2ಕ್ಕೆ ಗಾಯನ-ಸನ್ಮಾನ

ಬೆಂಗಳೂರು: ಸಪ್ತಕ ಬೆಂಗಳೂರು ಸಂಸ್ಥೆಯು ಮೇ 2ರಂದು ಸಂಜೆ 5 ಗಂಟೆಗೆ ಮಲ್ಲೇಶ್ವರದ ಸೇವಾ ಸದನದಲ್ಲಿ ಗಾಯನ–ಸನ್ಮಾನ–ಗಾಯನ ಕಾರ್ಯಕ್ರಮ ಹಮ್ಮಿಕೊಂಡಿದೆ. ಚೈತನ್ಯ ಭಟ್ಟ ಅವರಿಂದ ಗಾಯನ, ವಿಘ್ನೇಶ ಕಾಮತ ಅವರಿಂದ ತಬಲಾ ಹಾಗೂ ಮಧುಸೂದನ ಭಟ್ಟ ಅವರಿಂದ ಹಾರ್ಮೋನಿಯಂ ವಾದನ ನಡೆಯಲಿದೆ. ಇದೇ ವೇಳೆ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ ಪಂಡಿತ ಪರಮೇಶ್ವರ ಹೆಗಡೆ ಅವರನ್ನು ಗೌರವಿಸಲಾಗುತ್ತದೆ ಬಳಿಕ, ಭಾರತಿ ಪ್ರತಾಪ ಅವರಿಂದ ಗಾಯನ ನಡೆಯಲಿದೆ. ತಬಲಾದಲ್ಲಿ ಜಗದೀಶ ಕುರ್ತಕೋಟಿ ಹಾಗೂ ಹಾರ್ಮೋನಿಯಂನಲ್ಲಿ ಅಶ್ವಿನ್ ವಾಲ್ವಾಲ್ಕರ್ ಸಾಥ್ ನೀಡಲಿದ್ದಾರೆ.

ಚಿಗುರು ರಂಗೋತ್ಸವ

ಬೆಂಗಳೂರು: ಭಾಗವತರು ಸಾಂಸ್ಕೃತಿಕ ಸಂಘಟನೆಯು ಮೇ 1ರಿಂದ ಮೇ 3ರವರೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಯುವ ನಿರ್ದೇಶಕರ ‘ಚಿಗುರು ರಂಗೋತ್ಸವ’ ಹಮ್ಮಿಕೊಂಡಿದೆ.

ಮೂರು ದಿನವೂ ಸಂಜೆ 7.15ರಿಂದ ನಾಟಕಗಳು ಪ್ರದರ್ಶನ ಕಾಣಲಿವೆ. ಮೇ 1ರಂದು ರಾಘವೇಂದ್ರ ಜೆ. ಅವರ ನಿರ್ದೇಶನದಲ್ಲಿ ಅಭಿನಯ ತರಂಗ ತಂಡವು ‘ತಾರಾ’ ನಾಟಕ ಪ್ರದರ್ಶಿಸಲಿದೆ. ಮೇ 2ರಂದು ಚೈತಾಲಿ ದಾಸ್ ಅವರ ನಿರ್ದೇಶನದಲ್ಲಿ ರಂಗ ಶಾರೀರ ತಂಡದಿಂದ ‘ಪ್ರೀತಿಯಿಂದ’ ನಾಟಕ ಹಾಗೂ ಮೇ 3ರಂದು ಗಗನ್ ಪ್ರಸಾದ್ ಅವರ ನಿರ್ದೇಶನದಲ್ಲಿ ಸ್ಪಷ್ಟ ಥಿಯೇಟರ್ನಿಂದ ‘ಲೆಕ್ಕಕ್ಕುಂಟು ಆಟಕ್ಕಿಲ್ಲ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.

ನೃತ್ಯ–ನಾಟಕ ಪ್ರದರ್ಶನ

ಬೆಂಗಳೂರು: ಅಂತರರಾಷ್ಟ್ರೀಯ ನೃತ್ಯ ದಿನಾಚರಣೆ ಪ್ರಯುಕ್ತ ಸೃಷ್ಟಿ ಸಂಸ್ಥೆಯು ರೋಟರಿ ಡಿಸ್ಟ್ರಿಕ್ಟ್ 3191ರ ಸಹಯೋಗದಲ್ಲಿ ಮೇ 2 ಮತ್ತು ಮೇ 3ರಂದು ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರ
ದಲ್ಲಿ ಮಾಯಾರಾವ್ ನೃತ್ಯೋತ್ಸವ ಹಮ್ಮಿಕೊಂಡಿದೆ.

2ರಂದು ಸಂಜೆ 4ಗಂಟೆಯಿಂದ ನೃತ್ಯ ಕಾರ್ಯಕ್ರಮ ಪ್ರಾರಂಭ ವಾಗಲಿದೆ. ಸಂಜೆ 7 ಗಂಟೆಗೆ ಶಿವ ತಾಂಡವ ನೃತ್ಯ ರೂಪಕ ಪ್ರದರ್ಶನ ಕಾಣಲಿದೆ. 3ರಂದು ಸಂಜೆ 5.30ರಿಂದ ಕಾರ್ಯಕ್ರಮ ಆರಂಭವಾಗಲಿದ್ದು, 6.15ರಿಂದ ಪ್ರತಿಭಾ ಪ್ರಹ್ಲಾದ್ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ. 7.15ರಿಂದ ಬಿ.ಜಯಶ್ರೀ ನಿರ್ದೇಶನದಲ್ಲಿ ‘ಕರಿಮಾಯಿ’ ನೃತ್ಯ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ನಾಟಕ ಪ್ರದರ್ಶನ

ಬೆಂಗಳೂರು: ರಂಗರಥ ಭಾರತೀಯ ಪ್ರದರ್ಶನ ಕಲಾ ಸಂಸ್ಥೆ ಹಾಗೂ ಕಲಾಪ್ರೇಮಿ ಫೌಂಡೇಷನ್ ಜಂಟಿಯಾಗಿ ಮೇ 3ರಂದು ಸಂಜೆ 4 ಹಾಗೂ 7 ಗಂಟೆಗೆ ಮಲ್ಲೇಶ್ವರದಲ್ಲಿರುವ ಸೇವಾ ಸದನ ಸಭಾಂಗಣದಲ್ಲಿ ‘ಇದ್ದಾಗ ನಿಮ್ದು ಕದ್ದಾಗ ನಮ್ದು’ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ. ಈ ನಾಟಕವನ್ನು ಆಸಿಫ್ ಕ್ಷತ್ರಿಯ ಮತ್ತು ಶ್ವೇತಾ ಶ್ರೀನಿವಾಸ್ ನಿರ್ದೇಶಿಸಿದ್ದಾರೆ. ಟಿಕೆಟ್ ಬುಕ್ ಮೈ ಶೊದಲ್ಲಿ ಲಭ್ಯ.

ವ್ಯಂಗ್ಯಚಿತ್ರ ಪ್ರದರ್ಶನ

ಬೆಂಗಳೂರು: ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು ವ್ಯಂಗ್ಯಚಿತ್ರಕಾರ ಮಾರಿಯೊ ಡಿ. ಮಿರಾಂಡಾ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಮೇ 2ರಿಂದ ಮೇ 23ರವರೆಗೆ ‘ಮಾರಿಯೋ @ 100’ ಶೀರ್ಷಿಕೆಯಡಿ ವ್ಯಂಗ್ಯಚಿತ್ರ ಪ್ರದರ್ಶನ ಹಮ್ಮಿಕೊಂಡಿದೆ. ಟ್ರಿನಿಟಿ ವೃತ್ತದಲ್ಲಿರುವ ಮಿಡ್ಫೋರ್ಡ್ ಹೌಸ್ನಲ್ಲಿರುವ ಸಂಸ್ಥೆಯ ಕೇಂದ್ರದಲ್ಲಿ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಪ್ರದರ್ಶನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.