ಬೆಂಗಳೂರು: ಪೂರ್ವ ನಗರ ಪಾಲಿಕೆ ಭಾಗದ ಹಲವು ಪ್ರದೇಶ ಗಳಲ್ಲಿ ಪಾದಚಾರಿ ಮಾರ್ಗದ ಒತ್ತುವರಿಯನ್ನು ಭಾನುವಾರ ತೆರವುಗೊಳಿಸಲಾಯಿತು.

‘ಪ್ರಮುಖ ರಸ್ತೆ ಬದಿಗಳು ಹಾಗೂ ಸಾರ್ವಜನಿಕ ಸ್ಥಳಗಳನ್ನು ಒತ್ತುವರಿ ಮಾಡಿಕೊಂಡಿರುವ ಅಂಗಡಿಗಳು, ತಾತ್ಕಾಲಿಕ ನಿರ್ಮಾಣಗಳು, ವ್ಯಾಪಾರ ಮಳಿಗೆಗಳು, ಕಟ್ಟಡ ಸಾಮಗ್ರಿಗಳು, ಜಾಹೀರಾತು ಫಲಕಗಳು ಹಾಗೂ ಇತರೆ ವಸ್ತುಗಳಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ’ ಎಂದು ಹೆಚ್ಚುವರಿ ಆಯುಕ್ತ ಲೋಖಂಡೆ ಸ್ನೇಹಲ್ ಸುಧಾಕರ್ ತಿಳಿಸಿದ್ದಾರೆ.

ಹೂಡಿ ವಿಭಾಗ ವ್ಯಾಪ್ತಿಯಲ್ಲಿ ಹೂಡಿ ಸರ್ಕಲ್ನಿಂದ ಲಯನ್ಸ್ ಪಾರ್ಕ್ ರಸ್ತೆ, ಹೂಡಿ ಸರ್ಕಲ್ನಿಂದ ಕುಂದಲಹಳ್ಳಿ ಗೇಟ್, ಹೂಡಿ ಸರ್ಕಲ್ನಿಂದ ಅಯ್ಯಪ್ಪನಗರ ಮುಖ್ಯ ರಸ್ತೆ, ಹೂಡಿ ಸರ್ಕಲ್ನಿಂದ ಐಟಿಪಿಎಲ್ ಮುಖ್ಯರಸ್ತೆ, ಹೂಡಿ ಸರ್ಕಲ್ನಿಂದ ಬೆಳ್ಳಂದೂರುವರೆಗೆ ಕಾರ್ಯಾಚರಣೆ ನಡೆಸಲಾಯಿತು.

ಕಾಡುಗೋಡಿ ವಿಭಾಗ ವ್ಯಾಪ್ತಿಯಲ್ಲಿ ಚನ್ನಸಂದ್ರ ಮುಖ್ಯ ರಸ್ತೆ, ಐಟಿಪಿಎಲ್ ಮುಖ್ಯರಸ್ತೆ, ವೈಟ್ಫೀಲ್ಡ್ ಮುಖ್ಯ ರಸ್ತೆ, ಕಾಡುಗೋಡಿ ಮುಖ್ಯರಸ್ತೆಗಳಲ್ಲಿ ಒತ್ತುವರಿ ತೆರವು ಮಾಡಲಾಗಿದೆ.

ರಾಮಮೂರ್ತಿನಗರ ವಿಭಾಗ ವ್ಯಾಪ್ತಿಯಲ್ಲಿ ರಾಮಮೂರ್ತಿ ನಗರ ಸರ್ಕಲ್ನಿಂದ ಐಟಿಐ ಮೇನ್ ಗೇಟ್, ರಾಮಮೂರ್ತಿನಗರ ಚರ್ಚ್ನಿಂದ ಅಣ್ಣಪ್ಪ ಸರ್ಕಲ್, ಪೋಸ್ಟ್ ಆಫೀಸ್ ರಸ್ತೆ – ಕಲ್ಕೆರೆ ಸಂತೆ ರಸ್ತೆ, ಶೆಲ್ ಪೆಟ್ರೋಲ್ ಬಂಕ್ಯಿಂದ ಎನ್.ಆರ್.ಐ ಬಡಾವಣೆ, ಅಣ್ಣಪ್ಪ ಸರ್ಕಲ್ನಿಂದ ಗ್ಯಾಸ್ ಗೋಡೌನ್ ರಸ್ತೆ, ರಾಮಮೂರ್ತಿನಗರ ಚರ್ಚ್ನಿಂದ ಭೋವಿ ಕಾಲೊನಿ ಶಾಂತಿನಗರ ಲೇಔಟ್, ಕಲ್ಕೆರೆ ಸರ್ಕಲ್ನಿಂದ ಬಿ. ನಾರಾಯಣಪುರ ಮುಖ್ಯರಸ್ತೆವರೆಗೆ ಕಾರ್ಯಾಚರಣೆ ನಡೆಸಲಾಗಿದೆ.

ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಪ್ರತಿಯೊಂದು ವಾರ್ಡ್ ವ್ಯಾಪ್ತಿಯಲ್ಲಿ ತಂಡ ರಚಿಸಲಾಗಿದೆ ಎಂದು ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-4-2022030256

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.