ಬೆಂಗಳೂರು: ನಕಲಿ ಆಭರಣಗಳನ್ನು ಅಡಮಾನ ಇರಿಸಿ, ಲಕ್ಷಾಂತರ ರೂಪಾಯಿ ಸಾಲ ಪಡೆದು ಬ್ಯಾಂಕ್ಗೆ ವಂಚಿಸಿದ್ದ ರಾಷ್ಟ್ರೀಕೃತ ಬ್ಯಾಂಕ್ನ ಚಿನ್ನ ಮೌಲ್ಯಮಾಪಕ ಸೇರಿದಂತೆ ನಾಲ್ವರ ವಿರುದ್ಧ ವರ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಯಾಂಕ್ನ ಚಿನ್ನ ಮೌಲ್ಯಮಾಪಕ ರವಿಕುಮಾರ್, ಸಹಚರರಾದ ಮೋಹನ್ ರೆಡ್ಡಿ, ಕೇಶವ ಮತ್ತು ಮಹದೇಶ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ವರ್ತೂರಿನ ರಾಷ್ಟ್ರೀಕೃತ ಬ್ಯಾಂಕ್ನ ಶಾಖಾ ವ್ಯವಸ್ಥಾಪಕ ಎಸ್.ಎನ್.ಆದರ್ಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ₹16.53 ಲಕ್ಷ ವಂಚಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ರವಿಕುಮಾರ್ ಎಂಬುವರು ಬ್ಯಾಂಕ್ನ ವರ್ತೂರು ಶಾಖೆಯಲ್ಲಿ ಮೂರು ವರ್ಷಗಳಿಂದ ಚಿನ್ನ ಮೌಲ್ಯಮಾಪಕರಾಗಿ ಕೆಲಸ ಮಾಡುತ್ತಿದ್ದರು. ಈ ವೇಳೆ ಮೋಹನ್ ರೆಡ್ಡಿ, ಕೇಶವ ಮತ್ತು ಮಹದೇಶಗೆ ಕಮಿಷನ್ ಆಸೆ ತೋರಿಸಿ ನಕಲಿ ಆಭರಣಗಳನ್ನು ಅವರ ಹೆಸರಿನಲ್ಲಿ ಅಡಮಾನ ಇರಿಸಿ ಲಕ್ಷಾಂತರ ರೂಪಾಯಿ ಸಾಲ ಪಡೆಯಲಾಗಿತ್ತು. ಬಳಿಕ, ಮೋಹನ್ ರೆಡ್ಡಿ, ಕೇಶವ ಹಾಗೂ ಮಹದೇಶ ಅವರಿಗೆ ಕಮಿಷನ್ ನೀಡುತ್ತಿದ್ದರು ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.

ಮೂರು ತಿಂಗಳಿಗೊಮ್ಮೆ ಗ್ರಾಹಕರು ಅಡವಿಟ್ಟ ಚಿನ್ನವನ್ನು ಮರುಮೌಲ್ಯಮಾಪನ ಮಾಡಬೇಕು. ಇದರಂತೆ ಮೇ 12ರಂದು ಬೇರೆ ಚಿನ್ನ ಮೌಲ್ಯಮಾಪಕರಿಂದ ಚಿನ್ನ ಪರಿಶೀಲಿಸುವಾಗ ಆರೋಪಿ ಮೋಹನ್ ರೆಡ್ಡಿ ಖಾತೆಯಲ್ಲಿ ಅಡವಿಟ್ಟಿದ್ದ 56.20 ಗ್ರಾಂ ಚಿನ್ನ ನಕಲಿ ಎಂದು ಗೊತ್ತಾಗಿತ್ತು. ಮೇಲಧಿಕಾರಿಗಳಿಗೆ ವಿಷಯ ತಿಳಿಸಿದಾಗ ಎಲ್ಲಾ ಖಾತೆಗಳನ್ನು ಪರಿಶೀಲಿಸುವಂತೆ ತಿಳಿಸಿದ್ದರು. ಈ ವೇಳೆ ಕೇಶವ್ ಹಾಗೂ ಮಹದೇವ್ ಅಡಮಾನ ಇಟ್ಟಿದ್ದ ಬಂಗಾರ ನಕಲಿ ಎಂದು ತಿಳಿದುಬಂದಿತ್ತು. ಮೂವರನ್ನು ಬ್ಯಾಂಕ್ಗೆ ಕರೆಸಿ, ವಿಚಾರಣೆ ನಡೆಸಿದಾಗ, ‘ರವಿಕುಮಾರ್ ಅವರು ತನ್ನ ಆಭರಣಗಳನ್ನು ತನ್ನ ಹೆಸರಿನಲ್ಲಿ ಅಡಮಾನ ಇರಿಸಲು ಸಾಧ್ಯ ಇಲ್ಲ. ಹೀಗಾಗಿ, ನಿಮ್ಮ ಹೆಸರಿನಲ್ಲಿ ಅಡಮಾನ ಇರಿಸಿ, ಸಾಲ ಪಡೆದು, ಬಳಿಕ ಅದಕ್ಕೆ ಕಮಿಷನ್ ನೀಡುತ್ತೇನೆ’ ಎಂಬುದಾಗಿ ನಂಬಿಸಿದ್ದರೆಂದು ಹೇಳಿಕೆ ನೀಡಿದ್ದರು. ಅದಾದ ಮೇಲೆ ದೂರು ನೀಡಲಾಗಿತ್ತು ಎಂದು ಮೂಲಗಳು ಹೇಳಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-4-127894073

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.