ಬೆಂಗಳೂರು: ಚಿನ್ನದ ಮೇಲೆ ಕಡಿಮೆ ಬಡ್ಡಿಗೆ ಸಾಲ ನೀಡುವುದಾಗಿ ಹೇಳಿ ಮಹಿಳೆಗೆ ವಂಚಿಸಿದ್ದ ಚಿನ್ನಾಭರಣ ಅಂಗಡಿ ಮಾಲೀಕರೊಬ್ಬರನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ

ರಾಘವೇಂದ್ರ ಚಿನ್ನಾಭರಣ ಅಂಗಡಿ ಮಾಲೀಕ ನರಸಿಂಹ ಮೂರ್ತಿ ಬಂಧಿತ.

ಸ್ಪಾ ಹಾಗೂ ಸಲೂನ್ ಮಾಲೀಕರಾಗಿರುವ ಅಲ್ಲಾಳಸಂದ್ರ ಜಿ.ಕೆ.ವಿ.ಕೆ ನಗರದ ನಿವಾಸಿ ಸುವರ್ಣಲತಾ ಎಂಬುವವರು ನೀಡಿದ ದೂರಿನ ಮೇಲೆ ಚಿನ್ನದ ಅಂಗಡಿ ಮಾಲೀಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಚಿಕ್ಕಬಾಣಾವರದ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ನಲ್ಲಿ ಚಿನ್ನವನ್ನು ಅಡಮಾನವಾಗಿ ಇಟ್ಟುಕೊಂಡು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು ಎಂಬುದಾಗಿ ನಂಬಿಸಿದ್ದರು. ವಿವಿಧೆಡೆ ಅಡಮಾನ ಇಟ್ಟಿದ್ದ ಚಿನ್ನವನ್ನು ಮಹಿಳೆ ಬಿಡಿಸಿಕೊಂಡು ನರಸಿಂಹ ಮೂರ್ತಿಗೆ ಕೊಟ್ಟಿದ್ದರು. ಅದಾದ ಮೇಲೆ ಚಿನ್ನವನ್ನು ವಾಪಸ್ ಕೊಡದೆ ವಂಚಿಸಿದ್ದಾರೆ ಎಂದು ಮಹಿಳೆ ದೂರು ನೀಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-4-411534482

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.