ಬೆಂಗಳೂರು: ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡಲಾಗುವುದು ಎಂಬುದಾಗಿ ಎಂಜಿನಿಯರ್ಗೆ ನಂಬಿಸಿದ ಸೈಬರ್ ವಂಚಕರು, ಅವರಿಂದ ₹2.73 ಕೋಟಿ ದೋಚಿದ್ದಾರೆ. ಈ ಬಗ್ಗೆ ವೈಟ್ಫೀಲ್ಡ್ ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಮಕೃಷ್ಣ ರೆಡ್ಡಿ ಲೇಔಟ್ನಲ್ಲಿ ನೆಲಸಿರುವ 54 ವರ್ಷ ಎಂಜಿನಿಯರ್, ಆನ್ಲೈನ್ ಮೂಲಕ ನೀಡಿದ ದೂರಿನ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸೈಬರ್ ಅಪರಾಧ ಠಾಣೆ ಪೊಲೀಸರು ತಿಳಿಸಿದರು.

‘ಫೆಬ್ರುವರಿ 2ರಂದು ದೂರುದಾರರ ಮೊಬೈಲ್ ಸಂಖ್ಯೆಯನ್ನು ‘ಸ್ಟಾಕ್ ಟ್ರೇಡಿಂಗ್ ವರ್ಲ್ಡ್ ಬಿ–4’ ಹೆಸರಿನ ವಾಟ್ಸ್ಆ್ಯಪ್ ಗ್ರೂಪ್ಗೆ ಸೈಬರ್ ವಂಚಕರು ಸೇರ್ಪಡೆ ಮಾಡಿದ್ದರು. ಆ ಗ್ರೂಪ್ನಲ್ಲಿ ‘ಐಪಿಒ ಸ್ಟಾಕ್ ಟ್ರೇಡಿಂಗ್’ ಬಗ್ಗೆ ವಂಚಕರು ಚರ್ಚಿಸಿದ್ದರು. ಹೂಡಿಕೆ ಮಾಡಿದರೆ ಅಧಿಕ ಲಾಭ ಬರಲಿದೆ ಎಂಬುದಾಗಿಯೂ ಹೇಳಿದ್ದರು. ನಂತರ, ಅದೇ ಗ್ರೂಪ್ನಲ್ಲಿ ಲಿಂಕ್ವೊಂದನ್ನು ಕಳುಹಿಸಿ ಜಾಯಿನ್ ಆಗುವಂತೆ ದೂರುದಾರರಿಗೆ ಸೂಚಿಸಿದ್ದರು. ಆರೋಪಿಗಳ ಸೂಚನೆಯಂತೆ ‘ಮಾರ್ಕ್ ಸಿಎಂ ಮೊಬೈಲ್ ಆ್ಯಪ್’ಗೆ ಎಂಜಿನಿಯರ್ ಲಾಗಿನ್ ಆಗಿದ್ದರು’ ಎಂದು ಪೊಲೀಸರು ಹೇಳಿದರು.

‘ಅದಾದ ಮೇಲೆ ಸೈಬರ್ ವಂಚಕರು ದೇಶದ ಬೇರೆ ಬ್ಯಾಂಕ್ನಲ್ಲಿ ತೆರೆದಿದ್ದ 32 ನಕಲಿ ಖಾತೆಗಳ ವಿವರವನ್ನು ದೂರುದಾರರಿಗೆ ಕಳುಹಿಸಿದ್ದರು. ದೂರುದಾರರು ತಮ್ಮ ಎರಡು ಬ್ಯಾಂಕ್ ಖಾತೆಗಳಿಂದ ಆ ಖಾತೆಗಳಿಗೆ ಹಂತ ಹಂತವಾಗಿ ₹ 2.73 ಕೋಟಿಯನ್ನು ಆರ್ಟಿಜಿಎಸ್, ನೆಫ್ಟ್ ಹಾಗೂ ಐಎಂಪಿಎಸ್ ಮೂಲಕ ವರ್ಗಾವಣೆ ಮಾಡಿದ್ದರು’ ಎಂದು ಮೂಲಗಳು ಹೇಳಿವೆ.

‘ಹೂಡಿಕೆ ಮಾಡಿದ್ದ ಹಣವನ್ನು ವಾಪಸ್ ಪಡೆಯಲು ಎಂಜಿನಿಯರ್ ಇತ್ತೀಚೆಗೆ ಯತ್ನಿಸಿದ್ದರು. ಹಣ ವಾಪಸ್ ಪಡೆಯಬೇಕಾದರೆ ಇನ್ನೂ ಹೆಚ್ಚಿನ ಹೂಡಿಕೆ ಮಾಡಬೇಕು ಎಂಬುದಾಗಿ ವಂಚಕರು ಸೂಚಿಸಿದ್ದರು. ಬಳಿಕ ಸೈಬರ್ ವಂಚಕರು ಸಂಪರ್ಕಕ್ಕೆ ಸಿಕ್ಕಿಲ್ಲ. ಆಗ ವಂಚನೆ ನಡೆದಿರುವುದು ಗೊತ್ತಾಗಿ ದೂರು ನೀಡಿದ್ದಾರೆ’ ಎಂದು ಮೂಲಗಳು ಹೇಳಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-16-2060158954

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.