ಬೆಂಗಳೂರು: ಶುಭೋದಯ ಫುಟ್ಬಾಲ್ ಕ್ಲಬ್ ತಂಡದ ಪ್ರತಿಭಾನ್ವಿತ ಆಟಗಾರ ದರ್ಶನ್ ಬಿ.ಎನ್. (25) ಅವರು ಅಲ್ಪಕಾಲದ ಅನಾರೋಗ್ಯದಿಂದ ಚಾಮರಾಜಪೇಟೆಯ ರಂಗದೊರೆ ಮೆಮೊರಿಯಲ್ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.

ದರ್ಶನ್ ಅವರು ಬಿಡಿಎಫ್ಎ ‘ಸಿ’ ಡಿವಿಷನ್ ಲೀಗ್ನಲ್ಲಿ ಹೊಸಕೋಟೆ ಫುಟ್ಬಾಲ್ ಕ್ಲಬ್ ತಂಡವನ್ನು ಪ್ರತಿನಿಧಿಸಿದ್ದರು. ಮೇ 19ರಂದು ನಡೆದ ಲೀಗ್ ಪಂದ್ಯದಲ್ಲಿ ಕೊನೆಯ ಬಾರಿ ಕಣಕ್ಕಿಳಿದಿದ್ದರು.

ಶುಭೋದಯ ಕ್ಲಬ್ ಪರ ಕಳೆದ ಎಂಟು ವರ್ಷಗಳಿಂದ ಆಡುತ್ತಿದ್ದ ಅವರು, ಈಚೆಗೆ ವೈರಾಣು ಜ್ವರದಿಂದ ಬಳಲುತ್ತಿದ್ದರು.

ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಅಮೃತೂರು ಮೂಲದ ದರ್ಶನ್ ಅವರ ಕುಟುಂಬವು ನಗರದ ಹನುಮಂತನಗರದಲ್ಲಿ ನೆಲಸಿತ್ತು. ಅಮೃತೂರು ಸಮೀಪದ ಗೌಡಗೆರೆಯಲ್ಲಿ ಸೋಮವಾರ ಸಂಜೆ ಅಂತ್ಯಸಂಸ್ಕಾರ ನೆರವೇರಿತು ಎಂದು ಅವರ ಕೋಚ್ ಶ್ರೀನಿವಾಸ್ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-4-1360802654

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.