ಬೆಂಗಳೂರು: ತಮಿಳುನಾಡಿನ ಕೃಷ್ಣಗಿರಿಯಿಂದ ನಗರಕ್ಕೆ ಜಿಂಕೆ ಕೊಂಬು ತಂದು ಮಾರಾಟ ಮಾಡುತ್ತಿದ್ದ ಮೂವರನ್ನು ಸಿಸಿಬಿಯ ಅಸಂಘಟಿತ ಅಪರಾಧ ದಳ (ಪೂರ್ವ) ಅಧಿಕಾರಿಗಳು ಬಂಧಿಸಿದ್ದಾರೆ.

ಸಂಜೀವಿನಿ ನಗರದ ಮುರುಳಿ (29), ಮಾರೇನಹಳ್ಳಿಯ ಮಂಜುನಾಥ (39) ಹಾಗೂ ಹನುಮಂತೇಗೌಡ ಲೇಔಟ್ನ ಕಾರ್ಯಪ್ಪ (53) ಬಂಧಿತರು.

ಸುಮಾರು ₹10 ಲಕ್ಷ ಮೌಲ್ಯದ ಜಿಂಕೆ ಕೊಂಬನ್ನು ನಗರದ ಚಿಕ್ಕಬಾಣಾವರ ಕಾಲೇಜುವೊಂದರ ಬಳಿ ಮಾರಾಟ ಮಾಡಲು ಮುಂದಾಗಿದ್ದರು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಪಿ.ಸುರೇಶ ನೇತೃತ್ವದಲ್ಲಿ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಾಡು ಪ್ರಾಣಿಗಳನ್ನು ಹತ್ಯೆಗೈದು ಈ ಕೃತ್ಯ ಮಾಡುತ್ತಿದ್ದಾರೆಯೋ ಅಥವಾ ಮೃತ ಪ್ರಾಣಿಗಳ ಕೊಂಬನ್ನು ಮಾರಾಟಕ್ಕೆ ಯತ್ನ ನಡೆಸುತ್ತಿದ್ದರೋ ಎಂಬ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು, ಈ ಕೃತ್ಯದ ಹಿಂದಿರುವವರ ಪತ್ತೆಗೆ ಮುಂದಾಗಿದ್ದಾರೆ.

ಕೆಲ ಪ್ರಾಣಿಗಳ ಕೊಂಬು ಹಾಗೂ ಚರ್ಮ ಹೆಚ್ಚಿನ ಬೆಲೆಗೆ ಮಾರಾಟ ಹಾಗೂ ವಿದೇಶಗಳಿಗೂ ಸಾಗಣೆ ಮಾಡುತ್ತಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಬಂಧಿತರ ಬಗ್ಗೆ ಹಿಂದೆ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ ಎಂದು ಪೊಲೀಸರು ತಿಳಿದ್ದಾರೆ.

ಚಿಕ್ಕಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-4-2140354246

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.