ಬೆಂಗಳೂರು: ಪಾನಮತ್ತನಾಗಿ ತಾಯಿ ಹಾಗೂ ಸಹೋದರನಿಗೆ ನಿಂದಿಸಿ ಗಲಾಟೆ ಮಾಡುತ್ತಿದ್ದ ಯುವಕನನ್ನು ಸ್ನೇಹಿತನೇ ಕೊಲೆ ಮಾಡಿರುವ ಘಟನೆ ಕನ್ನಮಂಗಲದ ಬಳಿಯ ಗೊರವಿಗೆರೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ಬಿಹಾರದ ಕುನಾಲ್ ಕುಮಾರ್ (22) ಕೊಲೆಯಾದ ಯುವಕ. ಈತನ ಸ್ನೇಹಿತನಾದ ಆರೋಪಿ ನಸ್ರುಲ್ಲಾನನ್ನು ಆವಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕುನಾಲ್, ನಸ್ರುಲ್ಲಾ ಹಾಗೂ ಮತ್ತೊಬ್ಬ ಯುವಕ ಗೊರವಿಗೆರೆಯ ಕೊಠಡಿಯಲ್ಲಿ ಒಟ್ಟಿಗೆ ವಾಸವಾಗಿದ್ದರು. ಈ ಮೂವರು ಕೋಲ್ಡ್ ಸ್ಟೋರೇಜ್ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದರು. ಕುನಾಲ್, 15 ದಿನಗಳ ಹಿಂದೆ ನಸ್ರುಲ್ಲಾನ ತಾಯಿ ಹಾಗೂ ಸಹೋದರನಿಗೆ ವಿನಾಕಾರಣ ಅವಾಚ್ಯವಾಗಿ ನಿಂದಿಸಿದ್ದ. ಈ ಕಾರಣಕ್ಕೆ ನಸ್ರುಲ್ಲಾ, ಕುನಾಲ್ನ ಮೇಲೆ ಕೋಪಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮದ್ಯ ವ್ಯಸನಿಯಾದ ಕುನಾಲ್, ಸೋಮವಾರ ರಾತ್ರಿ ಪಾನಮತ್ತನಾಗಿ ಕೊಠಡಿಗೆ ಬಂದು ನಸ್ರುಲ್ಲಾ ಜತೆ ಜಗಳವಾಡಿದ್ದಾನೆ. ಮೊದಲೇ ಆತನ ಮೇಲೆ ಕೋಪದಲ್ಲಿದ್ದ ನಸ್ರುಲ್ಲಾ, ಕೈಗೆ ಸಿಕ್ಕಿದ ಸುತ್ತಿಗೆಯಿಂದ ಕುನಾಲ್ನ ತಲೆಗೆ ಹೊಡೆದಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಕುಸಿದು ಬಿದ್ದ ಕುನಾಲ್ನನ್ನು ಮತ್ತೊಬ್ಬ ಯುವಕ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ, ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡರು. ಪರಾರಿಯಾಗಿದ್ದ ಆರೋಪಿ ನಸ್ರುಲ್ಲಾನನ್ನು ದಾಬಸ್ಪೇಟೆಯ ರೈಲ್ವೆ ನಿಲ್ದಾಣದ ಬಳಿ ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.