ಬೆಂಗಳೂರು: ‘ಕೇವಲ ಹಣಕಾಸಿನ ಹಂಚಿಕೆಯ ಪ್ರಸ್ತಾವದ ಆರಂಭವಲ್ಲ, ಇದು ನಮ್ಮ ನಗರ ಪಾಲಿಕೆಯ ಭವಿಷ್ಯವನ್ನು ರೂಪಿಸುವ ಸದೃಢ ಸಂಕಲ್ಪದ ಘೋಷಣೆ. ನಗರಾಡಳಿತವನ್ನು ಕಟ್ಟಡಗಳ ಎತ್ತರದಿಂದಲ್ಲ, ಸ್ಥಳೀಯ ಆಡಳಿತದ ಮೇಲೆ ನಾಗರಿಕರು ಇಟ್ಟಿರುವ ವಿಶ್ವಾಸದಿಂದ ಗುರುತಿಸಲಾಗುತ್ತದೆ’ ಎಂಬ ಉಲ್ಲೇಖವನ್ನು ಪ್ರಸ್ತಾವಿಸಿ ಬೆಂಗಳೂರು ಪೂರ್ವ ನಗರ ಪಾಲಿಕೆಯ ಮೊದಲ ಬಜೆಟ್ ಅನ್ನು ಶುಕ್ರವಾರ ಮಂಡಿಸಲಾಯಿತು.

ಐಟಿ–ಬಿಟಿ ಕೇಂದ್ರದಂಥ ಜನನಿಬಿಡ, ವಾಣಿಜ್ಯ ಕೇಂದ್ರಗಳ ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶ ಮಿಶ್ರಿತವಾದ ಪಾಲಿಕೆಯಲ್ಲಿ ಸ್ವಂತ ಆದಾಯ ₹1,500 ಕೋಟಿಯ ನಿರೀಕ್ಷೆಯೊಂದಿಗೆ ಹೊಸ ಪಾಲಿಕೆ ಕಟ್ಟಲು ದೃಢ ಹೆಜ್ಜೆ ಇಟ್ಟಿದೆ.

ಆಯುಕ್ತ ರಮೇಶ್ ಡಿ.ಎಸ್. ಅವರು 60 ನಿಮಿಷಗಳ ಕಾಲ ಬಜೆಟ್ ವಾಚಿಸಿದರು. ಸುಮಾರು 100 ಕಿ.ಮೀ. ಪಾದಚಾರಿ ರಸ್ತೆ, 10 ನಮ್ಮ ಕ್ಲಿನಿಕ್ ಸ್ಥಾಪನೆ, 15 ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಸೇರಿದಂತೆ ಹಲವು ಹೊಸ ಯೋಜನೆಗಳನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ. ಆದರೆ, ಬಹುಕಾಲದ ಬೇಡಿಕೆಯಾಗಿರುವ ಕೆ.ಆರ್.ಪುರ ಸಂತೆ ಅಭಿವೃದ್ಧಿ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾವವಿಲ್ಲ.

ಹೆಚ್ಚುವರಿ ತೆರಿಗೆ ವಿಧಿಸದೆ ಎಸ್ಒಪಿ ಜಾರಿ, ಜಿಬಿಎ ಕಾಯ್ದೆ 2024 ಅನುಸರಣೆ, ಆಸ್ತಿ ತೆರಿಗೆ ಮೌಲ್ಯಮಾಪನ–ವಸೂಲಾತಿ ಬಲಪಡಿಸುವುದು ಹಾಗೂ ತೆರಿಗೆ ಜಾಲದಿಂದ ಹೊರಗಿನ ಆಸ್ತಿಗಳನ್ನು ಗುರುತಿಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸುವ ಮೂಲಕ ₹1,500 ಕೋಟಿ ಆದಾಯ ಸಂಗ್ರಹಿಸುವ ಗುರಿಯನ್ನು ಪಾಲಿಕೆ ಇಟ್ಟುಕೊಂಡಿದೆ. ಜಿ.ಐ.ಎಸ್ ಆಧಾರಿತ ಆಸ್ತಿ ತೆರಿಗೆ ವ್ಯವಸ್ಥೆಯನ್ನು ಬೆಸ್ಕಾಂ, ಬಿಡಬ್ಲ್ಯುಎಸ್ಎಸ್ಬಿ ಮುಂತಾದ ಸಂಸ್ಥೆಗಳೊಂದಿಗೆ ಸಂಯೋಜನೆ ಮಾಡಿ ಆಸ್ತಿ ತೆರಿಗೆ ಪರಿಷ್ಕರಣೆ ಮೂಲಕ ವರ್ಷಕ್ಕೆ ₹150 ಕೋಟಿ ಹೆಚ್ಚುವರಿ ಆದಾಯ, ಕೃತಕ ಬುದ್ಧಿಮತ್ತೆ ಮೂಲಕ ತೆರಿಗೆ ಬಾಕಿದಾರರನ್ನು ಗುರುತಿಸಿ ವಿವಿಧ ದತ್ತಾಂಶಗಳನ್ನು ಒಗ್ಗೂಡಿಸುವ ಮೂಲಕ ತೆರಿಗೆ ಜಾಲವನ್ನು ವಿಸ್ತರಿಸಿ ₹100 ಕೋಟಿ ಹೆಚ್ಚುವರಿ ಆದಾಯ ಗಳಿಸಲಾಗುವುದು ಎಂದು ಬಜೆಟ್ನಲ್ಲಿ ತಿಳಿಸಲಾಗಿದೆ.

ಖಾತೆ ಪರಿವರ್ತನೆಯಿಂದ ₹225 ಕೋಟಿ: ಜಾರಿಯಲ್ಲಿರುವ ‘ಬಿ’ ಖಾತೆಯಿಂದ ‘ಎ’ ಖಾತೆಗೆ ಪರಿವರ್ತನೆ ಅಭಿಯಾನದಿಂದ ವರ್ಷಕ್ಕೆ ₹225 ಕೋಟಿ ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ. ಲೆಗಸಿ ಜಾಹೀರಾತುಗಳಿಗೆ ಅನುಮತಿ, ಸ್ವಯಂ ಜಾಹೀರಾತುಗಳನ್ನು ವಾಣಿಜ್ಯ ಫಲಕಗಳಾಗಿ ಪರಿವರ್ತಿಸಲು ಒಂದು ಬಾರಿ ಅವಕಾಶ ಕಲ್ಪಿಸುವುದು, ರಸ್ತೆವಾರು ಜಾಹೀರಾತುಗಳನ್ನು ಗುರುತಿಸುವ ಕಾರ್ಯ ನಡೆದಿದೆ. ಸ್ವಯಂ ಪರಿವರ್ತನೆಗೆ 3 ತಿಂಗಳ ಅವಕಾಶ ನೀಡಿದ್ದು, ಇದರಿಂದ ₹20 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಜಾಹೀರಾತು ಏಜೆನ್ಸಿ ಪರವಾನಗಿ, ಸ್ಕೈವಾಕ್ ಜಾಹೀರಾತು ನೆಲ ಬಾಡಿಗೆ, ಬಸ್ ತಂಗುದಾಣದಲ್ಲಿ ಜಾಹೀರಾತು ಸೇರಿದಂತೆ ವಿವಿಧ ಜಾಹೀರಾತು ಮೂಲಗಳಿಂದ ₹100 ಕೋಟಿ ಆದಾಯ ಗಳಿಸುವ ಗುರಿ ಇಟ್ಟುಕೊಂಡಿದೆ. ಕಟ್ಟಡ ನಕ್ಷೆ ಮಂಜೂರಾತಿ, ಪ್ಲಿಂತ್ ಪ್ರಮಾಣ ಪತ್ರ, ಸ್ವಾಧೀನಾನುಭವ ಪ್ರಮಾಣಪತ್ರ, ವಿವಿಧ ಶುಲ್ಕಗಳು, ಇತರ ಮೂಲಗಳಿಂದ ₹982 ಕೋಟಿ ನಿರೀಕ್ಷಿಸಲಾಗಿದೆ. ಖಾಲಿ ನಿವೇಶನಗಳಿಗೂ ಆನ್ಲೈನ್ ಸಿಂಗಲ್ ಪ್ಲ್ಯಾಟ್ ಅನುಮತಿ ವ್ಯವಸ್ಥೆಯಿಂದ ₹139 ಕೋಟಿ ಬರುವ ಸಾಧ್ಯತೆ ಇದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-4-1027629972

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.