‘ರಾಮ ಶಾಮ ಡ್ರಾಮ’ ನಾಟಕ

ಬೆಂಗಳೂರು: ವಿಶ್ವಪಥ ಕಲಾ ಸಂಗಮ ಹವ್ಯಾಸಿ ರಂಗ ತಂಡವು ಇದೇ 15ರಂದು ಸಂಜೆ 6 ಗಂಟೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ‘ರಾಮ ಶಾಮ ಡ್ರಾಮ’ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ.

ರಾಜೇಂದ್ರ ಕಾರಂತ ಅವರು ಈ ನಾಟಕ ರಚಿಸಿ, ನಿರ್ದೇಶಿಸಿದ್ದಾರೆ. ‘ದೇವರೇ ಗತಿ ಆ್ಯಕ್ಸಿಡೆಂಟ್ ಆ್ಯಂಡ್ ಎಮರ್ಜೆನ್ಸಿ ಸೆಂಟರ್’ನಲ್ಲಿ ಕೆಲಸ ಮಾಡುವ ವೈದ್ಯ ರಾಮ್, ಸಹಾಯಕ ಶಾಮ ಮತ್ತು ಸ್ವಾಗತಕಾರ ಭಾಮ ಹಾಗೂ ಚಿತ್ರ ವಿಚಿತ್ರ ಸಮಸ್ಯೆಗಳನ್ನು ಹೊತ್ತು ಆಸ್ಪತ್ರೆಗೆ ಬರುವ ರೋಗಿಗಳ ನಡುವೆ ನಡೆಯುವ ಹಾಸ್ಯ ಸನ್ನಿವೇಶಗಳೇ ನಾಟಕದ ಕಥಾವಸ್ತು. ಟಿಕೆಟ್ಗಳು ಬುಕ್ ಮೈ ಶೋನಲ್ಲಿ ಲಭ್ಯ.

ಸಂಪರ್ಕಕ್ಕೆ: 9945977184 ಅಥವಾ 9916863637

‘ಆದದ್ದೆಲ್ಲಾ ಒಳಿತೇ..?’ ನಾಟಕ

ಬೆಂಗಳೂರು: ಕ್ರಿಯೆಟಿವ್ ಥಿಯೇಟರ್ ವತಿಯಿಂದ ಇದೇ 14ರಂದು ಮಧ್ಯಾಹ್ನ 3.30 ಹಾಗೂ ಸಂಜೆ 7.30ಕ್ಕೆ ಜೆ.ಪಿ.ನಗರದ ರಂಗಶಂಕರದಲ್ಲಿ ‘ಆದದ್ದೆಲ್ಲಾ ಒಳಿತೇ..?’ ಹವ್ಯಾಸಿ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಮಧ್ಯಮವರ್ಗದ ಗಂಡ–ಹೆಂಡತಿ ನಡುವಿನ ದೈನಂದಿನ ಕಚ್ಚಾಟ, ಕರ್ನಾಟಕದ ಹಳ್ಳಿಯ ಹೆಣ್ಣೊಂದು ಮುಂಬೈಗೆ ಭೇಟಿ ನೀಡಿದಾಗ ಆಗುವ ಅವಾಂತರಗಳು, ಸಂಪ್ರದಾಯಸ್ಥ ಮನೆತನದ ಹುಡುಗಿ ಫ್ರೆಂಚ್ ಹುಡುಗನನ್ನು ಮದುವೆಯಾದಾಗ ಉಂಟಾಗುವ ಪಜೀತಿ ಈ ನಾಟಕದ ಕಥಾ ವಸ್ತುವಾಗಿದೆ.

ಪ್ರಮೋದ್ ಶಿಗ್ಗಾಂವ್ ಅವರು ಈ ನಾಟಕ ನಿರ್ದೇಶಿಸಿದ್ದಾರೆ. ಕಲಾವಿದರಾದ ಲಕ್ಷ್ಮಿ ಚಂದ್ರಶೇಖರ್, ಸುಂದರ್, ರಾಮಕೃಷ್ಣ ಕನ್ನರಪಾಡಿ ಹಾಗೂ ಸೌಮ್ಯ ಗಂಗಟಕರ್ ಅವರು ಅಭಿನಯಿಸಲಿದ್ದಾರೆ.

14ಕ್ಕೆ ಸ್ವರ ಸಪ್ತತಿ

ಬೆಂಗಳೂರು: ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ ಪಂಡಿತ ಪರಮೇಶ್ವರ ಹೆಗಡೆ ಅವರ 70ನೇ ಜನ್ಮದಿನದ ಪ್ರಯುಕ್ತ ಅವರ ಶಿಷ್ಯರು ಇದೇ 14ರಂದು ಸಂಜೆ 5.30ಕ್ಕೆ ರೇಸ್ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದ ಖಿಂಚ ಸಭಾಂಗಣದಲ್ಲಿ ‘ಸ್ವರ ಸಪ್ತತಿ’ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪರಮೇಶ್ವರ ಹೆಗಡೆ ಅವರನ್ನು ಗೌರವಿಸಲಾಗುತ್ತದೆ. ಭಾರತೀಯ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕಿ ಶುಭಾ ಮುದ್ಗಲ್ ಅವರು ಹಿಂದೂಸ್ತಾನಿ ಗಾಯನ ಪ್ರಸ್ತುತಪಡಿಸಲಿದ್ದಾರೆ. ಅನೀಶ್ ಪ್ರಧಾನ್ ಅವರು ತಬಲಾದಲ್ಲಿ, ಸುಧೀರ್ ನಾಯಕ್ ಅವರು ಹಾರ್ಮೋನಿಯಂನಲ್ಲಿ ಸಾಥ್ ನೀಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.