ಬೆಂಗಳೂರು: ‘ರೀಲ್ಸ್’ ಮಾಡಲು ಮನೆಯ ಸದಸ್ಯರನ್ನೇ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿಕೊಂಡು ಬಂದು ಕೊರಿಯರ್ ಮಾಡಲು ಯತ್ನಿಸಿದ್ದ ಕುಟುಂಬವೊಂದು ಕೊನೆಗೆ ಸಿಕ್ಕಿ ಬಿದ್ದು ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಮಲ್ಲೇಶ್ವರದಲ್ಲಿ ಮಂಗಳವಾರ ಈ ಘಟನೆ ನಡೆದಿದೆ.

ಮಲ್ಲೇಶ್ವರದ ಟೆಂಪಲ್ ಸ್ಟ್ರೀಟ್ನ ಕೋಕಿಲಾ ಮತ್ತು ಕುಟುಂಬ ಸದಸ್ಯರು, ರೀಲ್ಸ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಗಳಿಸಲು ಹೋಗಿ ಪೇಚಿಗೆ ಸಿಲುಕಿದ್ದರು.

ಕೋಕಿಲಾ ಅವರು ತಮ್ಮ ಕುಟುಂಬದ ಇತರೆ ಸದಸ್ಯರ ಜತೆ ಸೇರಿಕೊಂಡು ವಯೋವೃದ್ಧ ತಂದೆ ಯೋಗೇಶ್ ಅವರನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿಕೊಂಡು ಮಲ್ಲೇಶ್ವರದ ಕೊರಿಯರ್ ಕಚೇರಿಗೆ ಹೋಗಿ ಹೊರ ರಾಜ್ಯಕ್ಕೆ ಪಾರ್ಸೆಲ್ ಕೊರಿಯರ್ ಮಾಡಬೇಕೆಂದು ಕೇಳಿದ್ದರು. ದೊಡ್ಡ ಚೀಲ ನೋಡಿದ್ದ ಕೊರಿಯರ್ ಸಿಬ್ಬಂದಿ, ಚೀಲದೊಳಗೆ ಏನಿದೆ ಎಂದು ಪ್ರಶ್ನಿಸಿದ್ದರು. ಅದಕ್ಕೆ ಕೋಕಿಲಾ ಮತ್ತು ಕುಟುಂಬ ಸದಸ್ಯರು ಯಾವುದೇ ಉತ್ತರ ನೀಡಲಿಲ್ಲ. ಅನುಮಾನಗೊಂಡ ಸಿಬ್ಬಂದಿ, ಚೀಲ ತೆರೆದು ನೋಡಿದಾಗ ಅದರೊಳಗೆ ವ್ಯಕ್ತಿಯೊಬ್ಬರು ಇರುವುದು ಗೊತ್ತಾಗಿತ್ತು. ಅವರನ್ನು ಗಮನಿಸಿದ್ದ ಸಿಬ್ಬಂದಿ, ವೈಯಾಲಿಕಾವಲ್ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಷ್ಟರಲ್ಲಿ ಕೋಕಿಲಾ ಮತ್ತು ಕುಟುಂಬ ಸದಸ್ಯರು ಸ್ಥಳದಿಂದ ತೆರಳಿದ್ದರು ಎಂದು ಪೊಲೀಸರು ಹೇಳಿದರು.

ಸ್ಥಳಕ್ಕೆ ಬಂದಿದ್ದ ಪೊಲೀಸರು, ಕೊರಿಯರ್ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡು, ಕಚೇರಿಯಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಾವಳಿ ಪರಿಶೀಲನೆ ನಡೆಸಿದರು. ಕೋಕಿಲಾ ಮತ್ತು ಕುಟುಂಬ ಸದಸ್ಯರನ್ನು ಪತ್ತೆಹಚ್ಚಿ ಠಾಣೆಗೆ ಕರೆಸಿ ವಿಚಾರಣೆ ನಡೆಸಿದರು.

‘ರಂಜಾನ್ ಹಾಗೂ ಯುಗಾದಿ ಹಬ್ಬಕ್ಕೆಂದು ನಗರದಿಂದ ಊರಿಗೆ ತೆರಳುವವರ ಸಂಖ್ಯೆ ಹೆಚ್ಚಿತ್ತು. ಬಸ್ಗಳಲ್ಲಿ ಪ್ರಯಾಣ ದರ ಹೆಚ್ಚಾಗಿತ್ತು. ಜತೆಗೆ, ಟಿಕೆಟ್ ಸಹ ಸಿಗುತ್ತಿಲ್ಲ. ಈ ಸಂಬಂಧ ಸಾರ್ವಜನಿಕರಿಗೆ ಸಂದೇಶ ರವಾನಿಸಲು ರೀಲ್ಸ್ ಮಾಡಲು ಯತ್ನಿಸಿದ್ದೆವು’ ಎಂದು ಕೋಕಿಲಾ ಕುಟುಂಬದವರು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡು ಕ್ಷಮೆಯಾಚನೆ ಮಾಡಿದ್ದಾರೆ.

‘ಈ ರೀತಿ ಮಾಡುವುದು ತಪ್ಪು ಎಂದು ರೀಲ್ಸ್ ಮಾಡಲು ಯತ್ನಿಸಿದವರಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.