ಬೆಂಗಳೂರು: ಯುವತಿಯನ್ನು ಮದುವೆ ಆಗುವುದಾಗಿ ನಂಬಿಸಿ, ಹಣಕ್ಕೆ ಬೇಡಿಕೆಯಿಟ್ಟು ವಂಚಿಸಿದ್ದ ಆರೋಪದಡಿ ಯುವಕನ ವಿರುದ್ಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಯುವತಿಯ ಕುಟುಂಬಸ್ಥರ ವಿರುದ್ಧ ಯುವಕ ಪ್ರತಿದೂರು ಸಲ್ಲಿಸಿದ್ದಾರೆ.

ಮೈಸೂರಿನ ಪ್ರದೀಪ್ ಸೋಲೊಮನ್ ಹಾಗೂ ಅವರ ತಾಯಿ ಕಲಾವತಿ ವಿರುದ್ಧ ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆ ಆರಂಭಿಸಿದ್ದರು. ಇದೀಗ ಪ್ರದೀಪ್ ಅವರೂ ಇ–ಮೇಲ್ ಮೂಲಕ ಮೈಸೂರು ನಗರ ಪೊಲೀಸ್ ಕಮಿಷನರ್ಗೆ ದೂರು ನೀಡಿದ್ದಾರೆ ಎಂಬುದು ಗೊತ್ತಾಗಿದೆ.

‘ಎಸ್.ಪ್ಯಾಟ್ರಿಕ್ ರಾಜು ಕುಟುಂಬಸ್ಥರು ಮದುವೆ, ನಿಶ್ಚಿತಾರ್ಥದ ಹೆಸರಿನಲ್ಲಿ ಮೋಸ ಮಾಡಿದ್ದಾರೆ. ಅಪರಾಧ ಸಂಚು, ಸುಳ್ಳು ಆರೋಪಗಳು, ಮಾನಹಾನಿ ಮಾಡಿದ್ದಾರೆ. ಜೀವ ಬೆದರಿಕೆ ಹಾಕಿ ಮಾನಸಿಕ ಹಿಂಸೆ ನೀಡಿದ್ದಾರೆ. ಈಗಾಗಲೇ ನನ್ನೊಂದಿಗೆ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿಸಿ, ಮದುವೆಗೆ ಸಂಪೂರ್ಣ ಒಪ್ಪಿಗೆ ನೀಡಿದ್ದರು. ನಾನು ಸುಮಾರು ₹40 ಲಕ್ಷದಿಂದ ₹44 ಲಕ್ಷ ಖರ್ಚು ಮಾಡಿದ್ದೇನೆ’ ಎಂದು ದೂರಿನ ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ.

‘ಉದ್ದೇಶ ಪೂರ್ವಕವಾಗಿ ತಪ್ಪು ಮಾಹಿತಿ ನೀಡಿ, ನನ್ನನ್ನು ನಂಬಿಸಿ ಮೋಸ ಮಾಡಲಾಗಿದೆ. ಕೆಲವು ಮಹತ್ವದ ವಿಚಾರಗಳನ್ನು ಮರೆಮಾಚಿ ನನ್ನೊಂದಿಗೆ ಮದುವೆ ಸಂಬಂಧ ಮುಂದುವರಿಸಲಾಗಿದ್ದು, ಈ ಮೂಲಕ ನನಗೆ ಆರ್ಥಿಕ, ಮಾನಸಿಕ ಹಾನಿ ಉಂಟಾಗಿದೆ’ ಎಂದು ಉಲ್ಲೇಖಿಸಿದ್ದಾರೆ.

‘ಪ್ರದೀಪ್ ಅವರು ಮೈಸೂರು ನಗರ ಪೊಲೀಸ್ ಕಮಿಷನರ್ ಕಚೇರಿಗೆ ದೂರು ನೀಡಿದ್ದಾರೆ ಎಂಬುದು ಗೊತ್ತಾಗಿದೆ. ಆ ದೂರಿನ ಪ್ರತಿ ನಮಗೆ ವರ್ಗಾವಣೆಯಾದರೆ ಪರಿಶೀಲಿಸಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಯುವಕನ ವಿರುದ್ಧ ಆರೋಪ ಏನು?: ಯುವತಿಯ ತಂದೆ ಪ್ಯಾಟ್ರಿಕ್ ರಾಜು ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.

‘ಪ್ಯಾಟ್ರಿಕ್ ರಾಜುಗೆ 25 ವರ್ಷದ ಪುತ್ರಿ ಇದ್ದಾರೆ. ವಿವಾಹಕ್ಕೆ ಸಂಬಂಧಿಸಿದ ವೆಬ್ಸೈಟ್ನಲ್ಲಿ ವರನನ್ನು ಹುಡುಕುತ್ತಿದ್ದರು. ಆ ವೇಳೆ ಪ್ರದೀಪ್ ಸೋಲೊಮನ್ ಹಾಗೂ ಅವರ ತಾಯಿ ಕಲಾವತಿ ಅವರು ಪ್ಯಾಟ್ರಿಕ್ ರಾಜು ಅವರನ್ನು ಸಂಪರ್ಕಿಸಿದ್ದರು. ನ್ಯಾಯಾಧೀಶ ಹುದ್ದೆಗೆ ಪರೀಕ್ಷೆ ಬರೆದಿದ್ದು, ಈ ಬಾರಿ ನ್ಯಾಯಾಧೀಶ ಆಗುತ್ತೇನೆ’ ಎಂಬುದಾಗಿ ಪ್ರದೀಪ್ ಸುಳ್ಳು ಹೇಳಿದ್ದರು. ಮೈಸೂರಿನಲ್ಲಿ ಇರುವ ಆರೋಪಿಯ ಮನೆಗೆ ಪ್ಯಾಟ್ರಿಕ್ ರಾಜು ಕುಟುಂಬಸ್ಥರೊಂದಿಗೆ ಹೋಗಿದ್ದರು. ಆಗ ಮೈಸೂರಿನಲ್ಲಿ ಮೂರು ಎಕರೆ ಜಾಗ, ಒಂದು ಕಾಂಪ್ಲೆಕ್ಸ್ ಇರುವುದಾಗಿ ಪ್ರದೀಪ್ ನಂಬಿಸಿದ್ದರು. ಜೊತೆಗೆ, ಪಿಎಚ್.ಡಿ ಪದವೀಧರ ಎಂಬುದಾಗಿ ಸುಳ್ಳು ಮಾಹಿತಿ ನೀಡಿದ್ದರು’ ಎಂದು ದೂರು ನೀಡಲಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-4-250932226

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.