ಬೆಂಗಳೂರು: ‘ಕೇವಲ ಹಣಕಾಸಿನ ಹಂಚಿಕೆಯ ಪ್ರಸ್ತಾವದ ಆರಂಭವಲ್ಲ, ಇದು ನಮ್ಮ ನಗರ ಪಾಲಿಕೆಯ ಭವಿಷ್ಯವನ್ನು ರೂಪಿಸುವ ಸದೃಢ ಸಂಕಲ್ಪದ ಘೋಷಣೆ. ನಗರಾಡಳಿತವನ್ನು ಕಟ್ಟಡಗಳ ಎತ್ತರದಿಂದಲ್ಲ, ಸ್ಥಳೀಯ ಆಡಳಿತದ ಮೇಲೆ ನಾಗರಿಕರು ಇಟ್ಟಿರುವ ವಿಶ್ವಾಸದಿಂದ ಗುರುತಿಸಲಾಗುತ್ತದೆ’ ಎಂಬ ಉಲ್ಲೇಖವನ್ನು ಪ್ರಸ್ತಾವಿಸಿ ಬೆಂಗಳೂರು ಪೂರ್ವ ನಗರ ಪಾಲಿಕೆಯ ಮೊದಲ ಬಜೆಟ್ ಅನ್ನು ಶುಕ್ರವಾರ ಮಂಡಿಸಲಾಯಿತು.

ಐಟಿ–ಬಿಟಿ ಕೇಂದ್ರದಂಥ ಜನನಿಬಿಡ, ವಾಣಿಜ್ಯ ಕೇಂದ್ರಗಳ ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶ ಮಿಶ್ರಿತವಾದ ಪಾಲಿಕೆಯಲ್ಲಿ ಸ್ವಂತ ಆದಾಯ ₹1,500 ಕೋಟಿಯ ನಿರೀಕ್ಷೆಯೊಂದಿಗೆ ಹೊಸ ಪಾಲಿಕೆ ಕಟ್ಟಲು ದೃಢ ಹೆಜ್ಜೆ ಇಟ್ಟಿದೆ.

ಆಯುಕ್ತ ರಮೇಶ್ ಡಿ.ಎಸ್. ಅವರು ಕನ್ನಡದಲ್ಲಿ ನಿರರ್ಗಳವಾಗಿ 60 ನಿಮಿಷ ಓದುವ ಮೂಲಕ ಗಮನ ಸೆಳೆದರು. ಸುಮಾರು 100 ಕಿ.ಮೀ. ಪಾದಚಾರಿ ರಸ್ತೆ, 10 ನಮ್ಮ ಕ್ಲಿನಿಕ್ ಸ್ಥಾಪನೆ, 15 ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಸೇರಿದಂತೆ ಹಲವು ಹೊಸ ಯೋಜನೆಗಳನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ. ಆದರೆ, ಬಹುಕಾಲದ ಬೇಡಿಕೆಯಾಗಿರುವ ಕೆ.ಆರ್.ಪುರ ಸಂತೆ ಅಭಿವೃದ್ಧಿ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾವವಿಲ್ಲ.

ಹೆಚ್ಚುವರಿ ತೆರಿಗೆ ವಿಧಿಸದೆ ಎಸ್ಒಪಿ ಜಾರಿ, ಜಿಬಿಎ ಕಾಯ್ದೆ 2024 ಅನುಸರಣೆ, ಆಸ್ತಿ ತೆರಿಗೆ ಮೌಲ್ಯಮಾಪನ–ವಸೂಲಾತಿ ಬಲಪಡಿಸುವುದು ಹಾಗೂ ತೆರಿಗೆ ಜಾಲದಿಂದ ಹೊರಗಿನ ಆಸ್ತಿಗಳನ್ನು ಗುರುತಿಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸುವ ಮೂಲಕ ₹1,500 ಕೋಟಿ ಆದಾಯ ಸಂಗ್ರಹಿಸುವ ಗುರಿಯನ್ನು ಪಾಲಿಕೆ ಇಟ್ಟುಕೊಂಡಿದೆ. ಜಿ.ಐ.ಎಸ್ ಆಧಾರಿತ ಆಸ್ತಿ ತೆರಿಗೆ ವ್ಯವಸ್ಥೆಯನ್ನು ಬೆಸ್ಕಾಂ, ಬಿಡಬ್ಲ್ಯುಎಸ್ಎಸ್ಬಿ ಮುಂತಾದ ಸಂಸ್ಥೆಗಳೊಂದಿಗೆ ಸಂಯೋಜನೆ ಮಾಡಿ ಆಸ್ತಿ ತೆರಿಗೆ ಪರಿಷ್ಕರಣೆ ಮೂಲಕ ವರ್ಷಕ್ಕೆ ₹150 ಕೋಟಿ ಹೆಚ್ಚುವರಿ ಆದಾಯ, ಕೃತಕ ಬುದ್ಧಿಮತ್ತೆ ಮೂಲಕ ತೆರಿಗೆ ಬಾಕಿದಾರರನ್ನು ಗುರುತಿಸಿ ವಿವಿಧ ದತ್ತಾಂಶಗಳನ್ನು ಒಗ್ಗೂಡಿಸುವ ಮೂಲಕ ತೆರಿಗೆ ಜಾಲವನ್ನು ವಿಸ್ತರಿಸಿ ₹100 ಕೋಟಿ ಹೆಚ್ಚುವರಿ ಆದಾಯ ಗಳಿಸಲಾಗುವುದು ಎಂದು ಬಜೆಟ್ನಲ್ಲಿ ತಿಳಿಸಲಾಗಿದೆ.

ಖಾತೆ ಪರಿವರ್ತನೆಯಿಂದ ₹225 ಕೋಟಿ:

ಜಾರಿಯಲ್ಲಿರುವ ‘ಬಿ’ ಖಾತೆಯಿಂದ ‘ಎ’ ಖಾತೆಗೆ ಪರಿವರ್ತನೆ ಅಭಿಯಾನದಿಂದ ವರ್ಷಕ್ಕೆ ₹225 ಕೋಟಿ ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ. ಲೆಗಸಿ ಜಾಹೀರಾತುಗಳಿಗೆ ಅನುಮತಿ, ಸ್ವಯಂ ಜಾಹೀರಾತುಗಳನ್ನು ವಾಣಿಜ್ಯ ಫಲಕಗಳಾಗಿ ಪರಿವರ್ತಿಸಲು ಒಂದು ಬಾರಿ ಅವಕಾಶ ಕಲ್ಪಿಸುವುದು, ರಸ್ತೆವಾರು ಜಾಹೀರಾತುಗಳನ್ನು ಗುರುತಿಸುವ ಕಾರ್ಯ ನಡೆದಿದೆ. ಸ್ವಯಂ ಪರಿವರ್ತನೆಗೆ 3 ತಿಂಗಳ ಅವಕಾಶ ನೀಡಿದ್ದು, ಇದರಿಂದ ₹20 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಜಾಹೀರಾತು ಏಜೆನ್ಸಿ ಪರವಾನಗಿ, ಸ್ಕೈವಾಕ್ ಜಾಹೀರಾತು ನೆಲ ಬಾಡಿಗೆ, ಬಸ್ ತಂಗುದಾಣದಲ್ಲಿ ಜಾಹೀರಾತು ಸೇರಿದಂತೆ ವಿವಿಧ ಜಾಹೀರಾತು ಮೂಲಗಳಿಂದ ₹100 ಕೋಟಿ ಆದಾಯ ಗಳಿಸುವ ಗುರಿ ಇಟ್ಟುಕೊಂಡಿದೆ.

ಕಟ್ಟಡ ನಕ್ಷೆ ಮಂಜೂರಾತಿ, ಪ್ಲಿಂತ್ ಪ್ರಮಾಣ ಪತ್ರ, ಸ್ವಾಧೀನಾನುಭವ ಪ್ರಮಾಣಪತ್ರ, ವಿವಿಧ ಶುಲ್ಕಗಳು, ಇತರ ಮೂಲಗಳಿಂದ ₹982 ಕೋಟಿ ನಿರೀಕ್ಷಿಸಲಾಗಿದೆ. ಖಾಲಿ ನಿವೇಶನಗಳಿಗೂ ಆನ್ಲೈನ್ ಸಿಂಗಲ್ ಪ್ಲ್ಯಾಟ್ ಅನುಮತಿ ವ್ಯವಸ್ಥೆಯಿಂದ ₹139 ಕೋಟಿ ಬರುವ ಸಾಧ್ಯತೆ ಇದೆ.

ಸಾರ್ವಜನಿಕ ಕಾಮಗಾರಿಗೆ ₹2,400 ಕೋಟಿ

ಮೂಲಸೌಕರ್ಯದ ಅಭಿವೃದ್ಧಿ, ರಸ್ತೆ ಡಾಂಬರೀಕರಣ, ಪಾದಚಾರಿ ಮಾರ್ಗ ಸಹಿತ ಸಾರ್ವಜನಿಕ ಕಾಮಗಾರಿಗಳಿಗೆ ₹2,400 ಕೋಟಿ ಇಡಲಾಗಿದ್ದು, ವೆಚ್ಚದಲ್ಲಿ ಇದುವೇ ಸಿಂಹಪಾಲು ಆಗಿದೆ. ರಸ್ತೆ ವಿಸ್ತರಣೆ ಮತ್ತು ಭೂಸ್ವಾಧೀನಕ್ಕಾಗಿ ₹70 ಕೋಟಿ ಮೀಸಲಿರಿಸಲಾಗಿದೆ. ₹510 ಕೋಟಿ ಮೌಲ್ಯದ ಸಾರ್ವಜನಿಕ ಆಸ್ತಿಯನ್ನು ರಸ್ತೆ ವಿಸ್ತರಣೆಗಾಗಿ ಕಾಯ್ದಿರಿಸಲಾಗಿದೆ.

ಹೊಸ ಪಾಲಿಕೆಯಾಗಿ ಉದಯವಾಗಿದ್ದರೂ ಸ್ವಂತ ಕಟ್ಟಡ ಇಲ್ಲ. ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಮೊದಲ ಹಂತದಲ್ಲಿ ₹25 ಕೋಟಿ ಮೀಸಲಿರಿಸಲಾಗಿದೆ. ನಗರ ವಿನ್ಯಾಸ ಕೋಶ ಸ್ಥಾಪನೆಗಾಗಿ ₹50 ಲಕ್ಷ ಮೀಸಲಿರಿಸಲಾಗಿದೆ. ಕಲ್ಯಾಣ ಕಾರ್ಯಕ್ರಮಳಿಗೆ ಬಜೆಟ್ನ ಶೇ 7ರಷ್ಟು ಮೀಸಲಿಡುವ ಮೂಲಕ ಒಂಟಿಮನೆ ನಿರ್ಮಾಣ, ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ, ಲ್ಯಾಪ್ಟಾಪ್ ವಿತರಣೆ, ಮಹಿಳೆಯರಿಗೆ ದ್ವಿಚಕ್ರವಾಹನ ವಿತರಣೆ, ಹೊಲಿಗೆ ಯಂತ್ರ ವಿತರಣೆ ಸಹಿತ ವಿವಿಧ ಕಾರ್ಯಕ್ರಮಗಳಿಗೆ ನಿಧಿ ಒದಗಿಸಿದೆ. ಆರು ನಿರಾಶ್ರಿತರ ಕೇಂದ್ರಗಳನ್ನು ಮೇಲ್ದರ್ಜೆಗೆ ಹಾಗೂ ಹೊಸದಾಗಿ ಎರಡು ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.

ಕಸವಿಲೇವಾರಿ, ಸಂಗ್ರಹಣೆ, ಸ್ವಚ್ಛತಾ ಅಭಿವೃದ್ಧಿ ಕಾಮಗಾರಿಗಳಿಗೆ ₹300 ಕೋಟಿ ಇಟ್ಟಿದೆ. ಜೊತೆಗೆ ಪೌರಕಾರ್ಮಿಕರು ಮತ್ತು ಸ್ವಚ್ಛತಾ ಸಿಬ್ಬಂದಿಗೆ ವಿವಿಧ ಸೌಕರ್ಯ ಒದಗಿಸಲು ಮುಂದಾಗಿದೆ. ವಿಪತ್ತು ಪರಿಹಾರ ಮತ್ತು ಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲು ಡಿಬಿಟಿ ವ್ಯವಸ್ಥೆ ಜಾರಿ ಮಾಡಲು ಯೋಜನೆ ರೂಪಿಸುತ್ತಿರುವುದು ಉತ್ತಮ ನಡೆಯಾಗಿದೆ.

ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳ ಅಭಿವೃದ್ಧಿ, ಮೆಟ್ರೊ ನಿಲ್ದಾಣಗಳ ಸಂಪರ್ಕ ಸುಧಾರಣೆ, ಬೀದಿದೀಪ, ಒಆರ್ಆರ್ ರಸ್ತೆ ಅಭಿವೃದ್ಧಿ, ಬೀದಿದೀಪ ನಿರ್ವಹಣೆ, ವಿದ್ಯುತ್ ಚಿತಾಗಾರ ಸೇರಿದಂತೆ ಸಾರ್ವಜನಿಕ ಕಾಮಗಾರಿಗಳಿಗೆ ಆದ್ಯತೆ ದೊರಕಿದೆ.

ಮಹದೇವಪುರ ಮತ್ತು ಕೆ.ಆರ್.ಪುರ ವಲಯಗಳಲ್ಲಿರುವ 54 ಉದ್ಯಾನಗಳಲ್ಲಿ 35 ಈಗಾಗಲೇ ಅಭಿವೃದ್ಧಿಗೊಂಡಿವೆ. 12 ಕೆರೆ ಉದ್ಯಾನ, 7 ಉದ್ಯಾನಗಳ ನಿರ್ವಹಣೆ ಮತ್ತು ಅಭಿವೃದ್ಧಿ, ಚೈನ್ಲಿಂಕ್ ಬೇಲಿ, ಬ್ರ್ಯಾಂಡ್ ಬೆಂಗಳೂರು–ಗ್ರೀನ್ ಬೆಂಗಳೂರು ಯೋಜನೆಯಡಿ ಹೊಸ ನರ್ಸರಿ ಸ್ಥಾಪನೆ ಸೇರಿದಂತೆ ವಿವಿಧ ತೋಟಗಾರಿಕೆ ಯೋಜನೆಗಳಿಗೆ ₹45 ಕೋಟಿ ಮೀಸಲಿಟ್ಟಿದೆ. ಕಿರುಚಿತ್ರ, ಸಿನಿಮಾ, ಧಾರಾವಾಹಿಗಳಿಗೆ ಬಳಸಲು ಅನುಮತಿ ನೀಡಿ ಆದಾಯ ವೃದ್ಧಿಸಿಕೊಳ್ಳಲು ಚಿಂತನೆ ನಡೆಸಿದೆ.

ಆರೋಗ್ಯ ಪರಿಕಲ್ಪನೆ ಅಡಿಯಲ್ಲಿ 15 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 10 ನಮ್ಮ ಕ್ಲಿನಿಕ್ಗಳ ಸ್ಥಾಪನೆಗೆ ₹35 ಕೋಟಿ ಮೀಸಲಿಟ್ಟಿದೆ. ಆರೋಗ್ಯ ಕೇಂದ್ರಗಳ ಅಭಿವೃದ್ಧಿ, ವಿಸ್ತರಣೆ, ಉಪಕರಣ ಖರೀದಿಗಳಿಗೆ ಅನುದಾನ ಒದಗಿಸಲಾಗಿದೆ.

ಪ್ರಮುಖ ಕಾಮಗಾರಿ: ಕೆ.ಆರ್.ಪುರದಿಂದ ಇಬ್ಬಲೂರು ಜಂಕ್ಷನ್ವರೆಗಿನ ಹೊರವರ್ತುಲ ರಸ್ತೆಯ ಸರ್ವಿಸ್ ರಸ್ತೆಗಳ ಅಭಿವೃದ್ಧಿಗೆ ಯೋಜಿಸಲಾಗಿದೆ.. ಪಾಲಿಕೆ ವ್ಯಾಪ್ತಿಯ ಎಲ್ಲ ರಸ್ತೆಗಳು ಮತ್ತು ಚರಂಡಿಗಳ ಸಮಗ್ರ ಅಭಿವೃದ್ಧಿ ಮತ್ತು ವಾರ್ಷಿಕ ನಿರ್ವಹಣೆಗಾಗಿ ಪ್ರತಿ ವಾರ್ಡ್ಗೆ ತಲಾ ₹2.25 ಕೋಟಿ ಮೀಸಲಿಡಲಾಗಿದೆ. ಸಿಲ್ಕ್ ಬೋರ್ಡ್ ಜಂಕ್ಷನ್ನಿಂದ ಕೆ.ಆರ್.ಪುರವರೆಗೆ ಹೊರವರ್ತುಲ ರಸ್ತೆಯನ್ನು ದೀರ್ಘಕಾಲ ಬಾಳಿಕೆ ಬರುವಂತಹ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಹೊರವರ್ತುಲ ರಸ್ತೆಯ ಮೆಟ್ರೊ ವಯಾಡಕ್ಟ್ ಉದ್ದಕ್ಕೂ 9.ಕಿ.ಮೀ. ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿ ಪಡಿಸುವ ಯೋಜನೆ ಸೇರಿದೆ.

* ಕೇಂದ್ರ ಸರ್ಕಾರದ ಈಸಿ ಆಫ್ ಡೂಯಿಂಗ್ ಬ್ಯುಸಿನೆಸ್ ಅಡಿ ಎಲ್ಲ ಬಗೆಯ ಕಟ್ಟಡಗಳ ನಕ್ಷೆ ಮಂಜೂರಾತಿಗಳನ್ನು ಸರಳೀಕರಣ.

* ಪಾಲಿಕೆ ವ್ಯಾಪ್ತಿಯ ಜನಸಂಖ್ಯೆಗೆ ಅನುಗುಣವಾಗಿ ಅಗತ್ಯ ಇರುವ ಅಧಿಕಾರಿಗಳು, ಸಿಬ್ಬಂದಿಯನ್ನು ಒಳಗೊಂಡ ವೃಂದ ಮತ್ತು ನೇಮಕಾತಿಗೆ ಸರ್ಕಾರಕ್ಕೆ ಪ್ರಸ್ತಾವ

* ಅಧಿಕಾರಿ/ಸಿಬ್ಬಂದಿಗೆ ಅವಶ್ಯ ಇರುವ ತರಬೇತಿ, ಕಾರ್ಯಾಗಾರ ನಡೆಸಿ ಕ್ಷಮತೆ ಹೆಚ್ಚಿಸಲು ಕ್ರಮ

* ಹಣಕಾಸು ವಿಭಾಗದಲ್ಲಿ ಎಲ್ಲ ಸ್ವೀಕೃತಿ ಮತ್ತು ಪಾವತಿ ಸಂಪೂರ್ಣ ಆನ್ಲೈನ್ ಮೂಲಕ ನಡೆಸಲು ಕ್ರಮ

* ಮುನಿಸಿಪಲ್ ಬಾಂಡ್ಗಳ ಮೂಲಕ ಸಂಗ್ರಹಿಸುವ ಮೊತ್ತದಲ್ಲಿ ಹೊರ ವರ್ತುಲ ರಸ್ತೆಯ ಆಲ್ಫೈನ್ ಇಕೊ ರಸ್ತೆಯಲ್ಲಿ ಗ್ರೇಡ್ ಸಪರೇಟರ್ ನಿರ್ಮಾಣ

* ಕೆಆರ್ಡಿಸಿಎಲ್ ವತಿಯಿಂದ ನಿರ್ಮಾಣ ಮಾಡುತ್ತಿರುವ ಮೇಲ್ಸೇತುವೆಯ ಮುಂದುವರಿದ ಭಾಗ ನಿರ್ಮಿಸಲು ₹ 150 ಕೋಟಿ ಮೀಸಲು.

* ಕೊತ್ತನೂರು ಮುಖ್ಯರಸ್ತೆಯಿಂದ ಕೆ.ಚನ್ನಸಂದ್ರ ಮುಖ್ಯದ್ವಾರದವರೆಗೆ ರಸ್ತೆ ಸೇರಿದಂತೆ ಹಲವು ರಸ್ತೆಗಳ ಅಭಿವೃದ್ಧಿಗೆ ಅನುದಾನ

* ಪ್ರವಾಹ ಪೀಡಿತ 20 ಪ್ರದೇಶಗಳನ್ನು ಪ್ರವಾಹ ಮುಕ್ತ ಮಾಡಲು ಕ್ರಮ.

ಬೀದಿನಾಯಿಗೆ ₹22 ಕೋಟಿ

ಸುಪ್ರೀಂಕೋರ್ಟ್ ಮಾರ್ಗಸೂಚಿಗಳ ಅನ್ವಯ 500 ನಾಯಿಗಳಿಗೆ ಆಶ್ರಯ ಕೇಂದ್ರಗಳನ್ನು ನಿರ್ಮಿಸಲು ನಿರ್ವಹಣೆ ಮತ್ತು ಆಹಾರ ವ್ಯವಸ್ಥೆಗಾಗಿ ₹12 ಕೋಟಿ ಮೀಸಲಿರಿಸಲಾಗಿದೆ.

ಇದಲ್ಲದೇ ಶಸ್ತ್ರಚಿಕಿತ್ಸೆ ಆಧಾರಿತ ಪ್ರಾಣಿ ಜನನ ನಿಯಂತ್ರಣ (ಎಬಿಸಿ) ಕಾರ್ಯಕ್ರಮ ವಿಸ್ತರಣೆಗೆ ₹ 6 ಕೋಟಿ ಮಹದೇವಪುರದಲ್ಲಿ ನಾಯಿ ಜನನ ನಿಯಂತ್ರಣ ಶಸ್ತ್ರ ಚಿಕಿತ್ಸಾ ಕೇಂದ್ರ ಸ್ಥಾಪಿಸಲು ₹ 4 ಕೋಟಿ ಮೀಸಲಿಡಲಾಗಿದೆ.

ಸಣ್ಣ ಹಾಗೂ ದೊಡ್ಡ ಪ್ರಾಣಿಗಳ ಚಿಕಿತ್ಸೆಗಾಗಿ 2 ಪಶು ಚಿಕಿತ್ಸಾಲಯಗಳಿಗೆ ₹ 2 ಕೋಟಿ ಮೃತಪಟ್ಟ ಪ್ರಾಣಿಗಳ ವೈಜ್ಞಾನಿಕ ಮತ್ತು ಪರಿಸರ ಸ್ನೇಹಿ ವಿಲೇವಾರಿಗಾಗಿ ವಿಶೇಷ ಘಟಕ ಸ್ಥಾಪಿಸಲು ₹ 2 ಕೋಟಿ ಮೊಬೈಲ್ ವೆಟರ್ನರಿ ವಾಹನ ಆರಂಭಿಸಲು ₹ 50 ಲಕ್ಷ ಒದಗಿಸಲಾಗಿದೆ.

ಹವಾಮಾನ ವೈಪರೀತ್ಯ

ವೇಗದ ನಗರೀಕರಣ ಮತ್ತು ಡಿಜಿಟಲ್ ಕ್ರಾಂತಿ ಈ ಮೂರು ಮಹತ್ತರ ಪರಿವರ್ತನೆಗಳ ಕಾಲಘಟ್ಟದಲ್ಲಿ ‘ಸಿಲಿಕಾನ್ ಸ್ಪಂದನೆಯಿಂದ ಸುಸ್ಥಿರ ನಗರದತ್ತ ನಮ್ಮ ಚಿತ್ತ’ ಎಂಬ ದೂರದೃಷ್ಟಿಯೊಂದಿಗೆ ತಯಾರಿಸಿದ 2026–27ರ ಆಯವ್ಯಯವು ಕೇವಲ ಆದಾಯ ಮತ್ತು ವೆಚ್ಚಗಳ ಪಟ್ಟಿಯಲ್ಲ ಇದು ಸ್ಥಿತಿ ಸ್ಥಾಪಕ ಮತ್ತು ನವೀನ ಆಡಳಿತದ ನೀಲನಕ್ಷೆ.

ರಮೇಶ್ ಡಿ.ಎಸ್. ಆಯುಕ್ತ ಪೂರ್ವ ನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.