ಬೆಂಗಳೂರು: ‘ಹೆಚ್ಚುವರಿ ಸಿಬ್ಬಂದಿ, ಕಾರ್ಮಿಕರನ್ನು ನಿಯೋಜಿಸಿ ಅಂತಿಮ ಗಡುವಿನೊಳಗೆ ಈಜೀಪುರ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರರಾವ್ ಸೂಚನೆ ನೀಡಿದರು.

ದಕ್ಷಿಣ ನಗರಪಾಲಿಕೆ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ಈಜೀಪುರ ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿ ಅಧಿಕಾರಿಗಳು, ಗುತ್ತಿಗೆದಾರರ ಜೊತೆ ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಈಜೀಪುರ ಸಿಗ್ನಲ್ ಕಡೆಯಲ್ಲಿ ನಾಲ್ಕು ಗರ್ಡರ್ ಅಳವಡಿಸುವ ಕೆಲಸವನ್ನು ಬುಧವಾರ ಆರಂಭಿಸಿದ್ದು, 2 ತಿಂಗಳಲ್ಲಿ ಪೂರ್ಣಗೊಳಿಸಬೇಕು. 5 ಪೋರ್ಟಲ್ ಫ್ರೇಮ್ ಕಾರ್ಯವನ್ನು ತ್ವರಿತವಾಗಿ ಮಾಡುವ ಮೂಲಕ ಅಕ್ಟೋಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದರು.

‘ಮಳೆಗಾಲ ಆರಂಭವಾಗುತ್ತಿದ್ದು, ಎರಡೂ ಬದಿಯ ಚರಂಡಿಗಳಲ್ಲಿ ಹೂಳು ತೆಗೆದು ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕು. ಮಳೆಗಾಲದ ವೇಳೆ ಯಾವ ಭಾಗದಲ್ಲಿಯೂ ಜಲಾವೃತವಾಗದಂತೆ ಕ್ರಮವಹಿಸಬೇಕು’ ಎಂದರು.

‘ಮಡಿವಾಳ ಕಡೆಯ ಸೈಡ್ರ್ಯಾಂಪ್ ಕಾಮಗಾರಿ ಸ್ಥಳದಲ್ಲಿ ಬೆಸ್ಕಾಂನ ಆರ್ಎಂಯು ಅನ್ನು ಶುಕ್ರವಾರ ಸ್ಥಳಾಂತರ ಮಾಡಬೇಕು. ಆ ಬಳಿಕ ಕೇಂದ್ರೀಯ ಸದನ ಎದುರಿನ ಮೂರು ಮರಗಳನ್ನು ನಾಲ್ಕು ದಿನಗಳ ಒಳಗೆ ಕಟಾವು ಮಾಡಿ ರ್ಯಾಂಪ್ ಕಾಮಗಾರಿ ಕೈಗೆತ್ತಿಕೊಳ್ಳಿ’ ಎಂದು ಸೂಚಿಸಿದರು.

‘ದೊಮ್ಮಲೂರು ಕಡೆಯ ಡೌನ್ ರ್ಯಾಂಪ್ ಕಾಮಗಾರಿ ಶೇ 70ರಷ್ಟು ಪೂರ್ಣಗೊಂಡಿದ್ದು, 15 ದಿನದ ಒಳಗೆ ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸಬೇಕು. ಬಳಿಕ ಸರ್ಜಾಪುರ ಕಡೆಯ ಡೌನ್ ರ್ಯಾಂಪ್ ಕಾಮಗಾರಿ ಆರಂಭಿಸಬೇಕು’ ಎಂದು ಸೂಚನೆ ನೀಡಿದರು.

‘2.59 ಕಿ.ಮೀ. ಉದ್ದದ ಈಜೀಪುರ ಮೇಲ್ಸೇತುವೆ ನಿರ್ಮಾಣ ಮಾಡುತ್ತಿದ್ದು, ಒಟ್ಟು 762 ಸೆಗ್ಮೆಂಟ್ಗಳ ಪೈಕಿ 731 ಸೆಗ್ಮೆಂಟ್ಗಳನ್ನು ಈಗಾಗಲೇ ಅಳವಡಿಸಲಾಗಿದೆ. ಜೂನ್ ಅಂತ್ಯದೊಳಗೆ ಸೆಗ್ಮೆಂಟ್ಗಳ ಅಳವಡಿಕೆ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-4-1377484040

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.