ಮಂಗಳವಾರ, ಸೆಪ್ಟೆಂಬರ್ 21, 2021
22 °C

ಬೆಂಗಳೂರು: ಐದನೇ ಮಹಡಿಯಿಂದ ಬಿದ್ದು ಗಾರೆ‌ ಮೇಸ್ತ್ರಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೆ.ಸಿ.ನಗರ ಠಾಣೆ ವ್ಯಾಪ್ತಿಯಲ್ಲಿರುವ‌‌ ನಿರ್ಮಾಣ ಹಂತದ ಕಟ್ಟಡದ ಐದನೇ ಮಹಡಿಯಿಂದ ಬಿದ್ದು ವೆಂಕಟಸ್ವಾಮಿ (46) ಎಂಬುವರು ಮೃತಪಟ್ಟಿದ್ದಾರೆ.

'ಡಿ.ಜೆ. ಹಳ್ಳಿಯ ವಾಹಬ್ ಗಾರ್ಡನ್ ನಿವಾಸಿ ವೆಂಕಟಸ್ವಾಮಿ, ನಿರ್ಮಾಣ ಹಂತದ ಕಟ್ಟಡದಲ್ಲಿ ಗಾರೆ ಕೆಲಸದ ಮೇಸ್ತ್ರಿ ಆಗಿದ್ದರು' ಎಂದು ಪೊಲೀಸರು ‌ಹೇಳಿದರು.

'ಠಾಣೆ ವ್ಯಾಪ್ತಿಯ ಬೋರ್ ಬ್ಯಾಂಕ್ ರಸ್ತೆ ಬಳಿಯ‌ ಜಾಗದಲ್ಲಿ  10 ದಿನಗಳಿಂದ ಕಟ್ಟಡ ನಿರ್ಮಾಣ ಕೆಲಸ ನಡೆಯುತ್ತಿದೆ. ಹಬ್ಬದ‌ ದಿನವಾದ ಶುಕ್ರವಾರವೂ ಕೆಲಸಕ್ಕೆ ‌ಬಂದಿದ್ದ ವೆಂಕಟಸ್ವಾಮಿ, ಐದನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇದೇ ವೇಳೆಯೇ ಆಯ ತಪ್ಪಿ ಬಿದ್ದಿದ್ದರು. ತೀವ್ರ‌ ಗಾಯಗೊಂಡು ಅವರು ಅಸುನೀಗಿದ್ದಾರೆ' ಎಂದೂ‌ ಮಾಹಿತಿ ನೀಡಿದರು.

'ಕೆಲಸದ ಸ್ಥಳದಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಜಾಗದ ಮಾಲೀಕ ಹಾಗೂ ಗುತ್ತಿಗೆದಾರನ ಬಗ್ಗೆ‌ ಮಾಹಿತಿ ಕಲೆಹಾಕಲಾಗುತ್ತಿದೆ' ಎಂದೂ‌ ಪೊಲೀಸರು  ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು