ಬೆಂಗಳೂರು: ಅಶೋಕನಗರ, ಮಲ್ಲೇಶ್ವರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಹೊರ ರಾಜ್ಯದ ಮೂವರು ಸೇರಿ ಐವರು ಪೆಡ್ಲರ್ಗಳನ್ನು ಪೊಲೀಸರು ಬಂಧಿಸಿ, ₹1.28 ಕೋಟಿ ಮೌಲ್ಯದ ಹೈಡ್ರೋಗಾಂಜಾ ಜಪ್ತಿ ಮಾಡಿದ್ದಾರೆ.

ಅಶೋಕನಗರ ಠಾಣೆ ಪೊಲೀಸರು ಕೇರಳದ ಮೊಹಮ್ಮದ್ ಹಮ್ಜಾ (38), ಯಾಸೀರ್ ಅಹಮದ್(37) ಹಾಗೂ ಮಲ್ಲೇಶ್ವರ ಪೊಲೀಸರು ಶ್ರೀನಾಥ್ (28), ಕೊಡಗಿನ ಮೊಹಮ್ಮದ್ ಅಫ್ರಾನ್ (26), ಮೊಹಮ್ಮದ್ ಸಬೀತ್(21) ಎಂಬುವರನ್ನು ಬಂಧಿಸಿ, 3 ಕೆ.ಜಿ. 686 ಗ್ರಾಂ ಹೈಡ್ರೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದರು.

ಆರೋಪಿಗಳು ವಿದೇಶಿ ಮಾದಕ ವಸ್ತುವನ್ನು ಕೇರಳ ಮೂಲಕ ಕೊಡಗು ಮಾರ್ಗವಾಗಿ ಬೆಂಗಳೂರಿಗೆ ರವಾನೆ ಮಾಡುತ್ತಿದ್ದರು. ವಶಪಡಿಸಿಕೊಂಡಿರುವ ಡ್ರಗ್ಸ್ನ ಮೌಲ್ಯ ಮಾರುಕಟ್ಟೆಯಲ್ಲಿ ₹2.56 ಕೋಟಿ. ಮಲ್ಲೇಶ್ವರ ಪೊಲೀಸರು ವಶಕ್ಕೆ ಪಡೆದಿರುವ ಆರೋಪಿಗಳು ಮಡಿವಾಳದಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದು ಕೊಂಡು ಬಿಟಿಎಂ ಲೇಔಟ್ ವ್ಯಾಪ್ತಿಯಲ್ಲಿ ಹಣ್ಣಿನ ಜ್ಯೂಸ್ ಅಂಗಡಿ ನಡೆಸುತ್ತಿದ್ದರು. ಕೇರಳದಿಂದ ಹೈಡ್ರೋ ಗಾಂಜಾ ತರಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಹೇಳಿದರು.

ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಅಪರಿಚಿತ ವ್ಯಕ್ತಿಗಳಿಂದ ಕಡಿಮೆ ಬೆಲೆಗೆ ಹೈಡ್ರೋ ಗಾಂಜಾ ಖರೀದಿಸಿ ತರುತ್ತಿದ್ದರು. ನಗರದಲ್ಲಿ ಸಾರ್ವಜನಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು.

ಎಲ್ಲಿಂದ ಪೂರೈಕೆ?: ನೈಜೀರಿಯಾ, ಥಾಯ್ಲೆಂಡ್ ಸೇರಿ ವಿವಿಧ ದೇಶಗಳಿಂದ ಚೆನ್ನೈ ಏರ್ಪೋರ್ಟ್, ಬಂದರು ಮೂಲಕ ಕೇರಳಕ್ಕೆ ಪೂರೈಕೆಯಾಗುತ್ತಿದ್ದ ವಿದೇಶಿ ಡ್ರಗ್ಸ್, ಬಸ್, ರೈಲ್ವೆ ಮೂಲಕ ಬೆಂಗಳೂರು ತಲುಪುತ್ತಿದೆ.

ಪ್ರಯಾಣಿಕರು, ಕೂಲಿ ಕಾರ್ಮಿಕರ ವೇಷದಲ್ಲಿ ನಗರಕ್ಕೆ ಆಗಮಿಸುವ ದಂಧೆಕೋರರು ಸ್ಥಳೀಯರ ಸಹಾಯ ಪಡೆದು ಕಾಲೇಜು, ವಿಶ್ವವಿದ್ಯಾಲಯ, ಐಟಿ-ಬಿಟಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂಬುದು ಪೊಲೀಸರು ನಡೆಸಿದ ತನಿಖೆಯಿಂದ ಬೆಳಕಿಗೆ ಬಂದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-4-1646067580

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.