ಬೆಂಗಳೂರು: ತ್ಯಾಜ್ಯ ಸಂಗ್ರಹ ವಿಲೇವಾರಿ ಗುತ್ತಿಗೆದಾರರು ಮತ್ತು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ (ಬಿಎಸ್ಡಬ್ಲ್ಯುಎಂಎಲ್) ಅಧಿಕಾರಿಗಳ ನಡುವಿನ ಪೈಪೋಟಿಯಿಂದ ನಗರದ ಹಲವು ಭಾಗಗಳಲ್ಲಿ ಸೋಮವಾರದಿಂದ ಕಸ ಸಂಗ್ರಹ, ವಿಲೇವಾರಿ ಸ್ಥಗಿತಗೊಂಡಿದೆ.

ಘನತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸದೆ ‘ಎಸ್ಮಾ ಕಾಯ್ದೆ’ ಉಲ್ಲಂಘಿಸಿರುವ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳುವಂತೆ ಬಿಎಸ್ಡಬ್ಲ್ಯುಎಂಎಲ್ನ ಸಹಾಯಕ ಪ್ರಧಾನ ವ್ಯವಸ್ಥಾಪಕರು (ಎಜಿಎಂ) ಆಯಾ ಪೊಲೀಸ್ ಠಾಣೆಗಳಲ್ಲಿ 30ಕ್ಕೂ ಹೆಚ್ಚು ದೂರು ನೀಡಿದ್ದಾರೆ. ಕೆಲವರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.

ತ್ಯಾಜ್ಯ ಸಂಗ್ರಹ, ಸಾಗಣೆ ಮಾಡುವ ಕಾರ್ಮಿಕರಲ್ಲಿ, ಹಲವರು ತಮ್ಮ ಮೇಲೆ ನಡೆಯುತ್ತಿರುವ ಶೋಷಣೆಯನ್ನು ವಿರೋಧಿಸಿ ಕೆಲಸಕ್ಕೆ ಹಾಜರಾಗಿಲ್ಲ. ಹೀಗಾಗಿ, ನಗರದಲ್ಲಿ ಸೋಮವಾರದಿಂದ ಹಲವು ಪ್ರದೇಶಗಳಲ್ಲಿ ಮನೆಗಳಿಂದ ತ್ಯಾಜ್ಯವನ್ನು ಸಂಗ್ರಹಿಸಿಲ್ಲ.

ಮಂಗಳವಾರದಿಂದ ಬಹುತೇಕ ಎಲ್ಲ ಕಾರ್ಮಿಕರು ಕೆಲಸದಿಂದ ಹೊರಗುಳಿಯುವುದರಿಂದ, ಕಸ ಸಂಗ್ರಹ ಹಾಗೂ ಸಾಗಣೆಯಲ್ಲಿ ಸಾಕಷ್ಟು ಸಮಸ್ಯೆಯಾಗಲಿದೆ ಎನ್ನಲಾಗಿದೆ. ಆದರೆ, ಇದಕ್ಕೆ ಪರ್ಯಾಯ ಕ್ರಮಗಳನ್ನು ಬಿಎಸ್ಡಬ್ಲ್ಯುಎಂಎಲ್ ಕೈಗೊಂಡಿಲ್ಲ.

ದೂರು: ‘ಘನತ್ಯಾಜ್ಯದ ಪ್ರಾಥಮಿಕ ಸಂಗ್ರಹ, ಸಾಗಣೆಗೆ ನೇಮಿಸಲಾದ ಗುತ್ತಿಗೆದಾರರು, ಮನೆಗಳಿಂದ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಸಂಸ್ಕರಣಾ ಘಟಕ ಹಾಗೂ ಭೂ ಭರ್ತಿ ಪ್ರದೇಶಗಳಿಗೆ ಸಾಗಿಸಬೇಕು. ಇದನ್ನು ಅವರು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಕಸ ವಿಲೇವಾರಿಯನ್ನು ಅತ್ಯಗತ್ಯ ಸೇವೆ ಎಂದು ಪರಿಗಣಿಸಿ ‘ಎಸ್ಮಾ’ ಕಾಯ್ದೆಯಡಿ ತರಲಾಗಿದೆ. ಗುತ್ತಿಗೆದಾರರು ಸೋಮವಾರ (ಮಾರ್ಚ್ 23) ತ್ಯಾಜ್ಯ ಸಂಗ್ರಹಿಸದೆ ತಮ್ಮ ಕರ್ತವ್ಯದಲ್ಲಿ ತೀವ್ರ ನಿರ್ಲಕ್ಷ್ಯ ತೋರಿದ್ದಾರೆ. ಈ ಕೃತ್ಯವು ಸಾರ್ವಜನಿಕ ಆರೋಗ್ಯಕ್ಕೆ ಭಂಗ ತರುವಂತಹದ್ದಾಗಿದ್ದು, ‘ಎಸ್ಮಾ’ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ. ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ನಗರದ ನೈರ್ಮಲ್ಯವನ್ನು ಕಾಪಾಡುವ ನಿಟ್ಟಿಯಲ್ಲಿ ಕರ್ತವ್ಯಲೋಪ ಎಸಗಿರುವ ಗುತ್ತಿಗೆದಾರರ ವಿರುದ್ಧ ‘ಎಸ್ಮಾ’ ಕಾಯ್ದೆಯನುಸಾರ ಕಾನೂನು ಕ್ರಮ ಜರುಗಿಸಬೇಕು’ ಎಂದು ಎಜಿಎಂಗಳು ದೂರಿನಲ್ಲಿ ತಿಳಿಸಿದ್ದಾರೆ.

ಊರುಗಳಿಗೆ ಹೊರಟ ಕಾರ್ಮಿಕರು: ‘ಮನೆಗಳಿಂದ ಕಸ ಸಂಗ್ರಹ, ಸಾಗಣೆ ಮಾಡುವ ಕಾರ್ಮಿಕರು ರಸ್ತೆಯಲ್ಲಿ ತ್ಯಾಜ್ಯ ಆಯುವುದರಿಂದ ಸಾಕಷ್ಟು ನೊಂದಿದ್ದಾರೆ. ಹಲವು ರೀತಿಯ ರೋಗಗಳೂ ಬಂದಿವೆ. ಹೀಗಾಗಿ, ಅವರು ಕೆಲಸಕ್ಕೆ ಬರುವುದಿಲ್ಲ ಎಂದು ಹೇಳಿ ಊರುಗಳತ್ತ ಹೊರಡುತ್ತಿದ್ದಾರೆ’ ಎಂದು ಗುತ್ತಿಗೆದಾರರು ಹೇಳಿದರು.

‘ಕಾರ್ಮಿಕರಲ್ಲಿ ಬಹುತೇಕರು ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದವರು. ಆ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿರುವುದರಿಂದ, ಕಾರ್ಮಿಕರು ತಮ್ಮ ಊರುಗಳತ್ತ ಪ್ರಯಾಣಿಸುತ್ತಿದ್ದಾರೆ. ಹೀಗಾಗಿ, ಕಾರ್ಮಿಕರ ಸಂಖ್ಯೆ ಸುಮಾರು ಶೇ 80ರಷ್ಟು ಕಡಿಮೆಯಾಗಿದೆ. ಉಳಿದವರು ಕಸ ಆಯುವುದಿಲ್ಲ ಎನ್ನುತ್ತಿದ್ದಾರೆ’ ಎಂದು ಗುತ್ತಿಗೆದಾರರು ತಮ್ಮ ಸಮಸ್ಯೆ ಹೇಳಿಕೊಂಡರು.

ಕಾರ್ಮಿಕರಿಗೆ ಶೋಷಣೆ: ಪ್ರತಿ ದೂರು ‘ಗುತ್ತಿಗೆದಾರರಿಗೆ ನೀಡಿರುವ ‘ಸರಬರಾಜು ಕಾರ್ಯಾದೇಶ’ದಂತೆ ಪ್ರತಿನಿತ್ಯ ಮನೆಗಳಿಂದ ಕಸವನ್ನು ಪ್ರಥಮ ಹಂತದ ಸಂಗ್ರಹ ದ್ವಿತೀಯ ಹಂತದ ಸಾಗಣೆಗೆ ವಾಹನಗಳು ಕಾರ್ಮಿಕರನ್ನು ಒದಗಿಸಬೇಕು. ಆದರೆ ಕಾರ್ಮಿಕರಿಂದ ಕಸವನ್ನು ಆಯಿಸಲಾಗುತ್ತಿದೆ.

ಈ ಮೂಲಕ ಅವರನ್ನು ಶೋಷಿಸಲಾಗುತ್ತಿದೆ. ಇದರಿಂದ ಅವರು ಕೆಲಸಕ್ಕೆ ಬರುತ್ತಿಲ್ಲ. ಈ ಬಗ್ಗೆ ಸಂಘದ ವತಿಯಿಂದ ಜಿಬಿಎ ಮುಖ್ಯ ಆಯುಕ್ತರು ಬಿಎಸ್ಡಬ್ಲ್ಯುಎಂಎಲ್ನ ಸಿಇಒ ಅವರಿಗೆ ಮಾರ್ಚ್ 17ರಂದೇ ಪತ್ರ ಬರೆದು ತಿಳಿಸಿದ್ದೆವು. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಮನವಿ ಮಾಡಿಕೊಂಡಿದ್ದೆವು’ ಎಂದು ಸಂಘದ ಪ್ರಧಾನ ವ್ಯವಸ್ಥಾಪಕ ಎಸ್.ಎನ್. ಬಾಲಸುಬ್ರಮಣಿಯಂ ತಿಳಿಸಿದರು.

‘ಕಾರ್ಮಿಕರಿಂದ ಅಮಾನವೀಯ ಕೆಲಸ ಮಾಡಿಸಬೇಡಿ ಎಂದು ಮನವಿ ಮಾಡಿಕೊಂಡರೆ ಎಸ್ಮಾ ಜಾರಿ ಮಾಡುತ್ತೇವೆ ಎಂದು ನಮ್ಮನ್ನು ಬೆದರಿಸಲಾಗುತ್ತಿದೆ. ರಸ್ತೆಯಲ್ಲಿ ಕಸವನ್ನು ನಾವು ಆಯುವುದಿಲ್ಲ ಎಂದು ಕಾರ್ಮಿಕರು ನಮ್ಮಲ್ಲಿ ಹೇಳುತ್ತಿದ್ದಾರೆ. ನಮಗೆ ಕೆಲಸ ಬೇಡವೇ ಬೇಡ ನ್ನುತ್ತಿದ್ದಾರೆ. ಬಿಎಸ್ಡಬ್ಲ್ಯುಎಂಎಲ್ನ ಸಿಇಒ ಹಾಗೂ ಸಿಒಒ ಅವರು ತಮ್ಮ ಅಧೀನದಲ್ಲಿರುವ ಅಧಿಕಾರಿಗಳನ್ನೂ ಬೆದರಿಸಿ ದೂರು ನೀಡಿದ್ದಾರೆ. ಕಾರ್ಮಿಕರನ್ನು ಅಮಾನವೀಯವಾಗಿ ನಡೆಸಿಕೊಂಡಿರುವ ಬಗ್ಗೆ ನಾವೂ ದೂರು ನೀಡುತ್ತೇವೆ. ಆರು ತಿಂಗಳಿಂದ ಬಿಲ್ ಪಾವತಿಸಿಲ್ಲ. ಪಾವತಿಸಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ’ ಎಂದರು.

‘ಕೆಲವು ಗುತ್ತಿಗೆದಾರರಿಂದ ಬ್ಲ್ಯಾಕ್ಮೇಲ್’

‘ಘನತ್ಯಾಜ್ಯ ವಿಲೇವಾರಿ ನಿಯಮದಂತೆಯೇ ನಾವು ಕೆಲಸ ನಿರ್ವಹಿಸುತ್ತಿದ್ದೇವೆ. ಮನೆಯಿಂದ ಒಣ ಹಾಗೂ ಹಸಿ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಅದನ್ನು ಲಾರಿ ಅಥವಾ ಸಂಸ್ಕರಣೆ ಘಟಕಗಳಿಗೆ ನೀಡುವಂತೆ ಗುತ್ತಿಗೆ ನೀಡಲಾಗಿದೆ. ಆದರೆ ಮಿಶ್ರ ಕಸವನ್ನು ಸಂಗ್ರಹಿಸಿ ಅವರೇ ರಸ್ತೆಯಲ್ಲಿ ಪ್ರತ್ಯೇಕಿಸುತ್ತಿದ್ದಾರೆ.

ನಾವು ರಸ್ತೆಯಲ್ಲಿ ಕಸ ಆಯುವಂತೆ ಹೇಳಿಲ್ಲ. ಅಲ್ಲದೆ ಕಾರ್ಮಿಕರಿಗೆ ಅಗತ್ಯ ರಕ್ಷಕ ಸಾಮಗ್ರಿಗಳನ್ನು ನೀಡುವುದು ಗುತ್ತಿಗೆದಾರರ ಕರ್ತವ್ಯ. ಕೆಲವು ಗುತ್ತಿಗೆದಾರರು ತಮ್ಮ ಕೆಲಸವನ್ನು ತಾವು ಮಾಡದೆ ಸುಮ್ಮನೆ ನಮ್ಮ ಮೇಲೆ ಗೂಬೆ ಕೂರಿಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ. ಇದಕ್ಕೆಲ್ಲ ನಾವು ಹೆದರುವುದಿಲ್ಲ. ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳುತ್ತೇವೆ’ ಎಂದು ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಕಾರ್ಯದಲ್ಲಿರುವ ಬಿಎಸ್ಡಬ್ಲ್ಯುಎಂಎಲ್ನ ಸಿಇಒ ಕರೀಗೌಡ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಆರು ತಿಂಗಳ ಬಿಲ್ ಪಾವತಿ ಬಾಕಿ ಇದೆ. ಮೂರು ತಿಂಗಳ ಬಿಲ್ ಮೊತ್ತವನ್ನು ಸೋಮವಾರ ಸಂಜೆಯಿಂದ ಬಿಡುಗಡೆ ಮಾಡಲು ಆರಂಭಿಸಿದ್ದೇವೆ. ಉಳಿದ ಮೂರು ತಿಂಗಳ ಮೊತ್ತವನ್ನು ಕೂಡಲೇ ಪಾವತಿಸಲಾಗುತ್ತದೆ’ ಎಂದು ಹೇಳಿದರು.

25, 26ರಂದು ನಗರ ಪಾಲಿಕೆಗಳ ಬಜೆಟ್

ಬೆಂಗಳೂರು: ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳು ತಮ್ಮ ಮೊದಲ ಬಜೆಟ್ ಮಂಡಿಸಲು ಸಜ್ಜಾಗಿವೆ. ಪೂರ್ವ ನಗರ ಪಾಲಿಕೆ ಹಾಗೂ ದಕ್ಷಿಣ ನಗರ ಪಾಲಿಕೆ ಬಜೆಟ್ ಮಾರ್ಚ್ 25ರಂದು ಮಂಡನೆಯಾಗಲಿದ್ದು ಉತ್ತರ ಕೇಂದ್ರ ಹಾಗೂ ಪಶ್ಚಿಮ ನಗರ ಪಾಲಿಕೆಗಳ ಬಜೆಟ್ ಮಾರ್ಚ್ 26ರಂದು ಮಂಡಿಸಲಾಗುತ್ತದೆ ಎಂದು ಜಿಬಿಎ ಮೂಲಗಳು ತಿಳಿಸಿವೆ.

2025ರ ಸೆಪ್ಟೆಂಬರ್ 2ರಂದು ಅಸ್ತಿತ್ವಕ್ಕೆ ಬಂದಿರುವ ಐದು ನಗರ ಪಾಲಿಕೆಗಳಿಗೆ ರಾಜ್ಯ ಬಜೆಟ್ನಲ್ಲಿ ಯಾವುದೇ ರೀತಿಯಲ್ಲೂ ಪ್ರತ್ಯೇಕ ಹಣ ಅಥವಾ ಅನುದಾನವನ್ನು ಪ್ರಕಟಿಸಿಲ್ಲ. ಆಯಾ ನಗರ ಪಾಲಿಕೆಗಳ ಆರ್ಥಿಕ ಸಾಮರ್ಥ್ಯ ಅನುಸಾರ ‘ಮುನಿಸಿಪಲ್ ಬಾಂಡ್’ ಮೂಲಕ ಸಂಪನ್ಮೂಲವನ್ನು ಕ್ರೋಡೀಕರಿಸಲು ಅನುವು ಮಾಡಿಕೊಡಲಾಗಿದೆ.

ಆಸ್ತಿ ತೆರಿಗೆ ಜಾಹೀರಾತು ಪಾರ್ಕಿಂಗ್ ಶುಲ್ಕ ಸೇರಿದಂತೆ ತೆರಿಗೆ ಶುಲ್ಕಗಳೇ ನಗರ ಪಾಲಿಕೆಗಳ ಆರ್ಥಿಕ ಸಂಪನ್ಮೂಲವಾಗಿವೆ. ಈ ತೆರಿಗೆಗಳಲ್ಲಿ ಶೇ 50ರಷ್ಟನ್ನು ಸಂಗ್ರಹಿಸಲು ನಗರ ಪಾಲಿಕೆಗಳು ಆರು ತಿಂಗಳಲ್ಲಿ ವಿಫಲವಾಗಿವೆ. ಹೀಗಾಗಿ ಆರ್ಥಿಕ ಮೂಲವನ್ನು ಬಜೆಟ್ನಲ್ಲಿ ನಮೂದಿಸಿ ಅದನ್ನು ವೆಚ್ಚ ಮಾಡುವ ಬಗೆಯನ್ನು ಬಜೆಟ್ನಲ್ಲಿ ವಿವರಿಸುವುದೇ ಪ್ರಮುಖ ಸವಾಲಾಗಿದೆ. ಆದರೂ ಸಾಲವನ್ನೇ ನೆಚ್ಚಿಕೊಂಡು ಬಜೆಟ್ ಮಂಡಿಸುವ ಪ್ರಯತ್ನ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.