ಬೆಂಗಳೂರು: ಗುಜರಿ ವಸ್ತುಗಳ ಹೆಸರಿನಲ್ಲಿ ₹2,384 ಕೋಟಿ ಮೊತ್ತದ ಖೊಟ್ಟಿ ವಹಿವಾಟು ನಡೆಸಿ, ರಾಜ್ಯ ಸರ್ಕಾರಕ್ಕೆ ₹418 ಕೋಟಿ ಜಿಎಸ್ಟಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವಂಚಿಸಿದ್ದ ಜಾಲವನ್ನು ಪತ್ತೆ ಮಾಡಿರುವ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ.

‘ನಗರದ ನಾಯಂಡಹಳ್ಳಿ ವ್ಯಾಪ್ತಿಯಲ್ಲಿ ನೋಂದಣಿಯಾಗಿದ್ದ ಕೆಲವು ಗುಜರಿ ವಸ್ತು ನಿರ್ವಹಣಾ ಕಂಪನಿಗಳು ಪದೇ ಪದೇ ನಕಲಿ ಜಿಎಸ್ಟಿ ಇನ್ವಾಯ್ಸ್ ಸೃಷ್ಟಿಸಿ, ಐಟಿಸಿ ವಂಚಿಸು ತ್ತಿದ್ದವು. ಈ ಬಗ್ಗೆ ವಿವರಣೆ ಪಡೆಯಲು ನೋಟಿಸ್ ನೀಡಲು ಹೋದಾಗ ನೋಂದಾಯಿತ ವಿಳಾಸದಲ್ಲಿ ಅಂತಹ ಕಂಪನಿಗಳೇ ಇಲ್ಲ ಎಂಬುದು ಪತ್ತೆಯಾಗುತ್ತಿದ್ದವು’ ಎಂದು ವಾಣಿಜ್ಯ ಇಲಾಖೆ ಮೂಲಗಳು ತಿಳಿಸಿವೆ.

‘ಈ ಕಂಪನಿಗಳ ವಹಿವಾಟುಗಳ ವಿವರ ಕಲೆ ಹಾಕಲು ವಿಶೇಷ ತಂಡವನ್ನು ರಚಿಸಲಾಗಿತ್ತು. ನಾಯಂಡಹಳ್ಳಿ ವ್ಯಾಪ್ತಿಯಲ್ಲಿ ಇಂತಹ ವಹಿವಾಟು ನಡೆಸಿದ್ದ ಮತ್ತು ನಡೆಸುತ್ತಿದ್ದ ಸುಮಾರು 127 ಕಂಪನಿಗಳನ್ನು ಒಂದೇ ಜಾಲವು ನಿರ್ವಹಣೆ ಮಾಡುತ್ತಿದೆ ಎಂಬುದು ಪತ್ತೆಯಾಯಿತು’ ಎಂದು ಮೂಲಗಳು ಮಾಹಿತಿ ನೀಡಿವೆ.

‘ನಾಯಂಡಹಳ್ಳಿಯಲ್ಲಿ ‘ಎಸ್ಕೆಎಸ್ ಟ್ರೇಡರ್ಸ್’ ಎಂಬ ಗುಜರಿ ವಸ್ತುಗಳ ಕಂಪನಿ ನಡೆಸುತ್ತಿರುವ ಸಲೀಮುಲ್ಲಾ ಬೇಗ್ (49 ವರ್ಷ) ಎಂಬವರು ಇದೇ ರೀತಿ ಸುಮಾರು 72 ನಕಲಿ ಕಂಪನಿಗಳ ಜತೆ ಸಂಶಯಾಸ್ಪದ ಖೊಟ್ಟಿ ವಹಿವಾಟು ನಡೆಸಿದ್ದಾರೆ. ಈ ನಕಲಿ ಕಂಪನಿಗಳಿಂದ ₹2,172 ಕೋಟಿ ಮೊತ್ತದ ಟಂಗ್ಸ್ಟನ್ ಕಾರ್ಬೈಡ್ ತ್ಯಾಜ್ಯ, ಇ–ತ್ಯಾಜ್ಯ ಮತ್ತು ಇತರ ಕೆಲವು ಹಾಳಾದ ಯಂತ್ರೋಪಕರಣಗಳನ್ನು ಖರೀದಿಸಿದ್ದೇವೆ ಎಂದು ಎಸ್ಕೆಎಸ್ ಟ್ರೇಡರ್ಸ್ ಇನ್ವಾಯ್ಸ್ಗಳನ್ನು ಸೃಷ್ಟಿಸಿದೆ. ಆದರೆ, ಆ 72 ಕಂಪನಿಗಳೂ ಅಸ್ತಿತ್ವದಲ್ಲಿ ಇಲ್ಲ’ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಪ್ರಕಟಣೆ ತಿಳಿಸಿದೆ.

‘₹2,172 ಕೋಟಿ ಮೊತ್ತದ ಖೊಟ್ಟಿ ವಹಿವಾಟಿನ ಮೂಲಕ ಎಸ್ಕೆಎಸ್ ಟ್ರೇಡರ್ಸ್ ಹೆಸರಿಗೆ ₹380 ಕೋಟಿ ಮೊತ್ತದ ಐಟಿಸಿ ಪಡೆಯಲಾಗಿದೆ. ಇದೇ ರೀತಿ, ಹಸನ್ ಬೇಗ್ (35 ವರ್ಷ), ಮಾಲೀಕತ್ವದ ‘ಕೆಎಚ್ ಇ–ವೇಸ್ಟ್ ರಿಸೈಕ್ಲರ್’ ಕಂಪನಿಯು 55 ನಕಲಿ ಕಂಪನಿಗಳ ಜತೆ ₹212 ಕೋಟಿ ಮೊತ್ತದ ಸಂಶಯಾಸ್ಪದ ವಹಿವಾಟಿನ ಮೂಲಕ ₹38 ಕೋಟಿ ಮೊತ್ತದ ಐಟಿಸಿ ಪಡೆದಿದೆ. ಸಲೀಮುಲ್ಲಾ ಬೇಗ್ ಮತ್ತು ಹಸನ್ ಬೇಗ್ ಒಟ್ಟಾಗಿ ಈ ಜಾಲವನ್ನು ನಡೆಸುತ್ತಿದ್ದರು. ತಾವು ಪಡೆದುಕೊಂಡ ಐಟಿಸಿಯನ್ನು ಕಮಿಷನ್ ಪಡೆದು ಬೇರೆ ಕಂಪನಿಗಳಿಗೆ ವರ್ಗಾಯಿಸುತ್ತಿದ್ದರು ಎಂದು ವಿವರಿಸಿದೆ.

‘ಸುದೀರ್ಘ ತನಿಖೆಯ ನಂತರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇವರಿಂದ ಐಟಿಸಿ ವರ್ಗಾವಣೆ ಮಾಡಿಸಿಕೊಂಡವರಲ್ಲಿ ರಾಜ್ಯದ ಮತ್ತು ಹೊರರಾಜ್ಯದ ಕಂಪನಿಗಳೂ ಇವೆ. ತನಿಖೆಯನ್ನು ಮುಂದುವರಿಸಲಾಗಿದ್ದು, ರಾಜ್ಯ ಸರ್ಕಾರಕ್ಕೆ ವಂಚಿಸಿರುವ ಐಟಿಸಿ ಮೊತ್ತವನ್ನು ವಸೂಲಿ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿವೆ.

ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ (ಜಾರಿ) ಕನಿಷ್ಕ, ಹೆಚ್ಚುವರಿ ಆಯುಕ್ತೆ (ಸೇವಾ ವಿಶ್ಲೇಷಣೆ ಮತ್ತು ಗುಪ್ತಚರ ವಿಭಾಗ) ಅಪರ್ಣಾ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ಜಂಟಿ ತಂಡವು ಈ ತನಿಖೆಯನ್ನು ನಡೆಸುತ್ತಿದೆ.

ವಂಚನೆಯ ಪರಿ

ಆರೋಪಿಗಳು ಯಾರದ್ದೋ ಆಧಾರ್ ಮತ್ತು ಪ್ಯಾನ್ ವಿವರ ಬಳಸಿಕೊಂಡು, ಅಂತಹವರ ಹೆಸರಿನಲ್ಲಿ ಕಂಪನಿ ಹಾಗೂ ಜಿಎಸ್ಟಿ ನೋಂದಣಿ ಮಾಡಿಸುತ್ತಿದ್ದರು

ನಕಲಿ ಬಾಡಿಗೆ ಕರಾರು ಪತ್ರ, ಸುಳ್ಳು ವಿಳಾಸ, ನಕಲಿ ನೋಟರಿ ಮುದ್ರೆಗಳನ್ನು ಸೃಷ್ಟಿಸಿ ವಹಿವಾಟು ನಡೆಸುತ್ತಿದ್ದರು. ಇವೇ ದಾಖಲೆಗಳನ್ನು ಬಳಸಿಕೊಂಡು ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆಗಳನ್ನೂ ತೆರೆಯುತ್ತಿದ್ದರು

ಹೀಗೆ ಅಪರಿಚಿತರ ಹೆಸರಿನಲ್ಲಿ ನೋಂದಣಿ ಮಾಡಲಾದ ಕಂಪನಿಯಿಂದ ತಮ್ಮ ಕಂಪನಿಗಳು (ಎಸ್ಕೆಎಸ್ ಟ್ರೇಡರ್ಸ್ ಮತ್ತು ಕೆಎಚ್ ಇ–ವೇಸ್ಟ್ ರಿಸೈಕ್ಲರ್) ಗುಜರಿ ವಸ್ತುಗಳನ್ನು ಖರೀದಿಸಿವೆ ಎಂದು ನಕಲಿ ಇನ್ವಾಯ್ಸ್ ಸೃಷ್ಟಿಸುತ್ತಿದ್ದರು

ಗುಜರಿ ವಸ್ತುಗಳನ್ನು ಮತ್ತು ಮರುಬಳಕೆ ವಸ್ತುಗಳನ್ನು ಬೇರೆ ಕಂಪನಿಗಳಿಗೆ ಮಾರಾಟ ಮಾಡಿದಂತೆ ಮತ್ತೊಂದು ಇನ್ವಾಯ್ಸ್ ಸೃಷ್ಟಿಸುತ್ತಿದ್ದರು.
ಆ ಇನ್ವಾಯ್ಸ್ಗಳ ಆಧಾರದಲ್ಲಿ ಜಿಎಸ್ಟಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಪಡೆದುಕೊಂಡು, ಅವುಗಳನ್ನು ಇತರರಿಗೆ ವರ್ಗಾಯಿಸುತ್ತಿದ್ದರು

ಜಿಎಸ್ಟಿ ಐಟಿಸಿ ನೀಡಲಾಗಿರುವ ಪ್ರಕರಣಗಳಲ್ಲಿ, ಮೂಲ ಕಂಪನಿಯು ಜಿಎಸ್ಟಿ ಪಾವತಿಸದೇ ಇರುವುದು ಪತ್ತೆಯಾಗುತ್ತಿತ್ತು. ಅಂತಹ ಕಂಪನಿಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ನೀಡುತ್ತಿದ್ದಂತೆಯೇ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುತ್ತಿದ್ದರು. ವಾಸ್ತವದಲ್ಲಿ ಆ ಕಂಪನಿಗಳೇ ಇಲ್ಲದಿದ್ದ ಕಾರಣ ಜಿಎಸ್ಟಿ ವಸೂಲಿ ಸಾಧ್ಯವಾಗುತ್ತಿರಲಿಲ್ಲ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-4-1072025751

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.