ಬೆಂಗಳೂರು: ಬ್ಯಾಂಕ್ನಲ್ಲಿ ನಕಲಿ ಖಾತೆಗಳನ್ನು ತೆರೆದು ಜನರಿಗೆ ವಂಚಿಸುತ್ತಿದ್ದ ಸೈಬರ್ ಜಾಲದ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರಿಸಿರುವ ‘ರಾಜ್ಯ ಸೈಬರ್ ಕಮಾಂಡ್ ಘಟಕ’ದ ಪೊಲೀಸರು, ಮಂಗಳೂರಿನ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.

ಮಂಗಳೂರಿನ ಮೊಹಮ್ಮದ್ ಅನೀಶ್ ಹಾಗೂ ಸಲೀತ್ ಅಹಮ್ಮದ್ ಬಂಧಿತರು. ಚೀನಾ ಸೈಬರ್ ವಂಚಕರ ಜತೆಗೆ ಆರೋಪಿಗಳಿಬ್ಬರೂ ನಂಟು ಹೊಂದಿರುವುದು ತನಿಖೆ ವೇಳೆ ಪತ್ತೆಯಾಗಿದೆ.

ಆರೋಪಿಗಳಿಂದ ನಾಲ್ಕು ಮೊಬೈಲ್ ಫೋನ್, 18 ಡೆಬಿಟ್ ಕಾರ್ಡ್, ವಿವಿಧ ಬ್ಯಾಂಕ್ನ 17 ಪಾಸ್ಬುಕ್, 6 ಚೆಕ್ಬುಕ್, ಒಂದು ಕಾರು, 1,479.31 ಯುಎಸ್ಡಿಟಿ (ಕ್ರಿಪ್ಟೊಕರೆನ್ಸಿ) ಜಪ್ತಿ ಮಾಡಲಾಗಿದೆ ಎಂದು ಸೈಬರ್ ಕಮಾಂಡ್ ಘಟಕದ ಪೊಲೀಸರು ತಿಳಿಸಿದ್ದಾರೆ.

ಮೊಹಮ್ಮದ್ ಅನೀಶ್ ಹಾಗೂ ಸಲೀತ್ ಅಹಮ್ಮದ್ ಅವರು ಹೂಡಿಕೆಯ ಹೆಸರಿನಲ್ಲಿ ಸಾರ್ವಜನಿಕರಿಂದ ಬ್ಯಾಂಕ್ ಖಾತೆಗಳ ವಿವರ ಪಡೆದುಕೊಳ್ಳುತ್ತಿದ್ದರು. ಬಳಿಕ, ಆ ಖಾತೆಗಳನ್ನು ಸೈಬರ್ ವಂಚನೆಗೆ ಬಳಕೆ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.

ಚೀನಾ ನಂಟು: ಚೀನಾದ ಸೈಬರ್ ವಂಚಕರಿಗೆ ಕಡಿಮೆ ಬೆಲೆಗೆ ಕ್ರಿಪ್ಟೊಕರೆನ್ಸಿ ಬೇಕಾಗಿತ್ತು. ಬಂಧಿತರು ಭಾರತೀಯರಿಂದ ಕಡಿಮೆ ಬೆಲೆಗೆ ಕ್ರಿಪ್ಟೊಕರೆನ್ಸಿ ಖರೀದಿ ಮಾಡುತ್ತಿದ್ದರು. ಕ್ರಿಪ್ಟೊಕರೆನ್ಸಿಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಕ್ರಿಪ್ಟೊ ವ್ಯವಹಾರದ ಬದಲಾಗಿ ಆರೋಪಿಗಳು ರೂಪಾಯಿ ರೂಪದಲ್ಲಿ ಹಣ ವಾಪಸ್ ಪಡೆಯುತ್ತಿದ್ದರು. ಇದಕ್ಕಾಗಿ ಮಂಗಳೂರು ನಗರದ ಸಾರ್ವಜನಿಕರಿಂದ ಬ್ಯಾಂಕ್ ಖಾತೆಗಳನ್ನು ಸಂಗ್ರಹಿಸಿರುವುದು ಹಾಗೂ ದಾಖಲೆ ಪಡೆದು ನಕಲಿ ಖಾತೆ ತೆರೆದಿರುವುದು ತನಿಖೆ ವೇಳೆ ಪತ್ತೆಯಾಗಿದೆ ಎಂದು ಸೈಬರ್ ಪೊಲೀಸರು ಹೇಳಿದರು.

‘ವಾಟ್ಸ್ಆ್ಯಪ್ ಹಾಗೂ ಟೆಲಿಗ್ರಾಮ್ ಮೂಲಕ ಆರೋಪಿಗಳು ಚೀನಾದ ಸೈಬರ್ ವಂಚಕರ ಜತೆಗೆ ಸಂಪರ್ಕದಲ್ಲಿ ಇರುವುದು ಪತ್ತೆಯಾಗಿದೆ. ವ್ಯವಸ್ಥಿತ ರೀತಿಯಲ್ಲಿ ಈ ಜಾಲವು ಕಾರ್ಯಾಚರಣೆ ಮಾಡುತ್ತಿತ್ತು’ ಎಂದು ಸೈಬರ್ ಕಮಾಂಡ್ ಸೆಂಟರ್ನ ಅಧಿಕಾರಿಗಳು ತಿಳಿಸಿದ್ದಾರೆ.

ಮೂರು ತಿಂಗಳಿಂದ ಕಾರ್ಯಾಚರಣೆ

ಸೈಬರ್ ಕಮಾಂಡ್ ಸೆಂಟರ್ನ ಡಿಜಿಪಿ ಪ್ರಣವ್ ಮೊಹಂತಿ ಅವರ ನೇತೃತ್ವದಲ್ಲಿ ರಾಜ್ಯದಾದ್ಯಂತ ಕಳೆದ ಮೂರು ತಿಂಗಳಿಂದ ಕಾರ್ಯಾಚರಣೆ ನಡೆಯುತ್ತಿದೆ. ಇದುವರೆಗೆ 72 ‘ಮ್ಯೂಲ್ ಹೆರ್ಡರ್’ಗಳನ್ನು (ಬ್ಯಾಂಕ್ ಖಾತೆಗಳನ್ನು ಸೈಬರ್ ವಂಚಕರಿಗೆ ಮಾರಾಟ ಮಾಡುವವರು) ಬಂಧಿಸಲಾಗಿದೆ. ರಾಜ್ಯದಲ್ಲಿ 42 ಸಾವಿರ ನಕಲಿ ಖಾತೆಗಳನ್ನು ತೆರೆದಿರುವುದು ಕಾರ್ಯಾಚರಣೆ ವೇಳೆ ಪತ್ತೆಯಾಗಿದೆ. ಈ ಖಾತೆಗಳಲ್ಲಿ ನೂರಾರು ಕೋಟಿ ವರ್ಗಾವಣೆ ಆಗಿರುವುದು ತನಿಖೆ ವೇಳೆ ಕಂಡುಬಂದಿದೆ.

ವಿದೇಶದಲ್ಲೇ ಕುಳಿತು ವಂಚನೆ

ಆರೋಪಿಗಳಾದ ಮೊಹಮ್ಮದ್ ಅನೀಶ್ ಹಾಗೂ ಸಲೀತ್ ಅಹಮ್ಮದ್ ಅವರು 70ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಸಂಗ್ರಹಿಸಿ ಚೀನಾದ ವಂಚಕರಿಗೆ ನೀಡಿದ್ದರು. ಜನರಿಂದ ಲಪಟಾಯಿಸುತ್ತಿದ್ದ ಹಣವನ್ನು ಆ ವಂಚಕರು ಇಲ್ಲಿನ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುತ್ತಿದ್ದರು. ಬಳಿಕ ಹಣವು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಗೊಳ್ಳುತ್ತಿತ್ತು. ಮೊಹಮ್ಮದ್ ಅನೀಶ್ ತಾನು ನಡೆಸುತ್ತಿದ್ದ ಸೈಬರ್ ಸೆಂಟರ್ಗೆ ಬರುತ್ತಿದ್ದ ಜನರ ಮನವೊಲಿಸಿ ಬ್ಯಾಂಕ್ ದಾಖಲೆಗಳನ್ನು ಪಡೆದುಕೊಳ್ಳುತ್ತಿದ್ದರು. ಬಳಿಕ ಬ್ಯಾಂಕ್ ದಾಖಲೆಗಳನ್ನು ಅಂತರರಾಷ್ಟ್ರೀಯ ಕೊರಿಯರ್ ಮೂಲಕ ಚೀನಾಕ್ಕೆ ಕಳುಹಿಸುತ್ತಿದ್ದರು. ಅಲ್ಲಿನ ವಂಚಕರು ಭಾರತದ ವಿವಿಧ ರಾಜ್ಯಗಳ ಜನರನ್ನು ವಂಚಿಸುತ್ತಿದ್ದರು ಎಂದು ಮೂಲಗಳು ಹೇಳಿವೆ. ವಂಚನೆಗೆ ಬಳಸಿದ್ದ 37 ಬ್ಯಾಂಕ್ ಖಾತೆಗಳ ವಿರುದ್ಧ ದೇಶದಾದ್ಯಂತ 88ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಖಾತೆಗಳಲ್ಲಿ ಎಷ್ಟು ಹಣ ವರ್ಗಾವಣೆ ಆಗಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.