ಕೆ.ಆರ್.ಪುರ: ಎಲ್ಲೆಂದರಲ್ಲಿ ಕಸ ಸುರಿಯಬಾರದು, ಮನೆ ಮುಂದೆ ವಾಹನಗಳು ಬಂದಾಗ ಕಸ ನೀಡುವ ಮೂಲಕ ನೈರ್ಮಲ್ಯ ಕಾಪಾಡಬೇಕು ಎಂದು ಅಪಾರ್ಟ್ಮೆಂಟ್ ನಿವಾಸಿಗಳು ಕ್ಯಾಲಸನಹಳ್ಳಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸಿದರು.

ಪೂರ್ವ ಫಾಮ್ ಬೀಚ್ ಅಪಾರ್ಟ್ಮೆಂಟ್, ಭೂ ಆಭರಣ ಅಪಾರ್ಟ್ ಮೆಂಟ್, ಬಿ.ಹನುಮಂತನಗರ ಬಡಾವಣೆ ಹಾಗೂ ಆಶಾ ಟೌನ್ಶಿಪ್ ನಿವಾಸಿಗಳು ಭಾನುವಾರ ಭಿತ್ತಿಪತ್ರ ಹಿಡಿದು ಅರಿವು ಮೂಡಿಸಿದರು.

‘ಎಲ್ಲುಸ್ ರಸ್ತೆ, ಕ್ಯಾಲಸನಹಳ್ಳಿ ರಸ್ತೆ, ಹನುಮಂತಪ್ಪ ಬಡಾವಣೆ, ಹೆಣ್ಣೂರು ರಸ್ತೆಗಳಲ್ಲಿ ವಾಹನಗಳಲ್ಲಿ ಬಂದು ರಸ್ತೆ ಬದಿಗೆ ಕಸ ಎಸೆಯಲಾಗುತ್ತಿದೆ. ಅಂಗಡಿ, ಬೇಕರಿ, ಮಾಂಸದ ತ್ಯಾಜ್ಯವನ್ನು ರಾತ್ರೋರಾತ್ರಿ ಸುರಿಯುತ್ತಿದ್ದಾರೆ. ಪೌರಕಾರ್ಮಿಕರು ನಿತ್ಯ ಸ್ವಚ್ಛಗೊಳಿಸುವಂತಾ ಗಿದೆ’ ಎಂದು ಸ್ಥಳೀಯ ಎ.ರಾಘವೇಂದ್ರ ಆಕ್ರೋಶ ಹೊರಹಾಕಿದರು.

‘ಎಲ್ಲೆಂದರಲ್ಲಿ ಕಸ ಎಸೆಯದೆ. ಒಣ, ಹಸಿ ಕಸ ಬೇರ್ಪಡಿಸಿ ಕಸದ ವಾಹನಗಳಿಗೆ ನೀಡಿ ಸ್ವಚ್ಛತೆಗೆ ಆದ್ಯತೆ ನೀಡಬೇಕು’ ಎಂದು ಬಿ.ಹನುಮಂತನಗರ ಬಡಾವಣೆ ನಿವಾಸಿ ಭಾರತಿ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-4-1685589188

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.