ಬೆಂಗಳೂರು: ನಗರದ ಲಿಂಗರಾಜಪುರದಲ್ಲಿ ಇರುವ ವಿನಯ್ ಎಂಟರ್ಪ್ರೈಸಸ್ ಮುಂದೆ ಮಂಗಳವಾರ ಬೆಳಿಗ್ಗೆ ಗೃಹಬಳಕೆಯ ಸಿಲಿಂಡರ್ಗಾಗಿ ನೂರಾರು ಜನರು ಸಾಲಿನಲ್ಲಿ ನಿಂತು ಪರಡಾಡಿದರು.

‘ಬುಕ್ಕಿಂಗ್ ಮಾಡಿ 15 ದಿನವಾದರೂ ಮನೆಗೆ ಸಿಲಿಂಡರ್ ಪೂರೈಕೆ ಆಗಿಲ್ಲ. ಫೋನ್ ಮಾಡಿದರೆ ಇಲ್ಲಿಗೇ ಬಂದು ತೆಗೆದುಕೊಂಡು ಹೋಗಿ ಎನ್ನುತ್ತಿದ್ದಾರೆ’ ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದರು.

‘ಈ ತಿಂಗಳ 10ರಂದು ಬುಕ್ಕಿಂಗ್ ಮಾಡಿದ್ದೆ. ಇದುವರೆಗೂ ಸಿಲಿಂಡರ್ ಬಂದಿಲ್ಲ. ಎರಡೂ ಸಿಲಿಂಡರ್ಗಳು ಖಾಲಿ ಆಗಿವೆ. ಇವತ್ತು ಕೆಲಸ ಬಿಟ್ಟು ಸಾಲಿನಲ್ಲಿ ನಿಂತಿದ್ದೇನೆ’ ಎಂದು ಮಹಿಳೆಯೊಬ್ಬರು ಬೇಸರ ವ್ಯಕ್ತಪಡಿಸಿದರು.

‘5000 ಜನರು ಬುಕ್ಕಿಂಗ್ ಮಾಡಿದ್ದಾರೆ. ದಿನಕ್ಕೆ 300–400 ಸಿಲಿಂಡರ್ ಅಷ್ಟೇ ಪೂರೈಕೆಯಾಗುತ್ತಿದೆ. ಮಂಗಳವಾರ 2 ಲೋಡ್ ಬಂದಿದೆ. ಆದರೆ ಇದು ಸಾಕಾಗುವುದಿಲ್ಲ’ ಎಂದು ಏಜೆನ್ಸಿಯ ಮಾಲೀಕರು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-4-923940991

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.