ಬೆಂಗಳೂರು: ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ 6 ತಿಂಗಳಲ್ಲಿ 218 ಒಣ, ಅಪಾಯಕಾರಿ ಮರ ಹಾಗೂ 1,623 ರೆಂಬೆಗಳ ತೆರವು ಮಾಡಲಾಗಿದೆ ಎಂದು ಆಯುಕ್ತ ಕೆ.ಎನ್. ರಮೇಶ್ ತಿಳಿಸಿದ್ದಾರೆ.

ಜಯನಗರ-1 ಮತ್ತು ಬೊಮ್ಮನಹಳ್ಳಿ-2 ವಲಯ ವ್ಯಾಪ್ತಿಯಲ್ಲಿ ರಸ್ತೆಬದಿ, ಸರ್ಕಾರಿ ಜಾಗಗಳಲ್ಲಿ ಒಣಗಿರುವ ಮತ್ತು ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳು ಹಾಗೂ ರೆಂಬೆ ಕೊಂಬೆಗಳನ್ನು ತೆರವುಗೊಳಿಸಲಾಯಿತು.

ಜಯನಗರ, ಪದ್ಮನಾಭನಗರ, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಹಾಗೂ ಹೆಮ್ಮಿಗೆಪುರ, ರಾಜರಾಜೇಶ್ವರಿನಗರ ಭಾಗಗಳಲ್ಲಿ 62 ಒಣಗಿರುವ ಮರ, 581 ಒಣಗಿರುವ ಕೊಂಬೆಗಳು ಹಾಗೂ 56 ಅಪಾಯಕಾರಿ ಮರ, 486 ಅಪಾಯಕಾರಿ ಕೊಂಬೆಗಳನ್ನು ತೆರವುಗೊಳಿಸಲಾಗಿದೆ.

ಬೊಮ್ಮನಹಳ್ಳಿ, ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ ಹಾಗೂ ಬೆಳ್ಳಂದೂರು ಭಾಗಗಳಲ್ಲಿ 130 ಒಣಗಿರುವ ಮರ, 895 ಒಣಗಿರುವ ರೆಂಬೆಗಳು ಹಾಗೂ 88 ಅಪಾಯಕಾರಿ ಮರಗಳನ್ನು, 728 ಅಪಾಯಕಾರಿ ರೆಂಬೆಗಳನ್ನು ತೆರವುಗೊಳಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.