ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ (ಜಿಬಿಜಿಎ) ಜಾರಿಯಾದ ನಂತರ, ಮೊದಲ ಬಾರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ 19 ಸಹಾಯಕ ಎಂಜಿನಿಯರ್ ಹಾಗೂ ಪರಿಸರ ಎಂಜಿನಿಯರ್ಗಳನ್ನು ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ವರ್ಗಾವಣೆ ಮಾಡಲಾಗಿದೆ.

ರಾಜ್ಯದಲ್ಲಿರುವ 325 ನಗರ ಸ್ಥಳೀಯ ಸಂಸ್ಥೆಗಳಿಗೆ ಮಂಜೂರಾಗಿರುವ ಕಾಯಂ ಹುದ್ದೆಗಳಲ್ಲಿ ಶೇ 40ರಷ್ಟು ಹುದ್ದೆಗಳು ಖಾಲಿ ಇವೆ. ನೇಮಕಾತಿ ಪ್ರಕ್ರಿಯೆ ವಿಳಂಬ ವಾಗುತ್ತಿರುವುದರಿಂದ ಆಡಳಿತಾತ್ಮಕ ಹಾಗೂ ಅಭಿವೃದ್ಧಿಕೆಲಸಗಳು ಕುಂಠಿತವಾಗುತ್ತಿವೆ. ಅಲ್ಲದೆ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನಿರ್ದೇಶನದಂತೆ ಖಾಲಿ ಇರುವ ಪರಿಸರ ಎಂಜಿನಿಯರ್ಗಳ ಹುದ್ದೆಗಳನ್ನು ಭರ್ತಿಗೊಳಿಸಬೇಕಾಗಿದ್ದು, ವರ್ಗಾವಣೆ ಮಾಡಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ.

ಜಿಬಿಎಯಲ್ಲಿದ್ದ ಪರಿಸರ ವಿಭಾಗದ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ಗಳಾದ ಸಂತೋಷ್ಕುಮಾರ್ ಕಡ್ಡಿ, ಜೆ. ಚಿತ್ರಾ, ಎನ್.ಕೆ. ಸಪ್ನಾ, ಬಿ.ಆರ್. ಸೌಮ್ಯಾ, ಆರ್. ವೆಂಕಟೇಶ್, ಜೆ.ಕೆ. ರವಿಕುಮಾರ್, ಎಂ.ಎಸ್. ಮಮತಾ, ಎಂ. ನೇತ್ರಾವತಿ ಅವರನ್ನು ಬಾಗಲಕೋಟೆ, ಕೋಲಾರ, ಚಿತ್ರದುರ್ಗ, ಕೊಡಗು, ಬಳ್ಳಾರಿ, ಕೊಪ್ಪಳ, ದಕ್ಷಿಣ ಕನ್ನಡ, ಯಾದಗಿರಿ ಜಿಲ್ಲೆಯ ವಿವಿಧ ನಗರಸಭೆಗಳಿಗೆ ವರ್ಗಾಯಿಸಲಾಗಿದೆ. ಪರಿಸರ ಎಂಜಿನಿಯರ್ಗಳಾದ ಜ್ಯೋತಿ ಜಿ. ಚೌಳರ್ಕರ್, ಎಂ.ಎಸ್. ರೇಖಾ, ಜಿ.ಬಿ. ಪೂರ್ಣಿಮಾ, ಶ್ರೀನಿಧಿ, ಎಲ್. ತೀರ್ಥ ಪ್ರಸಾದ್, ಡಿ. ಲೋಹಿತ್, ಟಿ.ಜೆ. ಶಶಿಕಲಾ, ಎಂ.ಎನ್. ಶೋಭಾ, ಎಂ.ಎಂ. ಅಭಿಲಾಷ, ಶಿಲ್ಪಶ್ರೀ ಅವರನ್ನು ಮಡಿಕೇರಿ, ಕುಶಾಲನಗರ, ಸಕಲೇಶಪುರ, ಕುಮಟಾ, ಮುದ್ದೇಬಿಹಾಳ, ಬಸವನಬಾಗೇವಾಡಿ, ಅಂಕೋಲಾ, ಹೂವಿನಹಡಗಲಿ, ಕಮಲಾಪುರ, ಕಂಪ್ಲಿಗೆ ವರ್ಗಾವಣೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.