ಬೆಂಗಳೂರು: ಕಬ್ಬನ್ ಉದ್ಯಾನದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಸುರೇಶ್ ಕುಮಾರ್ ಪುರೋಹಿತ್ (35) ಪ್ರಕರಣದ ತನಿಖೆ ನಡೆಸಿದ್ದ ಕಬ್ಬನ್ಪಾರ್ಕ್ ಠಾಣೆ ಪೊಲೀಸರು, ಸಾವಿಗೆ ಕಾರಣವನ್ನು ಪತ್ತೆಹಚ್ಚಿದ್ದಾರೆ.

ರಾಜಸ್ಥಾನದ ಸುರೇಶ್ ಅವರು ಏಪ್ರಿಲ್ 2ರಂದು ಮರವೊಂದಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಸಹಜ ಸಾವು ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದ್ದರು.

ಮೃತ ಸುರೇಶ್ ಕುಮಾರ್ ಅವರು ರಾಜಸ್ಥಾನದವರಾಗಿದ್ದು, ಅಲ್ಲಿ ಜಬರರಾಮ್ ಜತೆಗೆ ಜಗಳ ಮಾಡಿಕೊಂಡಿದ್ದರು. ಜಗಳ ವಿಕೋಪಕ್ಕೆ ಹೋಗಿ ಜಬರರಾಮ್ ಮತ್ತು ಸುರೇಶ್ ಪರಸ್ಪರ ಹಲ್ಲೆ ಮಾಡಿಕೊಂಡಿದ್ದರು. ಬಳಿಕ ಬೆಂಗಳೂರಿನ ಸ್ನೇಹಿತರಿಂದ ಪಾಠ ಕಲಿಸುವುದಾಗಿ ಸುರೇಶ್ಗೆ ಜಬರರಾಮ್ ಬೆದರಿಕೆ ಹಾಕಿದ್ದರು. ಕೆಲವು ದಿನ ಕಳೆದ ಮೇಲೆ ಸುರೇಶ್ ಬೆಂಗಳೂರಿಗೆ ಬಂದಿದ್ದರು. ಮಾರ್ಚ್ ಕೊನೆಯ ವಾರದಲ್ಲಿ ಜಬರರಾಮ್ ಸಹ ನಗರಕ್ಕೆ ಆಗಮಿಸಿದ್ದರು. ಸುರೇಶ್ ಮೇಲೆ ಹಲ್ಲೆ ನಡೆಸುವಂತೆ ಪ್ರವೀಣ್, ಭಾವೇಶ್, ನಿತೇಶ್ ಮತ್ತು ಮುಖೇಶ್ ಎಂಬುವವರಿಗೆ ಜಬರರಾಮ್ ಸೂಚಿಸಿದ್ದರು. ಹೋಟೆಲ್ನಲ್ಲಿ ಊಟ ಮುಗಿಸಿ ಸುರೇಶ್ ಹೊರಟಿದ್ದ ವೇಳೆ ಆರೋಪಿಗಳು ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದರು. ಅದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.