ್ದ ಪ್ರಕರಣ: ನಾಲ್ವರ ಬಂಧನ

Published 29 ಸೆಪ್ಟೆಂಬರ್ 2023, 21:14 IST
Last Updated 29 ಸೆಪ್ಟೆಂಬರ್ 2023, 21:14 IST
ಅಕ್ಷರ ಗಾತ್ರ

ಬೆಂಗಳೂರು: ಬಸವನಗುಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಅರ್ಬಾಜ್ (26) ಕೊಲೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲಿಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿ ಕಾಸೀಫ್, ಶಬ್ಬೀರ್, ಶಫಿ, ಅರ್ಮಾನ್ ಬಂಧಿತರು. ಸೆ. 22ರಂದು ಅರ್ಬಾಜ್ ಕೊಲೆ ನಡೆ
ದಿತ್ತು. ನಾಲ್ವರನ್ನೂ ಬಂಧಿಸಲಾಗಿದೆ. ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಪೊಲೀಸ್ ಮೂಲಗಳು
ತಿಳಿಸಿವೆ.

‘ಬಸವನಗುಡಿಯ ಖಾಜಿ ಸ್ಟ್ರೀಟ್‌ ನಿವಾಸಿ ಅರ್ಬಾಜ್ ಹಾಗೂ ಆರೋಪಿಗಳು, ಹಲವು ವರ್ಷಗಳ ಸ್ನೇಹಿತರು. ನಾಲ್ವರೂ ಅಪರಾಧ ಹಿನ್ನೆಲೆಯುಳ್ಳವರು. ಇವರ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.’

‘ಅರ್ಬಾಜ್ ಇತ್ತೀಚೆಗೆ ಆರೋಪಿಗಳಿಂದ ಅಂತರ ಕಾಯ್ದುಕೊಂಡಿದ್ದರು. ಹೆಚ್ಚು ಭೇಟಿಯಾಗುತ್ತಿರಲಿಲ್ಲ.
ಇದೇ ವೇಳೆ ಆರೋಪಿಗಳು, ಬೇರೊಂದುಕಡೆ ಕಳ್ಳತನ ಎಸಗಿದ್ದರು. ನಾಲ್ವರನ್ನೂ ಪೊಲೀಸರು ಬಂಧಿಸಿದ್ದರು. ಅರ್ಬಾಜ್‌ನನ್ನು ಪ್ರಕರಣದಲ್ಲಿ ಸಿಲುಕಿಸಲು ಮುಂದಾಗಿದ್ದ ಆರೋಪಿಗಳು, ‘ನಮ್ಮ ಕಳ್ಳತನದಲ್ಲಿ ಅರ್ಬಾಜ್ ಭಾಗಿಯಾಗಿದ್ದಾನೆ’ ಎಂಬುದಾಗಿ ಹೇಳಿಕೆ ನೀಡಿದ್ದರು. ಅರ್ಬಾಜ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು’ ಎಂದು ಪೊಲೀಸ್‌ ಮೂಲಗಳು ಹೇಳಿವೆ.

‘ಪ್ರಕರಣದಲ್ಲಿ ಸುಳ್ಳು ಹೇಳಿ ಸಿಲುಕಿಸಿದ್ದನ್ನು ಪ್ರಶ್ನಿಸಿದ್ದ ಅರ್ಬಾಜ್, ನಾಲ್ವರು ಆರೋಪಿಗಳ ಮೇಲೆ ಹಲ್ಲೆ ಮಾಡಿದ್ದರು. ಇದರಿಂದ ಸಿಟ್ಟಾದ ಆರೋಪಿಗಳು, ಸಂಚು ರೂಪಿಸಿ ಅರ್ಬಾಜ್‌ ಅವರನ್ನೇ ಕೊಲೆ ಮಾಡಿದ್ದರು’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT